ಬ್ರೇಕಿಂಗ್ ನ್ಯೂಸ್
23-04-25 02:51 pm Bangalore Correspondent ಕರ್ನಾಟಕ
ಬೆಂಗಳೂರು, ಏ23: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ಧಾರೆ. ಸಾವನ್ನಪ್ಪಿದವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪೈಶಾಚಿಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಅವರಲ್ಲದೆ, ಮತ್ತಿಕೆರೆಯಲ್ಲಿ ವಾಸವಾಗಿದ್ದ ಭರತ್ ಭೂಷಣ್ (41) ಹಾಗೂ ಬೆಂಗಳೂರಿನ ಮಧುಸೂದನ್ ಸೋಮಿಶೆಟ್ಟಿ ಎಂಬವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ವಾರ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು:
ಭರತ್ ಭೂಷಣ್ ಅವರು ಕಳೆದ ಒಂದು ವಾರ ಹಿಂದಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮೂರು ವರ್ಷದ ಮಗು ಹಾಗೂ ಪತ್ನಿ ಸುಜಾತ ಜೊತೆ ಕಾಶ್ಮೀರಕ್ಕೆ ತೆರಳಿದ್ದಾಗ ಈ ದುರಂತ ನಡೆದಿದೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಭರತ್, ಪ್ರಸ್ತುತ ಭದ್ರಪ್ಪ ಲೇಔಟ್ನಲ್ಲಿ ಡಯಾಗೋಸ್ಟಿಕ್ ಸೆಂಟರ್ ಮಾಲೀಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಎಕ್ಸ್ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.
''ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಭರತ್ ಭೂಷಣ್ ಪತ್ನಿ ಸುಜಾತ ಅವರೊಂದಿಗೆ ಮಾತನಾಡಿದ್ದೇನೆ. ಮೃತದೇಹವನ್ನು ನಗರಕ್ಕೆ ಕರೆತರಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮೃತ ವ್ಯಕ್ತಿಗಳ ಕುಟುಂಬವು ಸುರಕ್ಷಿತವಾಗಿದ್ದಾರೆ. ಆದಷ್ಟು ಬೇಗ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು'' ಎಂದಿದ್ದಾರೆ.
ಉದ್ಯಮಿ ಮಂಜುನಾಥ್ ರಾವ್ ಸಾವು:
ಉಗ್ರರ ದಾಳಿಯಲ್ಲಿ ಶಿವಮೊಗ್ಗದಿಂದ ಕಾಶ್ಮೀರಕ್ಕೆ ಕುಟುಂಬ ಸಮೇತ ತೆರಳಿದ್ದ ಉದ್ಯಮಿ ಮಂಜುನಾಥ್ ರಾವ್ ಅವರು ಮೃತಪಟ್ಟಿದ್ದಾರೆ. ಅವರು ಏಪ್ರಿಲ್ 19ರಂದು ಅವರು ಪತ್ನಿ ಪಲ್ಲವಿ ಮತ್ತು ಪುತ್ರನ ಜೊತೆಗೆ ಪ್ರವಾಸ ಕೈಗೊಂಡಿದ್ದರು. ಇವರ ಜೊತೆ ಸಾಗರದ ತಂಡವೂ ಇತ್ತು.
ಶಿವಮೊಗ್ಗದ ವಿಜಯನಗರದ ನಿವಾಸಿಯಾಗಿರುವ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಇವರ ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್ಕೋಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಅಭಿಜಯ ಅವರು ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆಯನ್ನು ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸದ ಯೋಜನೆ ಹಾಕಿದ್ದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ.
ಕುಟುಂಬವು ಕಾಶ್ಮೀರದ ಪಹಲ್ಗಾಂವ್ನ ಮಾರುಕಟ್ಟೆಗೆ ಹೋದಾಗ ಉಗ್ರನು ಮಂಜುನಾಥ್ ಅವರ ಹೆಸರು ಕೇಳಿದ್ದಾನೆ. ಬಳಿಕ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಜೊತೆಗೆ, ಪತ್ನಿ ಪಲ್ಲವಿ ಹಾಗೂ ಮಗ ಅಭಿಜಯ ಇದ್ದರು. ಇಬ್ಬರನ್ನು ಬಿಟ್ಟು ಆತ ಉದ್ಯಮಿ ಮೇಲೆ ಗುಂಡಿನ ದಾಳಿ ಮಾಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಕ್ಸಿಜನ್ ಸಪೋರ್ಟ್ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ ;
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮೃತಪಟ್ಟ ಭರತ್ ಭೂಷಣ್ ಬಗ್ಗೆ ಮಾತಾಡಿದ ನಿವೃತ್ತ ಪ್ರೊಫೆಸರ್ ನಾಗರಾಜ್, ಭೂಷಣ್ ನಮ್ಮ ಹುಡುಗ, ಎಲ್ಲರ ಜೊತೆ ಸ್ನೇಹದಿಂದ ಮಾತಾಡಿ ಖುಷಿಯಾಗಿ ಬೆಳೆದಿದ್ದ. ಇನ್ನಷ್ಟು ಸಾಧನೆ ಮಾಡಬೇಕಿದ್ದ ಹುಡುಗ ದುರಂತ ಅಂತ್ಯ ಕಂಡಿದ್ದಾನೆ. ಹಿಂದೂ.. ಹಿಂದೂ ಅಂಥ ಕೇಳಿ ಹೊಡೆದಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಮುಸ್ಲಿಂರನ್ನು ಓಲೈಕೆ ಮಾಡ್ತಿರೋದೇ ಕಾರಣ. ಸರ್ಕಾರ ಮಾಡೋದಕ್ಕೆ ಆಗದ ಕೆಲಸ ನಾವೇ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿವಿ ನೋಡಿ ವಿಚಾರ ನಮಗೆ ಗೊತ್ತಾಗಿದೆ. ಇದನ್ನು ನೋಡಿ ನಮಗೆ ನಂಬೋಲು ಸಾಧ್ಯ ಆಗಿರಲಿಲ್ಲ. ಭೂಷಣ್ ಅವರ ಸಹೋದರ ಪ್ರೀತಂ ಕಾಶ್ಮೀರಕ್ಕೆ ಹೋಗಿದ್ರು. ಅವರ ಕಾಂಟಾಕ್ಟ್ ಮಾಡಿ ಮಾಹಿತಿ ಪಡೆಯುತ್ತಿದ್ದೇವೆ. ಅವರ ತಂದೆಗೆ ಮಾಹಿತಿ ಗೊತ್ತಾಗಿದೆ, ತಾಯಿ ಆಕ್ಸಿಜನ್ನಲ್ಲಿ ಇದ್ದಾರೆ. ಹಿಂದೂ ಆಗಿದ್ದೇ ತಪ್ಪಾ ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನು ಬೇರೆ ದಾರಿ ಇಲ್ಲ. ಯುವಕರೇ ಎದ್ದು ನಿಂತುಕೊಳ್ಳಬೇಕು ಎಂದಿದ್ದಾರೆ.
ಮೃತ ಭರತ್ ಭೂಷನ್ ಅವರು ಜಾಲಹಳ್ಳಿಯ ಸುಂದರ್ನಗರದಲ್ಲಿ ವಾಸವಾಗಿದ್ದರು. ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾಗಿರೋ ಭರತ್ ಭೂಷಣ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಭರತ್ ಅವರು ಸಾಫ್ಟ್ ವೇರ್ ಆಗಿದ್ದರು. ಅಲ್ಲದೇ ಡಯಾಗ್ನೋಸ್ಟಿಕ್ ಸೆಂಟರ್ ಕೂಡ ನಡೆಸುತ್ತಿದ್ದರು. ಹೀಗೆ ತನ್ನ ಹೆಂಡತಿ ಸುಜಾತ ಮತ್ತು ಮಗನ ಜೊತೆಗೆ ಕಾಶ್ಮೀರಕ್ಕೆ ಹೋಗಿದ್ದರು. ಇದೇ ವೇಳೆ ಭರತ್ ಭೂಷನ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 3 ವರ್ಷದ ಮಗು ಮತ್ತು ಸುಜಾತ ಪ್ರಣಾಪಾಯದಿಂದ ಪಾರಾಗಿದ್ದಾರೆ.
ದೇಹ ನೋಡುತ್ತಲೇ ಕುಸಿದುಬಿದ್ದ ಪತ್ನಿ ಸುಜಾತಾ ;
ಶವಪೆಟ್ಟಿಗೆಗಳನ್ನು ಇಟ್ಟಿರುವ ಸ್ಥಳಕ್ಕೆ ಸುಜಾತಾ ಕನ್ನಡಿಗರ ನೆರವಿಗೆ ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಅಳುತ್ತಾ, ಅಸ್ಥಿರ ಹೆಜ್ಜೆಗಳನ್ನು ಹಾಕುತ್ತಾ ಬರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸುಜಾತಾ ಹಿಂದೆ ವ್ಯಕ್ತಿಯೊಬ್ಬರು ಅವರ ಮಗುವನ್ನು ಎತ್ತಿಕೊಂಡು ಬರುತ್ತಿದ್ದಾರೆ. ಶವಪೆಟ್ಟಿಗೆಯಲ್ಲಿ ಪತಿ ದೇಹವನ್ನು ನೋಡಿದ ಕೂಡಲೇ ಸುಜಾತಾ ಕುಸಿದುಬಿದ್ದರು.
Pahalgam, Jammu and Kashmir – A heart-wrenching incident unfolded in Pahalgam when a terror attack reportedly took the lives of three individuals from Karnataka. Among the victims was Bharath Bhushan, whose untimely death has left his family in profound grief. His wife, overwhelmed with sorrow, collapsed upon seeing his body.
26-08-25 04:48 pm
Bangalore Correspondent
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm