ಬ್ರೇಕಿಂಗ್ ನ್ಯೂಸ್
11-04-25 03:45 pm Bangalore Correspondent ಕರ್ನಾಟಕ
ಬೆಂಗಳೂರು, ಎ.11 : ಬೆಂಗಳೂರಿನ ಹೈಕೋರ್ಟ್ ಕಟ್ಟಡದಲ್ಲಿ ಜನ್ಮದಿನದ ನೆಪದಲ್ಲಿ ಮೋಜು - ಮಸ್ತಿ ಮಾಡಿದ ಆರೋಪದಲ್ಲಿ ಐವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹೈಕೋರ್ಟ್ ಕಟ್ಟಡದ ನೆಲಮಾಳಿಗೆಯ ವಿಶೇಷ ಕಟ್ಟಡದಲ್ಲಿ ಸಿಸಿ ಕ್ಯಾಮರಾ ಆಫ್ ಮಾಡಿಕೊಂಡು ಮೋಜು - ಮಸ್ತಿ ಮಾಡಿದ್ದು ಸಹಾಯಕ ಎಂಜಿನಿಯರ್ ಎ.ಟಿ. ಮೀನಾ ಸೇರಿ ನಾಲ್ವರು ಸಿಬ್ಬಂದಿಯನ್ನು ಲೋಕೋಪಯೋಗಿ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ.
ಜನ್ಮದಿನ ಆಚರಿಸಿಕೊಂಡ ಸಹಾಯಕ ಎಂಜಿನಿಯರ್ ಎ.ಟಿ. ಮೀನಾ ಹಾಗೂ ಆ ಸಂದರ್ಭದಲ್ಲಿ ಅವರ ಜತೆ ಪಾಲ್ಗೊಂಡಿದ್ದ ಸಿಬ್ಬಂದಿ ಸಿಸಿ ಕ್ಯಾಮೆರಾ ಆಫ್ ಮಾಡಿಸಿರುವುದು ಭದ್ರತೆ ಮತ್ತು ಕರ್ತವ್ಯ ಲೋಪ ಎಸಗಿದ ಕೆಲಸವಾಗಿದೆ. ಕಚೇರಿಯ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಜಿ.ಎಚ್. ಚಿಕ್ಕೇಗೌಡ, ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ನವೀನ್ ಮತ್ತು ಅಮೀನ್ ಎಸ್. ಅನ್ನದಿನ್ನಿ ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ. ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು - 2012ರ ನಿಯಮ 3(1) (1ರಿಂದ 4) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುತ್ತಾರೆ. ಹಾಗಾಗಿ, ಅವರೆಲ್ಲರನ್ನೂ ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರದಿಂದ ಅಧಿಸೂಚಿಸಲ್ಪಟ್ಟ ಪ್ರಮುಖ ಹಾಗೂ ಗಣ್ಯ ವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಸರಕಾರಿ ಕಚೇರಿ ಹಾಗೂ ಆಚರಿಸಲು ಕಾನೂನುಬದ್ಧ ಅವಕಾಶವಿದೆ. ಉಳಿದ ಜಯಂತಿ, ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಈ ಬಗ್ಗೆ ದೂರಿನ ಕುರಿತಂತೆ ವಿಚಾರಣೆ ನಡೆಸಿದ್ದ ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಎಂಜಿನಿಯರ್ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
Four assistant engineers and a first division assistant with Public Works Department (PWD) were suspended for organising a birthday party after switching off CCTV cameras at the special buildings division of PWD at the Karnataka high court, a designated high-security building.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm