Yatnal, Muslim, Prophet Muhammad Paigambar: ಪೈಗಂಬರ್ ಬಗ್ಗೆ ಅವಹೇಳನ ಮಾತು ; ಯತ್ನಾಳ್ ತಲೆ ಕಡಿಯಲು ಸಿದ್ಧರಾಗಿ, 15ರಂದು ಯತ್ನಾಳ್ ದಿ ಎಂಡ್ ಎಂದು ಆಡಿಯೋ ಬಿಟ್ಟ ಮುಸ್ಲಿಂ ಯುವಕ, ಪ್ರಚೋದನಕಾರಿ ಆಡಿಯೋ ವೈರಲ್ 

11-04-25 03:28 pm       HK News Desk   ಕರ್ನಾಟಕ

ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತಾಗಿ ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಚಾರದಲ್ಲಿ ಮುಸ್ಲಿಂ ಯುವಕನೊಬ್ಬ ಆಡಿಯೋ ಹರಿಯಬಿಟ್ಟಿದ್ದು ಯತ್ನಾಳ್ ಅವರನ್ನು ಎ.15ರಂದು ತಲೆ ಕಡಿಯುವುದಾಗಿ ಹೇಳಿದ್ದಾನೆ. 

ವಿಜಯಪುರ, ಎ.11 : ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತಾಗಿ ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಚಾರದಲ್ಲಿ ಮುಸ್ಲಿಂ ಯುವಕನೊಬ್ಬ ಆಡಿಯೋ ಹರಿಯಬಿಟ್ಟಿದ್ದು ಯತ್ನಾಳ್ ಅವರನ್ನು ಎ.15ರಂದು ತಲೆ ಕಡಿಯುವುದಾಗಿ ಹೇಳಿದ್ದಾನೆ. 

ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಅವರು ಪೈಗಂಬರ್ ಬಗ್ಗೆ ಮಾತನಾಡಿದ್ದರು. ಇದೀಗ ಯತ್ನಾಳ್ ವಿರುದ್ಧ ನೀಡಿರುವ ಆಡಿಯೋ ವೈರಲ್ ಆಗಿದೆ. 

ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಎಲ್ಲರೂ ಒಗ್ಗಟ್ಟಾಗಿ. ಎ.15 ರಂದು ವಿಜಯಪುರದಲ್ಲಿ ಸಭೆ ಆಯೋಜನೆ ಮಾಡಿದ್ದೇವೆ ಎಂದು ಆಡಿಯೋದಲ್ಲಿ ಕರೆ ನೀಡಲಾಗಿದ್ದು ಯತ್ನಾಳ್ ಮನೆಗೆ ರ್ಯಾಲಿ ಹೊರಡಲು ಪ್ರಚೋದನೆ ನೀಡಲಾಗಿದೆ. ಯತ್ನಾಳ್ ವಿರುದ್ಧ ಪ್ರಯೋಚದನಕಾರಿ ಮಾತನಾಡಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಅಂಬೇಡ್ಕರ್ ಸರ್ಕಲ್ ನಿಂದ ಹೊರಟು ಯತ್ನಾಳ್ ಮನೆಗೆ ಕಡೆಗೆ ನುಗ್ಗಲು ಪ್ಲಾನ್ ಮಾಡಲಾಗಿದೆ. 

ನೀವು.. ನಿಮ್ಮ ಗೆಳೆಯರು, ಹತ್ತಿರದ ಊರಿನ ಗೆಳೆಯರನ್ನು ಸಹ ರ್ಯಾಲಿಗೆ ಕರೆ ತರುವಂತೆ ಆಡಿಯೋದಲ್ಲಿ ಕರೆ ನೀಡಲಾಗಿದೆ. ಈ ಬಾರಿ ಯತ್ನಾಳನ ಫೈನಲ್ ಡೇ ಆಗಲಿದೆ. ಈ ಬಾರಿ ಅರೆಸ್ಟ್ ಆಗಬೇಕು, ಇಲ್ಲಾ ಆತನ ತಲೆಯನ್ನ ಕತ್ತರಿಸಬೇಕು. ಸರ್ ತನ್ ಸೇ ಜುದಾ ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ‌ ಮುಸ್ಲಿಮರು ಇದಕ್ಕೆ ನಿರ್ಧರಿಸಿದ್ದಾರೆ. ಎಲ್ಲರೂ ತಯಾರಾಗಿ. 15ನೇ ತಾರೀಕು ಯತ್ನಾಳ್ ಫೈನಲ್ ಡೇ.. ಅಂದು ಯತ್ನಾಳ್ ನೇರವಾಗಿ ಜಹಾನತ್ ಗೆ ಹೋಗ್ತಾನೆ. NMC ಯ ಮುಖಂಡರು, ಸದಸ್ಯರು, ಉಲ್ಮಾಗಳ ಮುಂದೆ ಇದೆಲ್ಲವೂ ಈಗಾಗಲೇ ಚರ್ಚೆಯಾಗಿದೆ. ಇದಕ್ಕಾಗಿ ಪೈನಲ್ ನಿರ್ಧಾರವಾಗಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಆಡಿಯೋ ವೈರಲ್ ಆಗಿದ್ದು ವಿಜಯಪುರದಲ್ಲಿ ಆತಂಕ ಸೃಷ್ಟಿಸಿದೆ.

A young Muslim individual has released a provocative audio message declaring intentions to behead politician Yatnal on April 15th, in response to his derogatory remarks about the Prophet Muhammad. The audio, which has gone viral on social media, features inflammatory language and has sparked widespread outrage and concern among various communities.