Ankola Robbery, Talat gang: ಅಂಕೋಲಾದಲ್ಲಿ ನಗದು ಪತ್ತೆ ಪ್ರಕರಣ ; ಮಂಗಳೂರಿನ ಕುಖ್ಯಾತ ರೌಡಿ ತಲ್ಲತ್ ಗೆ ಹಳಿಯಾಳದಲ್ಲಿ ಗುಂಡೇಟು, ಮುಂಬೈನಿಂದ ಕರೆತರುತ್ತಿದ್ದಾಗ ಎಸ್ಕೇಪ್ ಯತ್ನಿಸಿದ್ದಕ್ಕೆ ರಿವೇಂಜ್ ! 

04-04-25 10:54 pm       HK News Desk   ಕರ್ನಾಟಕ

ಇತ್ತೀಚೆಗೆ ಅಂಕೋಲಾದ ರಾಮನಗುಳಿ ಎಂಬಲ್ಲಿ ಕ್ರೇಟಾ ಕಾರಿನಲ್ಲಿ 1.14 ಕೋಟಿ ನಗದು ಸಿಕ್ಕಿದ ಪ್ರಕರಣದಲ್ಲಿ ಮಂಗಳೂರು ಮೂಲದ ಮೂವರು ನಟೋರಿಯಸ್ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಪೊಲೀಸರಿಗೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದಕ್ಕೆ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕಾರವಾರ, ಎ.4 : ಇತ್ತೀಚೆಗೆ ಅಂಕೋಲಾದ ರಾಮನಗುಳಿ ಎಂಬಲ್ಲಿ ಕ್ರೇಟಾ ಕಾರಿನಲ್ಲಿ 1.14 ಕೋಟಿ ನಗದು ಸಿಕ್ಕಿದ ಪ್ರಕರಣದಲ್ಲಿ ಮಂಗಳೂರು ಮೂಲದ ಮೂವರು ನಟೋರಿಯಸ್ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಪೊಲೀಸರಿಗೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದಕ್ಕೆ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮಂಗಳೂರು ಮೂಲದ ಕುಖ್ಯಾತ ರೌಡಿ ತಲ್ಲತ್‌, ನಪ್ಪಾಲ್‌ ಹಾಗೂ ಸಾಹೀಲ್‌ ಅವರನ್ನು ಅಂಕೋಲಾ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆತರುತ್ತಿದ್ದರು. ಹಳಿಯಾಳ ತಾಲೂಕಿನ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್‌ ಹಾಗೂ ನೌಫಾ‌ಲ್‌ ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಕಾಡಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮೂರನೇ ಆರೋಪಿ ಸಾಹೀಲ್‌ ವಾಹನದಲ್ಲಿ ಕುಳಿತುಕೊಂಡಿದ್ದರಿಂದ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್‌ ಠಾಣೆಗೆ ಕರೆತರಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. 

ಕಳೆದ ಜನವರಿ 28 ರಂದು ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ರಾಮನಗುಳಿ ಬಳಿ ಮಂಗಳೂರಿನ ಚಿನ್ನದ ಆಂಗಡಿ ಮಾಲೀಕ ರಾಜೇಶ ಪವಾರ್‌ ಅವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ರೂ. ನಗದು ಪತ್ತೆಯಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ರಾಜೇಶ್ ಪವಾರ್ ಮತ್ತು ಕಾರು ಚಾಲಕ ದರೋಡೆ ಪ್ರಕರಣ ದಾಖಲಿಸಿದ್ದರು. ಪೊಲೀಸರಿಗೆ ಸಿಕ್ಕ ಸುಳಿವಿನಂತೆ ಮಂಗಳೂರಿನ ಅಡ್ಯಾರ್‌ ಬಜಾಲ್‌ ನಿವಾಸಿ ಕುಖ್ಯಾತ ರೌಡಿ ತಲ್ಲತ್‌ ಗ್ಯಾಂಗ್‌ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಲೆಮರೆಸಿದ್ದ ಮೂವರ ಪತ್ತೆಗೆ ಅಂಕೋಲಾ ಪೊಲೀಸರ ತಂಡ ಮುಂಬೈಗೆ ತೆರಳಿ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿತ್ತು.

Police fired upon two robbery suspects, injuring them in the leg at Ankola Neelavani in Haliyal taluk of Uttara Kannada district on Thursday. The incident occurred while the accused were being transported to Ankola following their arrest in Mumbai.