ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ, ಇಷ್ಟು ದಿನ ನೀವು ಕಡಿದು ಕಟ್ಟೆ ಹಾಕಿರುವುದು ಏನು ? ಪ್ರಧಾನಿ ಮೋದಿಗೆ ದಿನೇಶ್ ಗುಂಡುರಾವ್ ಟಾಂಗ್ 

31-03-25 07:41 pm       Bangalore Correspondent   ಕರ್ನಾಟಕ

ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟು ದಿನ ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೇ ನಿಮ್ಮ ಕೆಲಸವೇ..? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಬೆಂಗಳೂರು, ಮಾ.31 : ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟು ದಿನ ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೇ ನಿಮ್ಮ ಕೆಲಸವೇ..? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನೀತಿಗಳಿಂದಾಗಿ ದಶಕಗಳಿಂದ ನಕ್ಸಲಿಸಂಗೆ ಪ್ರೋತ್ಸಾಹ ಸಿಕ್ಕಿದೆ ಎಂಬ ಮೋದಿಯವರ ಹೇಳಿಕೆ ವಿರುದ್ಧ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಕ್ಸಲ್ ಸಮಸ್ಯೆಗೆ ಕಾಂಗ್ರೆಸ್ ನೀತಿ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ‌. ಪ್ರಧಾನಿ ಮೋದಿಯವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಒಂದು ಕಾಂಗ್ರೆಸ್ ಇರಬೇಕು ಇಲ್ಲವೆ ನೆಹರು ಇರಬೇಕು. ಇವರೆಡನ್ನು ಕನವರಿಸದೆ ಪ್ರಧಾನಿ ಜೀವಿಸಲಾರರು‌ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯವರ ವರಸೆ ಹೇಗಿದೆ ಎಂದರೆ, ದೇಶದ GDP ಕುಸಿದರೆ ಅದಕ್ಕೆ ಕಾಂಗ್ರೆಸ್ ಕಾರಣ ಎನ್ನುತ್ತಾರೆ ಇಲ್ಲವೆ ನೆಹರು ಕಾರಣ ಎನ್ನುತ್ತಾರೆ. ನಿರುದ್ಯೋಗ, ರೂಪಾಯಿ ಅಪಮೌಲ್ಯಕ್ಕೂ ಇದೆ ಕಾರಣ ಕೊಡುತ್ತಾರೆ. ಕೊನೆಗೆ‌ ಮಳೆ ಜಾಸ್ತಿ ಬಂದರೂ ನೆಹರು ಕಾರಣ, ಮಳೆ ಬಾರದೆ ಇದ್ದರೂ ನೆಹರು ಕಾರಣ ಎನ್ನುತ್ತಾರೆ. ಇಂತಹವರಿಗೆ ಏನನ್ನಬೇಕು.

ಅಲ್ಲಾ ಸ್ವಾಮಿ ಮೋದಿಯವರೆ, ಕಳೆದ 11 ವರ್ಷಗಳಿಂದ ನೀವೆ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟಕ್ಕೂ ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೇ ನಿಮ್ಮ ಕೆಲಸವೆ..? ತಮ್ಮನ್ನು ತಾವು ಜೇಮ್ಸ್‌ ಬಾಂಡ್ ಎಂದು ಭಾವಿಸಿರುವ ನಿಮಗೆ ಕಳೆದ 11 ವರ್ಷಗಳಿಂದ ನಕ್ಸಲ್ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

Accountability in Power, Dinesh Gundurao Challenge to Prime Minister Modi.