ಬ್ರೇಕಿಂಗ್ ನ್ಯೂಸ್
25-03-25 08:37 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.25 : ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿರುವ ಹನಿಟ್ರ್ಯಾಪ್ ವಿಚಾರದಲ್ಲಿ ಸಚಿವ ರಾಜಣ್ಣ ಅವರು ಗೃಹ ಸಚಿವರನ್ನು ಭೇಟಿಯಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ರಾಜಣ್ಣ ಅವರು ತನಿಖೆ ನಡೆಸಲು ಕೋರಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ದೂರನ್ನು ಪೊಲೀಸ್ ಠಾಣೆಯಲ್ಲೇ ನೀಡಬೇಕಾಗುತ್ತದೆ. ನಾನು ದೂರು ಸ್ವೀಕರಿಸಲು ಬರುವುದಿಲ್ಲ. ತನಿಖೆ ಮಾಡಬೇಕೆಂಬ ರಾಜಣ್ಣ ಅವರ ಮನವಿಯನ್ನು ಪಡೆದಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಯಾವ ರೀತಿಯ ತನಿಖೆ ಆಗಬೇಕೆಂದು ನಿರ್ಧರಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ತನ್ನ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಜಣ್ಣ ಅವರು, 2-3 ದಿನಗಳಲ್ಲಿ ಗೃಹ ಸಚಿವರನ್ನು ಭೇಟಿಯಾಗಲು ಆಗಿರಲಿಲ್ಲ. ಇವತ್ತು ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ದೂರು ಕೊಡುತ್ತೇನೆ. ಈಗಾಗಲೇ ಮೂರು ಪುಟಗಳ ದೂರನ್ನು ಬರೆದಿಟ್ಟಿದ್ದೇನೆ. ದೂರಿನಲ್ಲಿ ಏನಿದೆ ಎನ್ನುವ ಬಗ್ಗೆ ಹೇಳಲು ಆಗುವುದಿಲ್ಲ ಎಂದರು. ಹೈಕೋರ್ಟ್ ವಕೀಲರು ಎಂದು ಹೇಳಿ ಯುವತಿಯೊಬ್ಬಳು ಬಂದಿದ್ದಳು, ಏನೋ ಗುಟ್ಟಿನಲ್ಲಿ ಮಾತನಾಡಲಿಕ್ಕಿದೆ ಎಂದು ಹೇಳಿದ್ದಳು. ಇನ್ನೊಬ್ಬ ಯುವಕ ಬಂದಿದ್ದ. ಆತ ಎರಡು ಬಾರಿ ಬಂದಿದ್ದ. ಒಟ್ಟು ವಿಚಾರದ ಬಗ್ಗೆ ದೂರಿನಲ್ಲಿ ಬರೆದಿದ್ದೇನೆ ಎಂದು ಹೇಳಿದರು.
ನೀವು ಅಧಿವೇಶನದಲ್ಲಿ ಪ್ರಸ್ತಾಪ ಮಾಡಬಾರದಿತ್ತು, ಸರಕಾರದ ಗಮನಕ್ಕೆ ತರಬೇಕಿತ್ತು ಎಂದು ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ, ನಾನು ಸದನದಲ್ಲಿ ಪ್ರಸ್ತಾಪ ಮಾಡಬೇಕೆಂದು ಇರಲಿಲ್ಲ. ವಿಪಕ್ಷದ ಯತ್ನಾಳ್, ಸುನಿಲ್ ನನ್ನ ಹೆಸರು ಪ್ರಸ್ತಾಪ ಮಾಡಿದ ಬಳಿಕ ಅದಕ್ಕೆ ಉತ್ತರ ಕೊಟ್ಟಿದ್ದೇನೆ. ನಾನು ಅಲ್ಲಿದ್ದುಕೊಂಡು ಮಾತನಾಡದೇ ಇದ್ದರೆ ಮೌನಂ ಸಮ್ಮತಿ ಲಕ್ಷಣಂ ಅಂದಾಗುತ್ತದೆ. ಅದಕ್ಕಾಗಿ ತನಿಖೆ ಆಗಬೇಕು ಎಂದು ಹೇಳಿದ್ದೆ. ಅದು ಬಿಟ್ಟು ಇದರಲ್ಲಿ ನ್ಯಾಯಾಧೀಶರು ಇದ್ದಾರೆ, ಅವರಿದ್ದಾರೆ, ಇವರಿದ್ದಾರೆ ಅಂತ ಏನೂ ಹೇಳಿಲ್ಲ. ಯಾರೋ ಒಬ್ಬ ಸಿಬಿಐ ತನಿಖೆ ಆಗಬೇಕೆಂದು ಪಿಐಎಲ್ ಹಾಕಿದ್ದಾನಂತೆ. ಅದಕ್ಕೂ ನನಗೂ ಸಂಬಂಧ ಇಲ್ಲ. ನಾನೇನೂ ಹಾಗೆ ಹೇಳಿಲ್ಲ ಎಂದರು. ಹುಡುಗಿ ಯಾರೆಂದು ನೋಡಿದರೆ ಗುರುತು ಹಿಡಿಯಬಲ್ಲೆ. ನನಗೇನೂ ಪರಿಚಯ ಇಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಆದರೆ ಸಚಿವ ರಾಜಣ್ಣ ಅವರಾಗಲೀ, ಅವರ ಕುಟುಂಬಸ್ಥರಾಗಲೀ ಇನ್ನೂ ಅಧಿಕೃತವಾಗಿ ಪೊಲೀಸ್ ಇಲಾಖೆಯನ್ನು ಭೇಟಿಯಾಗಿ ಘಟನೆ ಬಗ್ಗೆ ತನಿಖೆ ಆಗಬೇಕೆಂದು ದೂರು ಕೊಟ್ಟಿಲ್ಲ. ಹೀಗಾಗಿ ಇದರ ಬಗ್ಗೆ ಎಫ್ಐಆರ್ ದಾಖಲು ಮಾಡಿಲ್ಲ. ಗೃಹ ಸಚಿವರು ಪಡೆದ ದೂರನ್ನೇ ಆಧರಿಸಿ ಪೊಲೀಸರು ರಾಜಣ್ಣ ಅವರನ್ನು ಭೇಟಿಯಾಗಿ ಹೇಳಿಕೆ ಪಡೆದು ದೂರು ದಾಖಲಿಸಿಕೊಳ್ಳಲು ಅವಕಾಶ ಇದೆ.
Minister Rajanna Confronts Home Minister Over Honeytrap Allegations Involving Impersonating Lawyer. Amid growing discussions in state and national politics regarding attempts to trap ministers and MLAs in honey traps, cooperation minister K N Rajanna on Tuesday disclosed that he was targeted twice.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm