ಬ್ರೇಕಿಂಗ್ ನ್ಯೂಸ್
21-03-25 09:21 pm HK News Desk ಕರ್ನಾಟಕ
ಮಡಿಕೇರಿ, ಮಾ.21: ಸಚಿವ ಕೆ.ಎನ್.ರಾಜಣ್ಣ ಹಾಗೂ ಬಿಜೆಪಿ ಶಾಸಕ ಮುನಿರತ್ನ ಮಾಡಿರುವ ಹನಿಟ್ರ್ಯಾಪ್ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದಾರೆ. ಮಡಿಕೇರಿ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ್, ನೀವು ಹಾಯ್ ಎನ್ನದೆ ಅವರು ಹಾಯ್ ಅಂತಾರಾ? ಹನಿಟ್ರ್ಯಾಪ್ ಮಾಡೋದಲ್ಲ.. ಹನಿಟ್ರ್ಯಾಪ್ ಆಗೋದು ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಏನೇನು ಮಾಡಿದ್ದಾರೆ ಅಂತಾ ಕಂಪ್ಲೀಟ್ ಆಗಿ ಗೊತ್ತಿದ್ಯಲ್ಲ. ಪಾಪ, ಬಿಜೆಪಿ ಅವರೇ ಏನೋ ಹೇಳುತ್ತಿದ್ದರು, ಅಶೋಕ್ಗೆ ಏನೇನು ಆಯ್ತು. ಪಾಪ ಅವರ ನೋವನ್ನು ಹೇಳಿಕೊಂಡಿದ್ದಾರೆ. ಮಾಡಿದುಣ್ಣೋ ಮಾರಾಯ!
ನಿಮ್ಮದೇ ಸರ್ಕಾರದಲ್ಲಿ ನಿಮ್ಮದೇ ಸಚಿವರಿಗೆ ರಕ್ಷಣೆ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ಯಾರು ಹೇಳಿದ್ದು ರಕ್ಷಣೆ ಇಲ್ಲ ಅಂತಾ? ಹನಿಟ್ರ್ಯಾಪ್ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಹನಿಟ್ರ್ಯಾಪ್.. ಸುಮ್ ಸುಮ್ನೆ ನಿಮ್ಮ ಹತ್ತಿರ ಯಾರಾದರೂ ಬಂದು ಬಿಡ್ತಾರಾ?
ನೀವು ಹಲೋ ಅಂದ್ರೆ ಅವರು ಹಲೋ ಅಂತಾರೆ. ನೀವು ಹಲೋ ಅಂದಿಲ್ಲ ಅಂದ್ರೆ ಯಾರಾದ್ರೂ ಹಲೋ ಅಂತಾರಾ? ನೀವು ಮಾತನಾಡುತ್ತಿದ್ದಕ್ಕೆ ನಾನು ಮಾತನಾಡುತ್ತಿದ್ದೇನೆ. ನೀವು ಮಾತನಾಡಿಸಿಲ್ಲ ಅಂದ್ರೆ ನಾನು ಮಾತನಾಡ್ತೀನಾ?. ನೀವು ವಿಶ್ ಮಾಡಿದ್ರೆ ನಾನೂ ವಿಶ್ ಮಾಡುತ್ತೇನೆ. ನೀವು ವಿಶ್ ಮಾಡಿಲ್ಲ ಅಂದ್ರೆ ನಾನು ವಿಶ್ ಮಾಡ್ತೀನಾ? ಅದು ಹಂಗೆ..’ ಮುನಿರತ್ನಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ತಿರುಗೇಟು ನೀಡಿದ್ದಾರೆ.
ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸದನದಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಮುನಿರತ್ನಗೆ ಏನೋ ಆರೋಗ್ಯ ಸಮಸ್ಯೆ ಇದ್ದಂಗಿದೆ, ಬಿಜೆಪಿಯವರು ಎಲ್ಲಾದರೂ ಒಳ್ಳೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಿ. ಹಿಟ್ ಎಂಡ್ ರನ್ ರೀತಿಯಲ್ಲಿ ಏನೋ ಒಂದು ಹೇಳಿಕೆಯನ್ನು ನೀಡುವುದಲ್ಲ. ನನಗೆ ಹನಿಟ್ರ್ಯಾಪ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ " ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿನ್ನೆನೇ ನಾನು ಹೇಳಿದ್ದೆ, ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಬೇಕೆಂದು. ಇಂತದ್ದೆಲ್ಲಾ ಮೊದಲು ನಡೆಯಬೇಕು. ಇದನ್ನೆಲ್ಲಾ ಲೇಟ್ ಮಾಡಬಾರದು, ತನಿಖೆ ಆಗಬೇಕೆಂದು ನಾನೂ ಒತ್ತಾಯ ಮಾಡುತ್ತಿದ್ದೇನೆ. ಮೊದಲು, ಮುನಿರತ್ನ ಚಿಕಿತ್ಸೆ ತೆಗೆದುಕೊಳ್ಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುನಿರತ್ನ ಮಾಡಿದ ಆರೋಪ ಏನು?
ನನಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಂದ ಅನ್ಯಾಯ ಆಗಿದೆ. ನನ್ನ ವಿರುದ್ಧ ಅತ್ಯಾಚಾರದ ಕೇಸ್ ಹಾಕಿಸಿದ್ದಾರೆ. ನೀನು ರಾಜೀನಾಮೆ ಕೊಟ್ರೆ ಜಾತಿ ನಿಂದನೆ ಕೇಸ್ ವಾಪಸ್ ಪಡೆಯುತ್ತೇನೆ ಅಂತ ಹೇಳಿದ್ರು. ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹೆಚ್.ಡಿ ರೇವಣ್ಣ ಮೇಲೂ ಇದೇ ಕುತಂತ್ರ ಮಾಡಿದ್ರು. ಈಗ ಸಚಿವ ರಾಜಣ್ಣ ಅವರ ಮೇಲೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಒಂದು ಕಿವಿಮಾತು ಹೇಳ್ತೀನಿ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವು ರಾತ್ರಿ ಮಿಟೀಂಗ್ ಮಾಡಿದ್ದು ಗೊತ್ತಿದೆ. ಡಿ.ಕೆ ಶಿವಕುಮಾರ್ ಅವರಿಗೆ ಈ ಮಹಾ ಪಾಪದ ಕೆಲಸ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದ್ದರು.
ಕೆ.ಎನ್.ರಾಜಣ್ಣ ಏನ್ ಹೇಳಿದ್ದರು..?
ಇದು ಗುರುತರ ಆರೋಪ ಅಂತಾ ನಾನು ಅಂದುಕೊಳ್ತೇನೆ. ತುಮಕೂರಿನ ಇಬ್ಬರು ಸಚಿವರು ಹನಿಟ್ರ್ಯಾಪ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳ್ತಿದ್ದಾರೆ. ಈ ಬಗ್ಗೆ ಏನೇನೋ ಕತೆಗಳು ಬರುತ್ತಿವೆ. ತುಮಕೂರಲ್ಲಿ ನಾನೊಬ್ಬ ಇದ್ದೇನೆ. ಡಾಕ್ಟರ್ ಪರಮೇಶ್ವರ್ ಕೂಡ ಇದ್ದಾರೆ. ನಾವಿಬ್ಬರೇ ಅವರ ಉದ್ದೇಶ ಅಂತಾ ನಾನು ಅಂದುಕೊಳ್ತೇನೆ. ಸಿಡಿ ಮಾಡೋದು, ಪೆನ್ ಡ್ರೈವ್ ಮಾಡೋದು.. ನಾನು ನಿಮಗೆ ಹೇಳ್ತೇನೆ. ನನಗೆ ಇರುವ ಮಾಹಿತಿ ಪ್ರಕಾರ ಸುಮಾರು 48 ಜನಗಳು ಇದ್ದಾರೆ. ಕೆಲವರು ಕೋರ್ಟ್ ಮುಖಾಂತರ ಸ್ಟೇ ತಂದುಕೊಂಡಿದ್ದಾರೆ. ಇದು ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ನಾಯಕರ ಹೆಸರಲ್ಲೂ ಸಿಡಿಗಳಿವೆ. ನಾನು ಲಿಖಿತ ದೂರು ನೀಡುತ್ತೇನೆ. ಗೃಹ ಸಚಿವರು ಅದರ ಬಗ್ಗೆ ತನಿಖೆ ಮಾಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದ್ದರು.
In a surprising turn of events, Karnataka Congress leader DK Shivakumar responded to allegations made by BJP MLA Muniratna, who claimed he was the target of a "honeytrap" scheme. The allegations, which have sparked significant controversy, led Shivakumar to suggest that Muniratna may require medical attention.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm