ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ನಟ ಪ್ರಕಾಶ್ ರಾಜ್ ; 9 ವರ್ಷಗಳ ಹಿಂದೆ ಜಾಹೀರಾತು ಕೊಟ್ಟು ನಿಲ್ಲಿಸಿದ್ದೆ, ಬೆಟ್ಟಿಂಗ್ ಅನ್ನೋದು ವ್ಯಸನ, ಅದಕ್ಕೆ ಬಲಿಯಾಗಬೇಡಿ ಎಂದು ಯುವಕರಿಗೆ ಕಿವಿಮಾತು 

21-03-25 04:14 pm       Bangalore Correspondent   ಕರ್ನಾಟಕ

ಅಕ್ರಮ ಬೆಟ್ಟಿಂಗ್ ಮತ್ತು ಕ್ಯಾಸಿನೊ ಏಪ್ಸ್ ಗಳ ಪರವಾಗಿ ಜಾಹೀರಾತು ಕೊಟ್ಟು ಪ್ರಚಾರ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗುತ್ತಲೇ ನಟ ಪ್ರಕಾಶ್ ರಾಜ್ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡುತ್ತ ಸಾರಿ ಕೇಳಿದ್ದಾರೆ. 

ಬೆಂಗಳೂರು, ಮಾ.21 : ಅಕ್ರಮ ಬೆಟ್ಟಿಂಗ್ ಮತ್ತು ಕ್ಯಾಸಿನೊ ಏಪ್ಸ್ ಗಳ ಪರವಾಗಿ ಜಾಹೀರಾತು ಕೊಟ್ಟು ಪ್ರಚಾರ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗುತ್ತಲೇ ನಟ ಪ್ರಕಾಶ್ ರಾಜ್ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡುತ್ತ ಸಾರಿ ಕೇಳಿದ್ದಾರೆ. 

ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹೇಳಿಕೆ ನೀಡಿದ್ದು, ಒಂಬತ್ತು ವರ್ಷಗಳ ಹಿಂದೆ ಆ ಜಾಹಿರಾತು ಮಾಡಿದ್ದು ನಿಜ.. ಬಳಿಕ ಅದು ತಪ್ಪು ಎಂದು ತಿಳಿದು ಅದನ್ನು ನಿಲ್ಲಿಸಿದ್ದೆ. ಅಂತೆಯೇ ನನ್ನ ಜಾಹೀರಾತು ಬಳಕೆ ಮಾಡದಂತೆ ಆ ಸಂಸ್ಥೆಗೂ ಸೂಚಿಸಿದ್ದೆ ಎಂದು ಹೇಳಿದ್ದಾರೆ.  

ಈಗಷ್ಟೇ ನನಗೆ ಬೆಟ್ಟಿಂಗ್ ಆ್ಯಪ್ ಪ್ರಕರಣದ ಕುರಿತು ಮಾಹಿತಿ ತಿಳಿಯಿತು. ಎಲ್ಲರನ್ನೂ ಪ್ರಶ್ನಿಸುವ ನಾನು ನನ್ನ ಬಗ್ಗೆ ಪ್ರಶ್ನೆಗಳು ಎದ್ದಾಗ ಅದಕ್ಕೆ ಉತ್ತರ ನೀಡಬೇಕು. ಪೊಲೀಸ್ ಪ್ರಕರಣದ ಬಗ್ಗೆ ಹೇಳುತ್ತಿದ್ದಾರೆ. ಆದರೆ ನನಗೆ ಈ ವರೆಗೂ ಪೊಲೀಸರಿಂದ ಯಾವುದೇ ಸಂದೇಶ ಬಂದಿಲ್ಲ. ಬಂದರೂ ಅದಕ್ಕೆ ನಾನು ಉತ್ತರ ನೀಡುತ್ತೇನೆ. ಆದರೆ ನಿಮಗೆ ನಾನು ಉತ್ತರ ನೀಡಲೇಬೇಕು. ಹೀಗಾಗಿ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

'2016ರಲ್ಲಿ ನನಗೆ ಈ ಬೆಟ್ಟಿಂಗ್ ಆ್ಯಪ್ ಜಾಹಿರಾತು ಬಂದಿತ್ತು. ನಾನು ಕೂಡ ಆ ಜಾಹೀರಾತು ಮಾಡಿದ್ದೆ. ಆಗಲೂ ವಿರೋಧ ಕೇಳಿಬಂದಿತ್ತು. ಬಳಿಕ ಅದು ತಪ್ಪು ಎಂದು ತಿಳಿದು ಅದನ್ನು ನಿಲ್ಲಿಸಲು ಯತ್ನಿಸಿದೆ. ಆದರೆ ಒಪ್ಪಂದದ ಅನ್ವಯ ಒಂದು ವರ್ಷ ಜಾಹಿರಾತು ನಡೆದಿತ್ತು. 2017ರಲ್ಲಿ ಜಾಹಿರಾತು ವಿಸ್ತರಣೆಗೆ ಅವರು ಬಂದಿದ್ದರು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ಬಳಿಕ ಅಂತಹ ಯಾವುದೇ ಗೇಮಿಂಗ್ ಆ್ಯಪ್ ಗಳಿಗೆ ನಾನು ಜಾಹಿರಾತು ನೀಡಿಲ್ಲ. 2021ರಲ್ಲಿ ಆ ಕಂಪನಿಯು ಜಾಹೀರಾತನ್ನು ಬೇರೆ ಸಂಸ್ಥೆಗೆ ಮಾರಾಟ ಮಾಡಿತ್ತು. ಅದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಿತ್ತು. ಆದರೆ ನಾನು ಅವರಿಗೆ ಅದನ್ನು ಪ್ರಸಾರ ಮಾಡದಂತೆ ದೂರು ದಾಖಲಿಸಿದ್ದೆ. ಬಳಿಕ ಅವರು ಜಾಹೀರಾತು ನಿಲ್ಲಿಸಿದ್ದರು. ಇದೀಗ ಮತ್ತೆ ಅದು ಲೀಕ್ ಆಗಿದೆ. ಹೀಗಾಗಿ ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ಯುವಕರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ಇಂತಹ ಗೇಮಿಂಗ್ ಆ್ಯಪ್ ಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಅದೊಂದು ವ್ಯಸನ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

The Telangana police have filed a First Information Report (FIR) against 25 celebrities and influencers for allegedly promoting illegal betting and gambling apps through their social media platforms. Actor Prakash Raj has now addressed the case and said that although he did say yes to the ad nine years ago, later he refused to renew his contract. (Also read: FIR filed against Rana Daggubati, Vijay Deverakonda, Lakshmi Manchu and others for promoting gambling platforms)