ಬ್ರೇಕಿಂಗ್ ನ್ಯೂಸ್
14-03-25 11:11 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.14 : ಬೋವಿ ಅಭಿವೃದ್ಧಿ ನಿಗಮದ ಅವ್ಯವಹಾರದ ತನಿಖೆ ನೆಪದಲ್ಲಿ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ 25 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಲ್ಲದೆ, ಮಹಿಳಾ ಉದ್ಯಮಿಯನ್ನು ವಶಕ್ಕೆ ಪಡೆದು ತನಿಖೆ ನೆಪದಲ್ಲಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದರು. ಠಾಣೆಯಲ್ಲಿ ಬೆತ್ತಲೆಗೊಳಿಸಿ ಕಿರುಕುಳ ನೀಡಿದ್ದರು ಎನ್ನುವ ಆರೋಪದ ಬಗ್ಗೆ ಸಾಕ್ಷ್ಯಗಳು ಲಭಿಸಿದ ಬೆನ್ನಲ್ಲೇ ಎಸ್ಐಟಿ ತನಿಖಾಧಿಕಾರಿಗಳು ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.
2022ರ ಬಿಜೆಪಿ ಆಡಳಿತಾವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ 34 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಡಿವೈಎಸ್ಪಿ ಕನಕಲಕ್ಷ್ಮಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿತ್ತು. ವಕೀಲೆ ಮತ್ತು ಮಹಿಳಾ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ಫರ್ನಿಚರ್ ಅಂಗಡಿ ನಡೆಸುತ್ತಿದ್ದ ಎಸ್. ಜೀವಾ ಅವರ ಖಾತೆಗೆ ಬೋವಿ ಅಭಿವೃದ್ಧಿ ನಿಗಮದಿಂದ 7.16 ಕೋಟಿ ರೂಪಾಯಿ ಪಾವತಿಯಾಗಿತ್ತು ಎಂಬ ನೆಲೆಯಲ್ಲಿ ಜೀವಾ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ, ಪೊಲೀಸರು ತೀವ್ರ ಕಿರುಕುಳ ನೀಡಿದ್ದಲ್ಲದೆ, ಆಕೆಯ ಫರ್ನಿಚರ್ ಅಂಗಡಿಗೂ ಎಂಟ್ರಿ ಕೊಟ್ಟು ಕೆಲಸದವರು ಮತ್ತು ಸಾರ್ವಜನಿಕರ ಮುಂದೆ ಅವಮಾನಿಸಿದ್ದರು ಎನ್ನುವ ಆರೋಪಗಳಿದ್ದವು.
ಇದರಿಂದ ನೊಂದುಕೊಂಡಿದ್ದ ಜೀವಾ ಅವರು 2024ರ ನವೆಂಬರ್ 22ರಂದು ಪದ್ಮನಾಭ ನಗರದ ರಾಘವೇಂದ್ರ ಲೇಔಟ್ ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ 13 ಪುಟಗಳ ಡೆತ್ ನೋಟ್ ಬರೆದಿದ್ದು, ತನಿಖಾಧಿಕಾರಿ ಕನಕಲಕ್ಷ್ಮೀ ನೀಡಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಆನಂತರ, ಡೆತ್ ನೋಟ್ ಪರಿಶೀಲನೆಗಾಗಿ ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಡೆತ್ ನೋಟ್ ಬರವಣಿಗೆ ಜೀವಾ ಅವರದ್ದೇ ಎನ್ನುವುದು ದೃಢಪಟ್ಟಿತ್ತು. ತನಿಖೆ ನೆಪದಲ್ಲಿ ನವೆಂಬರ್ 14ರಂದು ಸಿಐಡಿ ಕಚೇರಿಗೆ ಕರೆಸಿದ್ದ ಕನಕಲಕ್ಷ್ಮಿ, ತನ್ನ ಒಳ ಉಡುಪನ್ನೂ ತೆಗೆಸಿ ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದರು. ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿದ್ದರು. ಸೈನೇಡ್ ತಂದಿದ್ದೀಯಾ ಎಂದು ಹೀಯಾಳಿಸಿ ಹಿಂಸೆ ನೀಡಿದ್ದರು ಎಂದು ಜೀವಾ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.
ಈ ಬಗ್ಗೆ ಜೀವಾ ತಂಗಿ ಸಂಗೀತಾ, ಬನಶಂಕರಿ ಠಾಣೆಗೆ ದೂರು ನೀಡಿ ತನ್ನ ಅಕ್ಕನ ಸಾವಿಗೆ ಡಿವೈಎಸ್ಪಿ ಕನಕಲಕ್ಷ್ಮಿ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು. ಆತ್ಮಹತ್ಯೆ ಪ್ರಚೋದನೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಈ ಬಗ್ಗೆ ತನಿಖೆಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ರಚಿಸಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು, ಡಿವೈಎಸ್ಪಿ ಕಿರುಕುಳ ನೀಡಿರುವುದು ಸಾಬೀತಾಗುತ್ತಲೇ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದೆ.
ತನಿಖೆಯ ಸಂದರ್ಭದಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದ ಕನಕಲಕ್ಷ್ಮಿ, ವಿಚಾರಣೆ ವೇಳೆ ಆಗಾಗ್ಗೆ ವಿಡಿಯೋ ರೆಕಾರ್ಡ್ ಆಫ್ ಮಾಡಿ ನಿಂದಿಸುತ್ತಿದ್ದರು. ಹಲವು ಬಾರಿ ನಿಂದಿಸಿರುವುದು ಹಾಗೂ ಇನ್ನೂ ನಾಲ್ಕು ಕೇಸುಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಒಡ್ಡಿದ್ದರು. ಈ ಕುರಿತ ವಿಡಿಯೋ ತುಣುಕು ಡಿವೈಎಸ್ಪಿ ಕನಕಲಕ್ಷ್ಮಿ ಮೊಬೈಲಿನಲ್ಲಿ ಸಿಕ್ಕಿವೆ ಎಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕನಕಲಕ್ಷ್ಮಿ ಕಿರುಕುಳಕ್ಕೆ ಪ್ರಬಲ ಸಾಕ್ಷ್ಯ
ಆರೋಪಿತ ಡಿವೈಎಸ್ಪಿ ಕನಕಲಕ್ಷ್ಮಿ ಕಿರುಕುಳ ನೀಡಿರುವುದಕ್ಕೆ ಪ್ರಬಲ ಸಾಕ್ಷ್ಯ ತನಿಖಾ ತಂಡಕ್ಕೆ ಲಭಿಸಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಸಾಕ್ಷಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಜೀವಾ ಆತ್ಮಹತ್ಯೆ ಪ್ರಕರಣ ತನ್ನ ಕೊರಳು ಸುತ್ತಿಕೊಳ್ಳುವುದನ್ನು ತಿಳಿದು ಕನಕಲಕ್ಷ್ಮಿ, ಅವ್ಯವಹಾರ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಭೋವಿ ಅಭಿವೃದ್ಧಿ ನಿಗಮದ ಮ್ಯಾನೇಜರ್ ಭೇಟಿಯಾಗಲು ಜನವರಿ 18ರಂದು ಅವರ ಕಚೇರಿಗೆ ತೆರಳಿದ್ದರು. ಜೀವಾ ಆತ್ಮಹತ್ಯೆ ವಿಚಾರದಲ್ಲಿ ತನಗೆ ಸಹಾಯ ಮಾಡಿ, ಮತ್ತೊಬ್ಬ ಸಾಕ್ಷಿದಾರ ಹೇಳಿಕೆ ನೀಡಿದರೆ ತನಗೆ ತೊಂದರೆಯಾಗಲಿದೆ ಎಂದು ಗೋಗರೆದಿದ್ದರು. ಅಲ್ಲದೆ, ಹೈಕೋರ್ಟಿನಲ್ಲಿ ದೂರುದಾರೆ ಸಂಗೀತಾ ಅವರನ್ನು ಭೇಟಿಯಾಗಿದ್ದ ಮಹಿಳೆಯೊಬ್ಬಳು, ಯಾಕೆ ರಿಸ್ಕ್ ತೆಗೆದುಕೊಳ್ಳುತ್ತೀರಿ, ನೀವು ಕೇಸ್ ವಾಪಸ್ ಪಡೆದುಕೊಳ್ಳಿ, ಹೀಗೂ ನೀವೊಬ್ಬರೇ ಇರೋದಲ್ವಾ ಎಂದು ಹೇಳಿ ಬೆದರಿಸುವ ಯತ್ನ ಮಾಡಿದ್ದರು. ಈ ವಿಚಾರವನ್ನು ತನಿಖಾಧಿಕಾರಿ ಸುಧೀರ್ ಹೆಗಡೆ ಹೈಕೋರ್ಟಿಗೆ ತಿಳಿಸಿದ್ದಾರೆ.
The Special Investigation Team (SIT) probing the suicide case of a woman advocate, an accused in the Bhovi Development Corporation Scam, taken place during the tenure of the BJP government in Karnataka, has arrested Deputy Superintendent of Police (Dy SP) BM Kanakalakshmi on Tuesday, March 11, in Bengaluru on charges of abetment to commit suicide and corruption.
10-07-25 12:45 pm
HK News Desk
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
10-07-25 01:00 pm
HK News Desk
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
09-07-25 10:25 pm
Mangalore Correspondent
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
10-07-25 01:05 pm
HK News Desk
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm