ಬ್ರೇಕಿಂಗ್ ನ್ಯೂಸ್
13-03-25 12:32 pm HK News Desk ಕರ್ನಾಟಕ
ಕಾರವಾರ, ಮಾ.13 : ಹೊನ್ನಾವರದಲ್ಲಿ ನಡೆದ ಗರ್ಭ ಧರಿಸಿದ್ದ ಗೋ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ 46 ದಿನಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಿಗಾಗಿ ಬಹುಮಾನ ಘೋಷಿಸಿದ್ದ ಪೊಲೀಸ್ ಇಲಾಖೆ, ತೀವ್ರ ಹುಡುಕಾಟದ ಬಳಿಕ ಮುಂಬೈ ಹಾಗೂ ಭಟ್ಕಳದಲ್ಲಿ ಇಬ್ಬರನ್ನು ಬಂಧಿಸಿದೆ.
ಕಳೆದ ಜನವರಿ 19ರಂದು ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ನಡೆದಿದ್ದು ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಆರೋಪಿಗಳನ್ನು ಬಂಧಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಆರೋಪಿಗಳನ್ನು ಕಡೆಗೂ ಸೆರೆ ಹಿಡಿದಿದ್ದಾರೆ.
ಸುಮಾರು 400ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿ, ಹಸು ಕೊಂದವರನ್ನು ಗುರುತಿಸಿದ್ದ ಪೊಲೀಸರು ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದಿದ್ದರು. ಪ್ರಮುಖ ಆರೋಪಿಯಾಗಿದ್ದ ವಾಸೀಂ ಎಂಬಾತನನ್ನು ಮುಂಬೈನಲ್ಲಿ ಹಾಗೂ ಇನ್ನೋರ್ವ ಆರೋಪಿ ಮುಜಾಮಿಲ್ ಎನ್ನುವಾತನನ್ನು ಭಟ್ಕಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ತಂಡಗಳಿಂದ ಕಾರ್ಯಾಚರಣೆ
ಕೃತ್ಯಕ್ಕೆ ಸಹಕರಿಸಿದ್ದ ಇಬ್ಬರು ಆರೋಪಿಗಳನ್ನೂ ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಫೈಜಾನ್ ಎನ್ನುವ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿತ್ತು. ಇದಾದ ನಂತರ ವಾಸೀಂ ಹಾಗೂ ಮುಜಾಮಿಲ್ ಇಬ್ಬರು ಧಾರವಾಡಕ್ಕೆ ತೆರಳಿ, ಅಲ್ಲಿಂದ ಮುಂಬೈ ಕಡೆ ಹೋಗಿ ತಪ್ಪಿಸಿಕೊಂಡಿದ್ದರು. ಎಸ್ಪಿ ಎಂ.ನಾರಾಯಣ ಪ್ರಕರಣ ಭೇದಿಸಲು, 4 ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿಗಳು ಮುಂಬೈಗೆ ತೆರಳಿರುವುದು ಗೊತ್ತಾಗಿ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿದ್ದರು. ವಾಸಿಂ ಬಂಧನದ ಬಳಿಕ, ಮುಜಾಮಿಲ್ ವಾಪಸ್ ಭಟ್ಕಳದತ್ತ ಬಂದಿರುವ ಮಾಹಿತಿ ತಿಳಿದು, ಆತನನ್ನೂ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳು ಕೊಂಡುಕುಳಿ ಗ್ರಾಮದಲ್ಲಿ ಹಸು ಹಾಗೂ ಕರುವನ್ನು ಕೊಂದು ಮಾಂಸ ಮಾಡಿ ಭಟ್ಕಳದ ಮದುವೆ ಸಮಾರಂಭಕ್ಕೆ ನೀಡಿ, ಹಣ ಪಡೆದಿದ್ದರು. ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆ ಪೊಲೀಸರಿಗೆ ಲಭ್ಯವಾಗಿದ್ದರಿಂದ ಪ್ರಕರಣ ಬೇಧಿಸುವಲ್ಲಿ ಸುಲಭವಾಯಿತು. ಪೊಲೀಸ್ ತಂಡಗಳು 46 ದಿನಗಳ ಕಾಲ 5 ರಾಜ್ಯಗಳಲ್ಲಿ ಒಟ್ಟು 11 ಸಾವಿರ ಕಿ.ಮೀ ಸುತ್ತಾಡಿ ಹುಡುಕಾಟ ನಡೆಸಿದ್ದರು. ಜೊತೆಗೆ, 130 ಸ್ಥಳಗಳಲ್ಲಿ ಸಿಸಿಟಿವಿ, 350ಕ್ಕೂ ಹೆಚ್ಚು ಜನರ ವಿಚಾರಣೆ ಹಾಗೂ 800 ಮೊಬೈಲ್ ನಂಬರ್ಗಳ ಪರಿಶೀಲನೆ ನಡೆಸಲಾಗಿದೆ. ಗುಪ್ತ ಮಾಹಿತಿದಾರರಿಗೆ ಇಲಾಖೆಯಿಂದ 50 ಸಾವಿರ ಹಾಗೂ ಮಾಹಿತಿ ನೀಡಿದ್ದ ಮತ್ತಿಬ್ಬರು ಖಾಸಗಿ ವ್ಯಕ್ತಿಗಳಿಗೆ ತಲಾ 50 ಸಾವಿರ ಬಹುಮಾನ ನೀಡಲಾಗಿದೆ' ಎಂದು ಎಸ್ಪಿ ಎಂ.ನಾರಾಯಣ ಮಾಹಿತಿ ನೀಡಿದ್ದಾರೆ.
After an operation spanning 45 days, covering 11,000 km in five States, the Uttara Kannada Police have finally arrested two more accused who were absconding after brutally killing a cow in Kondakuli village of Honnavar taluk. With their arrest, all the four involved in the brutal killing are behind bars now.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm