ಬ್ರೇಕಿಂಗ್ ನ್ಯೂಸ್
12-03-25 03:51 pm HK News Desk ಕರ್ನಾಟಕ
ಶಿವಮೊಗ್ಗ, ಮಾ.12 : ನನಗೆ ಫೆ. 28 ರಂದು ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ತಡೆ ಒಡ್ಡಲಾಯಿತು. ಇಲ್ಲಿನ ಎಸ್ಪಿ ನನಗೆ ಶಿವಮೊಗ್ಗ ಬರದಂತೆ ತಡೆ ಒಡ್ಡಿದರು. ಆದರೆ ಹೈಕೋರ್ಟ್ ಅನುಮತಿ ಪಡೆದು ಬಂದಿದ್ದೇನೆ. ಲವ್ ಜಿಹಾದ್ ಜನಸಂಖ್ಯೆ ಹೆಚ್ಚಾಗಿಸುವ ಒಂದು ಭಾಗ. ಈ ಮೂಲಕ ಷಡ್ಯಂತ್ರ, ಕುತಂತ್ರ, ಜಾಲ ನಡೆಯುತ್ತಿದೆ. ಇದರಲ್ಲಿ ನಿಜವಾದ ಪ್ರೀತಿ ಇಲ್ಲ ಎಂಬುದನ್ನು ಹೇಳುವುದಕ್ಕಾಗಿ ಎಲ್ಲ ಕಡೆಯೂ ಈ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮುಸ್ಲಿಂ ಹುಡುಗರು ತಮ್ಮ ಹೆಸರೇಕೆ ಬದಲಾವಣೆ ಮಾಡಿಕೊಂಡು ಪ್ರೀತಿ ಮಾಡ್ತಿರಾ. ಇಸ್ಲಾಮಿಗೆ ಮತಾಂತರ ಮಾಡೋದು ಇಸ್ಲಾಮೀಕರಣಕ್ಕೆ ಪುಷ್ಟಿ ನೀಡುವ ಯೋಜನೆಯಾಗಿದೆ. ಶೇ. 88 ರಷ್ಟು ಪ್ರಕರಣಗಳಲ್ಲಿ ಹೆಸರು ಬದಲಾವಣೆ ಮಾಡಿ ಪ್ರೀತಿಸಿ ವಂಚನೆ ಮಾಡಿರುವುದು ಕಂಡುಬಂದಿದೆ. ಇವೆಲ್ಲವೂ ದಾಖಲೆ ಸಹಿತ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನು ಈ ಮೂಲಕ ಶೋಷಣೆ ಮಾಡಲಾಗುತ್ತಿದೆ.
ಹಿಂದುಗಳ ನೈತಿಕತೆ ಕುಸಿಯಲು ಇಸ್ಲಾಂಗೆ ಮತಾಂತರಿಸಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೆ ಏನು ಬೇಕಾದರೂ ಮಾಡಬಹುದೆಂದು ತಿಳಿದಿದ್ದಾರೆ. ವೇಶ್ಯಾವಾಟಿಕೆ, ಭಯೋತ್ಪಾದನೆ, ಕಳ್ಳತನಕ್ಕಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಎಚ್ಚರಿಸುವ ಕೆಲಸ ಈ ಪುಸ್ತಕದ ಮೂಲಕ ಮಾಡಲಾಗುತ್ತಿದೆ. ಕಳೆದೆರೆಡು ವರ್ಷದಲ್ಲಿ ದೇಶದಲ್ಲಿ 13 ಲಕ್ಷ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಹಂಪಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಆದರೆ ಹುಬ್ಬಳ್ಳಿಯ ನೇಹಾ ಹಿರೇಮಠ್ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಮುಸಲ್ಮಾನ್ ಪರವಾಗಿ ಈ ರಾಜ್ಯ ಸರ್ಕಾರ ನಿಂತಿದೆ. ಮುಸ್ಲಿಂ ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಾತೊರೆಯುತ್ತಿದೆ. ಮುಸಲ್ಮಾನರ ಪರ ಮಾತನಾಡುತ್ತ ನಮ್ಮ ಬ್ರದರ್ಸ್ ಎನ್ನುತ್ತಿದ್ದಾರೆ. ಹೀಗಾಗಿ ಹಿಂದುಗಳಿಗೆ ಸ್ವಯಂ ರಕ್ಷಣೆಗಾಗಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮಾಡಲಿದ್ದೇವೆ. ರಾಜ್ಯದ ನೂರು ಸ್ಥಳಗಳಲ್ಲಿ ತ್ರಿಶೂಲ್ ದೀಕ್ಷಾ ಸಮಾರಂಭ ಮಾಡುತ್ತಿದ್ದೆವೆ. ಹೆಣ್ಣುಮಕ್ಕಳಿಗೆ ಧೈರ್ಯದಿಂದ ಮಾರುಕಟ್ಟೆಯಲ್ಲಿ ಓಡಾಡಲು ತ್ರಿಶೂಲ ಕೊಡಿಸುತ್ತಿದ್ದೇವೆ. ನಮ್ಮ ಪುಸ್ತಕವನ್ನೇ ನೋಡದ ಡಿಸಿ, ಎಸ್.ಪಿ. ನನ್ನನ್ನು ಶಿವಮೊಗ್ಗಕ್ಕೆ ಬರಲು ತಡೆದರು.
ಹೀಗಾಗಿ,ನೀವು ಯಾರ ಪರವಾಗಿ ಇಲ್ಲಿ ಅಧಿಕಾರ ಮಾಡುತ್ತಿದ್ದಿರಾ ? ಯಾರ ಬಾಲ ಬಡುಕರಾಗಿ ಕೆಲಸ ಮಾಡುತ್ತಿದ್ದಿರಾ. ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನಗೆ ಪೊಲೀಸರು ಹೆದರಿಸಿಬಿಟ್ಟರು. ನಾನೇನು ರೇಪಿಸ್ಟಾ !?ದರೋಡೆಕೋರನಾ !? ಡಿಸಿ, ಎಸ್.ಪಿ. ಯವರೇ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಇದನ್ನು ಪೊಲೀಸರು ನೆನಪಿನಲ್ಲಿಟ್ಟುಕೊಳ್ಳಬೇಕು. ನನಗೆ ತಡೆಯುವ ಉದ್ದೇಶವಾದರೂ ಏನಿತ್ತು ಎಂದು ಸಮಾಜಕ್ಕೆ ಹೇಳಬೇಕು ಎಂದು ಹೇಳಿದರು.
ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರಿಗೆ ಪ್ರೀತಿ ಮಾಡಿದರೆ ತಪ್ಪಿಲ್ಲ. ನಮ್ಮ ಹುಡುಗರು ದೇಶದ್ರೋಹ ಮಾಡಲ್ಲ. ಎಲ್ಲಿಯೂ ಆ ಹೆಣ್ಣು ಮಕ್ಕಳಿಗೆ ಸೂಟ್ ಕೇಸ್ ನಲ್ಲಿ ತುಂಬಲ್ಲ. ನಮ್ಮ ಹಿಂದೂ ಹುಡುಗರು ನಿಜವಾದ ಪ್ರೀತಿ ಮಾಡುತ್ತಾರೆ. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಸೂಲಿಬೆಲೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿದರು.
Hindu Girls at Risk, Pramod Muthalik Highlights Trafficking Concerns Amid Alarming Love jihad Marriage Statistics.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm