ಬ್ರೇಕಿಂಗ್ ನ್ಯೂಸ್
09-03-25 11:41 am Bengaluru Correspondent ಕರ್ನಾಟಕ
ಬೆಂಗಳೂರು, ಮಾ.8: ಹೆಂಡತಿ ಸುಂದರವಾಗಿಲ್ಲ, ದಪ್ಪಗಿದ್ದಾಳೆ ಅಂತ ಡೌರಿಗೆ ಡಿಮ್ಯಾಂಡ್ ಮಾಡಿ ಪತ್ನಿ ಮತ್ತು ಮಗುವಿನ ಮೇಲೆ ಖಾರದ ಪುಡಿ ಎರಚಿ ಗಂಡನೇ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಸಾಯಿಕುಮಾರ್ ಹಾಗೂ ರಮ್ಯಾ ಪರಿಚಯವಾಗಿ ಮದುವೆಯಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಅಸಿಸ್ಟಂಟ್ ಫ್ರೋಫೆಸರ್ ಆಗಿ ರಮ್ಯಾ ಕೆಲಸ ಮಾಡ್ತಿದ್ರೆ, ಸಾಯಿ ಕುಮಾರ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಮದುವೆಗೂ ಮೊದಲೇ ಪ್ರೀತಿ ಪ್ರೇಮ ಎಂದು ಅಡ್ಡಾಡಿ ಆಮೇಲೆ ಮದುವೆಯಾಗಿದ್ದರು. ಮೊದಲು ಚೆನ್ನಾಗಿಯೇ ಇದ್ದ ಈ ಜೋಡಿ ಮದುವೆ ಬಳಿಕ ವಿರಸ ಉಂಟಾಗಿದೆ. ವರದಕ್ಷಿಣೆಗಾಗಿ ಪೀಡನೆ ಶುರು ಮಾಡಿದ್ದ.
ಮಾರ್ಚ್ 6ರ ಬೆಳಗ್ಗೆ ಕಿರಿಕ್ ತೆಗೆದಿದ್ದ ಸಾಯಿ, ಸಿನಿಮಾ ಸ್ಟೈಲ್ನಲ್ಲಿ ಅಟ್ಯಾಕ್ ಮಾಡಿದ್ದಾನೆ. ಮದುವೆಗೂ ಮುನ್ನ ಚೆನ್ನಾಗಿದ್ದೆ. ಈಗ ದಪ್ಪ ಆಗಿದ್ಯಾ.. ನಿನ್ನ ಜೊತೆ ನಾನು ಇರೋದಿಲ್ಲ ಅಂತ ಟಾರ್ಚರ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಮಾವನಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಮಗುವಿನ ಮೇಲೂ ವಿಕೃತಿ ಮೆರೆದಿದ್ದಾನೆ. ಮತ್ತೊಂದ್ಕಡೆ, ರಮ್ಯಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪುಲಿ ವಿರುದ್ಧ ದೂರು ಕೊಟ್ಟಿದ್ದಾಳೆ. ಮನೆಯಲ್ಲಿ ರಂಪ ಮಾಡಿದ್ದ ಪತಿರಾಯನನ್ನ ಸದ್ಯ ಪೊಲೀಸರು ಕರೆದು ವಿಚಾರಣೆ ಮಾಡಿದ್ದಾರೆ.
ಮದ್ವೆ ನಂತರ ವಯಸ್ಸಾದವಳಂತೆ ಆಗಿದ್ಯಾ..
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ, ಮದುವೆಗೆ ಮುಂಚೆ ಚೆನ್ನಾಗಿದ್ದೆ, ಈಗ 60 ವರ್ಷ ವಯಸ್ಸಾಗಿರೋ ತರ ಇದ್ಯಾ ಅಂತ ಬೈಯ್ತಿದ್ದಾನೆ, ದಪ್ಪಗಿರುವ ಬಗ್ಗೆ ಹಂಗಿಸಿ ದೇಹದ ಆಕಾರದ ಬಗ್ಗೆ ಮಾತಾಡ್ತಿದ್ದ ಎಂದು ರಮ್ಯಾ ಆರೋಪಿಸಿದ್ದಾರೆ. ವರದಕ್ಷಿಣೆ ವಿಚಾರಕ್ಕೆ ಗಲಾಟೆ ಮಾಡ್ತಾನೆ. ಕುಟುಂಬಸ್ಥರಿಗೆ ಕರೆ ಮಾಡಿ 10 ಲಕ್ಷ ಹಣ, ಬಂಗಾರ ತಂದುಕೊಡು ಎಂದು ಬಲವಂತ ಮಾಡ್ತಿದ್ದ. ನಿನ್ನ ಕೊಲೆ ಮಾಡ್ತೀನಿ, ಜೈಲಿಗೆ ಹೋಗೋಕೆ ರೆಡಿ ಅಂತಿದ್ದ ಎಂದು ಕಿಡಿಕಾರಿದರು.
ಕೇಳಿ ಕೇಳಿದಾಗೆಲ್ಲಾ ಹಣ ಕೊಟ್ಟಿದ್ದೇವೆ..
3 ಲಕ್ಷ ಕೊಡು ಅಂತ ಕೆಲ ದಿನದಿಂದ ಗಲಾಟೆ ಮಾಡ್ತಿದ್ದ, ನಿನ್ನೆ ನನ್ನ ಅಪ್ಪನಿಗೆ ಚಾಕು ತೆಗೆದುಕೊಂಡು ಚುಚ್ಚೋಕೆ ಬಂದಿದ್ದ. ಈ ಹಿಂದೆ ಅಪ್ಪ ಐದು ಲಕ್ಷ ಹಣ ಕೊಟ್ಟಿದ್ರು, ತಂಗಿ ಮದುವೆಗೆ ವರದಕ್ಷಿಣೆ ಕೊಡಬೇಕು ಅಂತ ಹಣ ಪಡೆದುಕೊಂಡಿದ್ದ. ಹಣ ಬೇಕಾದಾಗ ನನ್ನ ನಂಬಿಸಿ ಹತ್ತಿರ ಬರ್ತಿದ್ದ, ಮತ್ತೆ ಗಲಾಟೆ ಮಾಡ್ತಿದ್ದ. ಅವನು ಬೇಡವೇ ಬೇಡ ಅಂತ ನಿರ್ಧರಿಸಿದ್ದೇನೆ. ನನಗೆ ಮಗು ಮೇಲೆ ಅಪ್ಪನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾನೆ. ಅಪ್ಪನ ಕಣ್ಣಿಗೆ ಗಾಯ ಆಗಿದೆ, ಅವನಿಗೆ ಶಿಕ್ಷೆ ಆಗಬೇಕು ಎಂದು ಪತ್ನಿ ರಮ್ಯಾ ಆಗ್ರಹಿಸಿದರು.
In a deeply troubling incident that has rocked the local community, Saikumar, a resident of Bangalore, is accused of brutally assaulting his wife, Ramya, primarily targeting her weight and continuously pressuring her family for dowry. This appalling case highlights the urgent
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm