ಬ್ರೇಕಿಂಗ್ ನ್ಯೂಸ್
26-02-25 06:14 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.26 : ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿರುವಂತೆಯೇ ಹವಾಮಾನ ಇಲಾಖೆ ಅಲರ್ಟ್ ಸೂಚನೆ ನೀಡಿದ್ದು ಮುಂದಿನ ಮೂರು ದಿನಗಳಲ್ಲಿ ಬಿಸಿಲಿನ ವಾತಾವರಣ ಹೆಚ್ಚಿರಲಿದ್ದು, ಜನರು ಮಧ್ಯಾಹ್ನ ಸಮಯದಲ್ಲಿ ಹೆಚ್ಚು ಓಡಾಡದಂತೆ ಎಚ್ಚರಿಕೆ ನೀಡಿದೆ.
ಕರಾವಳಿಯಲ್ಲಿ ಉರಿ ಬಿಸಿಲು ಜೊತೆಗೆ ಭಾರೀ ಸೆಕೆಯ ಅನುಭವ ಆಗುತ್ತಿದೆ. ಬಿಸಿ ಅಲೆಯ ಪರಿಸ್ಥಿತಿಗಳು ಹೆಚ್ಚಲಿದ್ದು ಗರಿಷ್ಠ ಉಷ್ಣತೆ 35-38 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಲಿದ್ದು ಇದರ ತಾಪಮಾನ 40-50 ಡಿಗ್ರಿಯಷ್ಟು ಅನುಭವಕ್ಕೆ ಬರಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಈ ಅಲರ್ಟ್ ನೀಡಲಾಗಿದೆ.

ಹೊರ ಹೋಗದಂತೆ ಮುನ್ಸೂಚನೆ
37-39 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ಮಧ್ಯಾಹ್ನ 12 ರಿಂದ 3ರ ವರೆಗೆ ಹೆಚ್ಚು ಸಮಯ ಬಿಸಿಲಿಗೆ ಒಡ್ಡಿಕೊಂಡರೆ ಹೀಟ್ ಸ್ಟ್ರೋಕ್ಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಶಿಶುಗಳು, ವೃದ್ಧರು, ಹೊರಗೆ ಕೆಲಸ ಮಾಡುವವರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಪರಿಣಾಮ ಬೀರಲಿದೆ. ಇದರಿಂದ ಅತಿಯಾಗಿ ಬೆವರುವುದು, ನಿರ್ಜಲೀಕರಣ, ಆಯಾಸ ಮತ್ತು ಶಾಖಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚುವ ಸಾಧ್ಯತೆಯಿದೆ.
ಎಪ್ರಿಲ್, ಮೇ ತಿಂಗಳಲ್ಲಿ ಮತ್ತಷ್ಟು ಏರಿಕೆ
ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಎನ್. ಪುವಿಯರಸನ್ ಪ್ರಕಾರ, ಕರ್ನಾಟಕದ ಮೇಲೆ ಇರುವ ಪೂರ್ವ ಮಾರುತಗಳು ಕರಾವಳಿಯಲ್ಲಿ ಹೆಚ್ಚುತ್ತಿರುವ ತಾಪಮಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. "ಈ ಮಾರುತಗಳು ಭೂಮಿಯಿಂದ ಕರಾವಳಿಗೆ ಚಲಿಸುತ್ತವೆ, ಅವು ಕೆಲವೊಮ್ಮೆ ಅರೇಬಿಯನ್ ಸಮುದ್ರದಿಂದ ತೇವಾಂಶವನ್ನು ಸೆಳೆಯುತ್ತವೆ. ಇದರಿಂದ ಕರಾವಳಿಯಲ್ಲಿ ಆರ್ದ್ರತೆಯ ಮಟ್ಟ ಹೆಚ್ಚಾಗುತ್ತದೆ. ಹಗಲಿನ ಸಮಯದಲ್ಲಿ ಭೂಮಿ ಭಾರೀ ಬಿಸಿಯಾಗುತ್ತದೆ, ಮತ್ತು ಈ ಬೆಚ್ಚಗಿನ ಗಾಳಿಯು ಕರಾವಳಿಯ ಕಡೆಗೆ ಚಲಿಸುತ್ತದೆ, ಇದು ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವಿಜ್ಞಾನಿ ಹೇಳಿದ್ದಾರೆ.
The Indian Meteorological Department (IMD) has issued a heatwave/yellow alert for the coastal regions of Karnataka, warning of a significant rise in temperatures. The alert predicts hot and humid conditions in Udupi, Dakshina Kannada, and Uttara Kannada districts on February 26 and 27, with maximum temperatures expected to rise further.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm