ಬ್ರೇಕಿಂಗ್ ನ್ಯೂಸ್
15-02-25 12:26 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.15: ತನ್ನದೇ ಬ್ಯಾಚಿನ ಪೊಲೀಸ್ ಮಹಿಳಾ ಅಧಿಕಾರಿಯೊಂದಿಗೆ ಸೈಬರ್ ಕ್ರೈಮ್ ಎಸಿಪಿ ಗೋವರ್ಧನ್ ಲವ್ವಿ ಡವ್ವಿ ಆಡಿದ್ದು ಸ್ಕ್ರೀನ್ ಶಾಟ್ ಸಮೇತ ಹೊರಬಿದ್ದಿದೆ. ತನ್ನ ಮೇಲೆ ಹಲ್ಲೆ ನಡೆಸಿದಲ್ಲದೆ, ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಪತಿ ಗೋವರ್ಧನ್ ವಿರುದ್ಧ ಅವರ ಪತ್ನಿಯೇ ದೂರು ನೀಡಿದ್ದು ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂದಿರಾನಗರದ ಡಿಫೆನ್ಸ್ ಕಾಲೋನಿ ನಿವಾಸಿ ಅಮೃತ ಅವರು ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್ ಠಾಣೆ ಎಸಿಪಿ ಗೋವರ್ಧನ್, ಅವರ ತಾಯಿ ಜ್ಞಾನಮಣಿ, ಮಹಿಳಾ ಡಿವೈಎಸ್ಪಿ ಅಶ್ವಿನಿ ಕುಮಾರಿ ಮತ್ತು ಅವರ ತಂದೆ ಭೈರಮೂರ್ತಿ ಎಂಬವರ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಎಸಿಪಿಯಾಗಿರುವ ಗೋವರ್ಧನ್, 2014ರಲ್ಲಿ ಅಮೃತ ಅವರನ್ನು ಮದುವೆಯಾಗಿದ್ದು, ದಂಪತಿಗೆ 7 ವರ್ಷದ ಮಗಳಿದ್ದಾಳೆ.
ಈ ನಡುವೆ, 2022ರಲ್ಲಿ ಮೈಸೂರು ಪೊಲೀಸ್ ಅಕಾಡೆಮಿಗೆ ಗೋವರ್ಧನ್ ತರಬೇತಿಗೆ ಹೋಗಿದ್ದಾಗ, ಡಿವೈಎಸ್ಪಿ ಅಶ್ವಿನಿ ಪರಿಚಯವಾಗಿದ್ದು ಸ್ನೇಹಕ್ಕೆ ತಿರುಗಿತ್ತು. ಅಂದಿನಿಂದ ಪತಿ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ತನ್ನನ್ನು ನಿರ್ಲಕ್ಷಿಸಿದ್ದರು ಎಂದು ದೂರಿನಲ್ಲಿ ಪತ್ನಿ ಅಮೃತಾ ಆರೋಪಿಸಿದ್ದಾರೆ. ಈ ಮಧ್ಯೆ ಅಶ್ವಿನಿ, ಪತಿಗೆ ನಿರಂತರ ಕರೆ ಮಾಡುತ್ತಿದ್ದು ಅದನ್ನು ಪ್ರಶ್ನಿಸಿದಾಗ ಪತಿ ನನ್ನ ಮೇಲೆ ಹಲ್ಲೆ ನಡೆಸಿ ವಿಚ್ಚೇದನ ಕೊಡುವುದಾಗಿ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿ, ಮಹಿಳಾ ಅಧಿಕಾರಿಯನ್ನು ಸಂಪರ್ಕಿಸಿದಾಗ ಆಕೆಗೆ ವಿವಾಹವಾಗಿ 4 ವರ್ಷದ ಮಗು ಇರುವುದು ತಿಳಿದುಬಂದಿತ್ತು. ತನ್ನ ಪತಿಯಿಂದ ದೂರವಿರುವಂತೆ ಆಕೆಗೆ ಮನವಿ ಮಾಡಿದರೂ ಡಿವೈಎಸ್ಪಿ ಅಶ್ವಿನಿ ತಿರಸ್ಕರಿಸಿದ್ದರು.
ಪತಿಯ ಪೋಷಕರಿಗೂ ಪರಸ್ತ್ರೀಯೊಂದಿಗಿನ ಸ್ನೇಹದ ಬಗ್ಗೆ ಹೇಳಿದ್ದೇನೆ, ಆದರೆ ಅತ್ತೆ ನನ್ನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಆನಂತರ, ಪೋಷಕರ ಮನವಿ ಮೇರೆಗೆ ಡಿವೈಎಸ್ಪಿ ಅಶ್ವಿನಿಯಿಂದ ದೂರವಿರುವುದಾಗಿ ಪತಿ ಭರವಸೆ ನೀಡಿದ್ದರು. ಆದರೆ, 2023ರಿಂದ ಮತ್ತೆ ಸಂಪರ್ಕದಲ್ಲಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಫೆ.6ರಂದು ಹೈಗ್ರೌಂಡ್ಸ್ನಲ್ಲಿರುವ ಅಶ್ವಿನಿ ಮನೆಗೆ ಹೋದಾಗ ಆಕೆಯ ತಂದೆ ನನಗೆ ನಿಂದಿಸಿದ್ದರು. ಅಲ್ಲದೆ, ಪತಿ ಗೋವರ್ಧನ್, ಅಶ್ವಿನಿ ಮತ್ತು ಆಕೆಯ ತಂದೆ ಸೇರಿ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಶ್ವಿನಿ ಕೂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಮೃತಾ ದೂರಿನಲ್ಲಿ ಆರೋಪಿಸಿದ್ದಾರೆ.
Bangalore ACP Govardhan Gopal love story exposed, wife files complaint. According to wife Amruta's complaint, Govardhan changed while undergoing training at the Karnataka Police Academy in Mysuru in 2022 when he became close to the woman DySP. She said Govardhan began neglecting her and their daughter.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
11-07-25 08:55 pm
Mangalore Correspondent
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
11-07-25 10:10 pm
HK News Desk
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm