ಬ್ರೇಕಿಂಗ್ ನ್ಯೂಸ್
10-02-25 10:19 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.10: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗಾಗಿ ಪಟ್ಟು ಹಿಡಿದು ಭಿನ್ನರ ಬಣದ ನೇತೃತ್ವ ವಹಿಸಿ ಪದೇ ಪದೇ ದೆಹಲಿಗೆ ತೆರಳುತ್ತಿರುವ ರೆಬಲ್ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮತ್ತೆ ಶೋಕಾಸ್ ನೋಟಿಸ್ ನೀಡಿದೆ. ಈ ಬಾರಿ 72 ಗಂಟೆಗಳಲ್ಲಿ ಉತ್ತರ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.
ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರ ದೆಹಲಿಯ ಗೃಹ ಕಚೇರಿ ಉದ್ಘಾಟನೆ ನೆಪದಲ್ಲಿ ರಾಜ್ಯದ ಭಿನ್ನಮತೀಯ ನಾಯಕರು ಸೋಮವಾರವೂ ದೆಹಲಿ ತೆರಳಿದ್ದರು. ಬಸವನಗೌಡ ಯತ್ನಾಳ್ ನೇತೃತ್ವದ ತಂಡದಲ್ಲಿ ಕುಮಾರ್ ಬಂಗಾರಪ್ಪ, ಎನ್.ಆರ್ ಸಂತೋಷ್, ಬಿಪಿ ಹರೀಶ್, ಅರವಿಂದ ಲಿಂಬಾವಳಿ, ಮಹೇಶ್ ಕುಮಟಳ್ಳಿ ಇದ್ದರು. ಅಲ್ಲಿಯೇ ಲಿಂಗಾಯತ ನಾಯಕರ ಸಭೆ ನಡೆಸುವುದೆಂದು ಯತ್ನಾಳ್ ಹೇಳಿಕೊಂಡಿದ್ದರು. ಆದರೆ ಸೋಮಣ್ಣ ತನ್ನ ಕಚೇರಿಯಲ್ಲಿ ಭಿನ್ನಮತೀಯ ಸಭೆ ನಡೆಸುವುದಕ್ಕೆ ಅವಕಾಶ ನೀಡಿಲ್ಲ. ಇದೇ ವೇಳೆ, ತಟಸ್ಥ ಬಣದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಕೆಲವರು ಸೋಮಣ್ಣ ಜೊತೆಗೆ ಕುಳಿತು ಚರ್ಚಿಸುತ್ತಿರುವ ಫೋಟೋ ಲೀಕ್ ಆಗಿದೆ.
ಇದಲ್ಲದೆ, ದೆಹಲಿ ನಾಯಕರನ್ನು ಮತ್ತೊಮ್ಮೆ ಭೇಟಿಯಾಗುವುದಾಗಿ ತೆರಳಿದ್ದ ಯತ್ನಾಳ್ ಬಣಕ್ಕೆ ಯಾವೊಬ್ಬ ನಾಯಕರೂ ಭೇಟಿಗೆ ಸಿಕ್ಕಿಲ್ಲ. ಹೀಗಾಗಿ ಮತ್ತೆ ನಿರಾಸೆ ಅನುಭವಿಸಿದ್ದು, ಭಿನ್ನಮತೀಯರು ದೆಹಲಿಯಿಂದ ಹೈದರಾಬಾದ್ ನತ್ತ ಮರಳಿದ್ದಾರೆ. ಇದಕ್ಕೂ ಮೊದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬುಲಾವ್ ಮೇರೆಗೆ ವಿಜಯೇಂದ್ರ ದೆಹಲಿ ತೆರಳಿದ್ದು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಪ್ರತಿ ಬಾರಿ ಬಿಜೆಪಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವಾಗಿ ನಿಂದನೆ ಮಾಡುತ್ತಿರುವ ಯತ್ನಾಳ್ ಬಗ್ಗೆಯೂ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಯತ್ನಾಳ್ ಬಣ ದೆಹಲಿಯಲ್ಲಿ ಇರುವಾಗಲೇ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಮ್ ಪಾಠಕ್ ನೋಟಿಸ್ ಜಾರಿ ಮಾಡಿದ್ದಾರೆ.
‘ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪದೇ ಪದೇ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಹಿಂದಿನ ಶೋಕಾಸ್ ನೋಟಿಸಿಗೂ ನೀವು ಉತ್ತರ ನೀಡದೆ, ಉತ್ತಮ ನಡತೆ ತೋರುವುದಾಗಿ ನೀಡಿದ್ದ ಮಾತನ್ನೂ ಉಲ್ಲಂಘಿಸಿದ್ದೀರಿ. ಹೀಗಾಗಿ ನಿಮ್ಮ ಮೇಲೆ ಪಕ್ಷವು ಯಾಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಕೇಳಬಯಸುತ್ತದೆ. ಈ ನೋಟೀಸ್ ಪಡೆದ 72 ಗಂಟೆಗಳ ಒಳಗೆ ಉತ್ತರ ನೀಡಬೇಕಿರುತ್ತದೆ. ನಿಗದಿತ ಸಮಯ ಮಿತಿಯಲ್ಲಿ ಉತ್ತರ ದೊರಕದೇ ಇದ್ದರೆ ಪಕ್ಷದ ಶಿಸ್ತು ಕಮಿಟಿಯು ನಿಮಗೇನೂ ಹೇಳಲು ಉಳಿದಿಲ್ಲ, ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ ಎಂದು ನೋಟೀಸಿನಲ್ಲಿ ಎಚ್ಚರಿಕೆ ನೀಡಲಾಗಿದೆ.
ಆರು ತಿಂಗಳ ಹಿಂದೆಯೂ ಇದೇ ರೀತಿಯ ನೋಟೀಸನ್ನು ಯತ್ನಾಳ್ ಅವರಿಗೆ ನೀಡಲಾಗಿದ್ದರೂ, ಅವರು ಉತ್ತರ ನೀಡಿರಲಿಲ್ಲ. ತನಗೇನೂ ನೋಟೀಸ್ ಸಿಕ್ಕಿಯೇ ಇಲ್ಲ ಎಂದು ಹೇಳಿ ಓಡಾಡಿಕೊಂಡಿದ್ದರು. ಇದೀಗ ವಿಜಯೇಂದ್ರ ಮತ್ತು ಯತ್ನಾಳ್ ದೆಹಲಿಯಲ್ಲಿ ಇರುವಾಗಲೇ ಮತ್ತೊಮ್ಮೆ ನೋಟೀಸ್ ಜಾರಿಯಾಗಿದೆ. ಈ ಬಾರಿ ಯತ್ನಾಳ್ ಉಚ್ಚಾಟನೆಯಾಗುತ್ತಾರೋ ಅನ್ನುವ ರಾಜಕೀಯ ಕುತೂಹಲವೂ ಉಂಟಾಗಿದೆ. ಯಾಕಂದ್ರೆ, ವಿಜಯೇಂದ್ರ ನಡೆಗೆ ತೊಡರುಗಾಲಾಗಿ ನಿಂತು ಭಿನ್ನಮತೀಯ ನಾಯಕರ ಜೊತೆಗೂಡಿ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ತಲೆದೋರಲು ಕಾರಣವಾಗಿದ್ದರು. ಯತ್ನಾಳ್ ಈ ಹಿಂದೆಯೂ ಇದೇ ರೀತಿಯ ನಡೆಯಿಂದಾಗಿ ಪಕ್ಷದಿಂದ ಉಚ್ಛಾಟನೆ ಆಗಿದ್ದರು. ಈಗ ಮತ್ತೆ ಅದೇ ರೀತಿಯ ಅವಸ್ಥೆ ತಂದುಕೊಂಡ ರೀತಿ ತೋರುತ್ತಿದೆ.
The Karnataka BJP camp that is pushing for the removal of MLA B Y Vijayendra as state chief received a major jolt Monday as the party’s Central Disciplinary Committee issued a second show cause notice in three months to MLA Basangouda Patil Yatnal for breach of discipline.
02-05-25 10:52 am
Bangalore Correspondent
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am