ಬ್ರೇಕಿಂಗ್ ನ್ಯೂಸ್
30-01-25 10:58 am HK News Desk ಕರ್ನಾಟಕ
ಬೆಳಗಾವಿ, ಜ.30: ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ತಾಯಿ - ಮಗಳು ಸೇರಿ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಬೆಳಗಾವಿ ನಗರದಿಂದ ಒಟ್ಟು 60 ಜನರ ತಂಡ ಕುಂಭಮೇಳಕ್ಕೆ ಹೋಗಿದ್ದು ಜೊತೆಯಾಗಿರುವಾಗಲೇ ದುರಂತ ನಡೆದುಹೋಗಿತ್ತು.
ಬೆಳಗಾವಿ ನಗರದ ವಡಗಾವಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ(50), ಮಗಳು ಮೇಘನಾ ಹತ್ತರವಾಠ(25) ಮೃತಪಟ್ಟಿದ್ದಾರೆ. ಬೆಳಗಾವಿ ಶೆಟ್ಟಿ ಗಲ್ಲಿ ನಿವಾಸಿ ಅರುಣ ಕೋಪಾರ್ಡೆ ಮತ್ತು ಶಿವಾಜಿ ನಗರದ ನಿವಾಸಿ ಮಾಧುರಿ ಊರ್ಫ ಮಹಾದೇವಿ ಬಾವನೂರು ಅಸುನೀಗಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯೇ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಇವೆರಲ್ಲರೂ ಒಟ್ಟಾಗಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಅರುಣ ಕೋರ್ಪಡೆ ಪತ್ನಿ ಕಾಂಚನಾ ಫೇಸ್ಬುಕ್ ಲೈವ್ ನಲ್ಲಿ ಜನದಟ್ಟಣೆ ಬಗ್ಗೆ ಬಿಚ್ಚಿಟ್ಟಿದ್ದರು. ಅಲ್ಲದೇ ಕರ್ನಾಟಕದಿಂದ ಬರೋರು ಹುಷಾರಾಗಿ ಬನ್ನಿ ಎಂದೂ ಎಚ್ಚರಿಕೆ ಕೊಟ್ಟಿದ್ದರು. ಇದೇ ವೇಳೆ ಕಾಲ್ತುಳಿತ ಆಗಿದ್ದು 60 ಜನರ ಗುಂಪು ಚೆಲ್ಲಾಪಿಲ್ಲಿಯಾಗಿದೆ. ಗಂಭೀರ ಗಾಯಕೊಂಡಿದ್ದ ಜ್ಯೋತಿ, ಮೇಘನಾ, ಅರುಣ ಮತ್ತು ಮಹಾದೇವಿಯನ್ನ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಉಸಿರುಗಟ್ಟಿ ಇವರು ಮೃತಪಟ್ಟಿದ್ದಾರೆ.
ಸುದ್ದಿ ಗೊತ್ತಾಗುತ್ತಿದ್ದಂತೆ ಮೃತರ ಮನೆಗೆ ಶಾಸಕರಾದ ಅಭಯ ಪಾಟೀಲ್, ಆಶೀಫ್ ಸೇಠ್, ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೆ, ಪ್ರಯಾಗರಾಜ್ ಆಸ್ಪತ್ರೆಯಲ್ಲಿ ಇರುವ ಮೃತದೇಹಗಳನ್ನ ಬೆಳಗಾವಿ ಕರೆತರಲು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವರೊಂದಿಗೆ ಶಾಸಕ ಅಭಯ ಪಾಟೀಲ್ ಮಾತನಾಡಿದರು.
ಪ್ರಕರಣ ಸಂಬಂಧಿಸಿ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಹೇಳಿಕೆ ನೀಡಿದ್ದು ನಾಲ್ಕು ಜನ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡಿದ್ದೇವೆ. ಬೆಳಗಾವಿಯ ಇಬ್ಬರು ಸೀನಿಯರ್ ಅಧಿಕಾರಿ ಹರ್ಷ ಶೆಟ್ಟಿ ಸ್ಪೆಷಲ್ ಡಿಸಿ, ಶೃತಿ ಬೆಳಗಾವಿ ಹೆಚ್ಚುವರಿ ಎಸ್ಪಿ ಅವರನ್ನ ಇದಕ್ಕಾಗಿ ನೇಮಕ ಮಾಡಿದ್ದೇವೆ. ಅವರು ಈ ಕೂಡಲೇ ದೆಹಲಿಗೆ ತೆರಳಿ ಬೆಳಗಾವಿಗೆ ಶವ ಕರೆತರಲು ವ್ಯವಸ್ಥೆ ಮಾಡಲಿದ್ದಾರೆ. ಗಾಯಾಳುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಪ್ರಯಾಗ್ರಾಜ್ ನಲ್ಲಿ ಲೋಡ್ ಜಾಸ್ತಿ ಇದೆ. ಹೀಗಾಗಿ ಆ್ಯಂಬುಲೆನ್ಸ್ ಮೂಲಕ ದೆಹಲಿಗೆ ಶವ ಶಿಫ್ಟ್ ಮಾಡ್ತೇವೆ ಎಂದು ತಿಳಿಸಿದ್ದಾರೆ.
ನಾಲ್ವರು ಸಾವು ಖಚಿತವಾಗಿದ್ದು ತಂಡದಲ್ಲಿದ್ದ ಇತರೇ 56 ಮಂದಿ ಬಸ್ಸಿನಲ್ಲಿ ಪ್ರಯಾಗರಾಜ್ ನಿಂದ ಬೆಳಗಾವಿಗೆ ಹೊರಟಿದ್ದಾರೆ.
Four people from Karnataka, including a woman and her daughter, were among those who lost their lives in the stampede at the Maha Kumbh in Prayagraj, on Wednesday.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm