ಬ್ರೇಕಿಂಗ್ ನ್ಯೂಸ್
28-01-25 03:05 pm HK News Desk ಕರ್ನಾಟಕ
ಹುಬ್ಬಳ್ಳಿ , ಜ 28: ಏನೇ ಮಾಡಿದ್ರೂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪಾಪ ಹೋಗಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ. ಈ ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. ದೇಶದ ವ್ಯವಸ್ಥೆ ಹಾಳುಮಾಡಿರೋದು ಪಾಪ ಅಲ್ವಾ ಎಂದು ಕಿಡಿಕಾರಿದರು.
ಖರ್ಗೆ ಸಾಹೇಬರು ಹೇಳಿದ್ದು ಸರಿಯಾಗಿದೆ;
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂತೋಷ್ ಲಾಡ್ ಅವರು, ಗಂಗಾ ಸ್ನಾನ ಮಾಡಿದ ತಕ್ಷಣ ಮೋದಿ, ಅಮಿತ್ ಶಾ ಪಾಪ ಹೋಗಲ್ಲ, ಏನೇ ಮಾಡಿದ್ರು ಅವರ ಪಾಪ ಕಡಿಮೆ ಆಗಲ್ಲ. ದೇಶದ ಅರ್ಥ ವ್ಯವಸ್ಥೆ ಮೂಲೆ ಗುಂಪಾಗಿದೆ. ಎರಡು ಲಕ್ಷ ಕಿರಾಣಿ ಅಂಗಡಿ ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ.? ಖರ್ಗೆ ಸಾಹೇಬರು ಹೇಳಿದ್ದು ಸರಿ ಇದೆ. ಪಾಪ ಮಾಫಿ ಆಗಲ್ಲ ಎಂದರು.
ಅಮಿತ್ ಶಾ, ಮೋದಿ ಪಾಪ ಎಲ್ಲಿ ಹೋದ್ರೂ ತೊಳೆಯೋಕೆ ಆಗಲ್ಲ ;
ಬಿಜೆಪಿಯವರು ದೇಶದ ಸಾಲದ ಬಗ್ಗೆ ಯಾಕೆ ಮಾತಾಡಲ್ಲ. ನಾನೊಬ್ಬ ಹಿಂದೂ ಇದೀನಿ, ಅಮಿತ್ ಶಾ ಹಾಗೂ ಮೋದಿ ಪಾಪ ಎಲ್ಲಿ ಹೋದ್ರೂ ತೊಳೆಯೋಕೆ ಆಗಲ್ಲ. ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೀವಿ. ಹೊಸತನದ ರಾಜಕೀಯ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ವಾಟ್ಸಪ್ ಯುನಿವರ್ಸಿಸಿ ಫೈನಲ್ ಅಲ್ಲ. ಯುವ ಜನತೆ ಅರ್ಥ ಮಾಡಕೊಬೇಕು. ದೇಶ ಬಿಜೆಪಿ-ಕಾಂಗ್ರೆಸ್ ನವರ ಸ್ವತ್ತಲ್ಲ ಎಂದರು.
ಕೇಂದ್ರ ಬಜೆಟ್ ಟೀಕಿಸಿದ ಲಾಡ್
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಲಾಡ್, ಕೇಂದ್ರ ಬಜೆಟ್ ಬಗ್ಗೆ ಯಾವುದೇ ನೀರಿಕ್ಷೆ ಇಲ್ಲ, ಎಲ್ಲ ಡಬ್ಬಾ ಎಂದರು. ಬರೋದು ಹಿಂದೂಗಳ ಬಗ್ಗೆ ಮಾತಾಡೋದು, ಹಿಂದೂ-ಮುಸ್ಲಿಂ ಸೆಂಟಿಮೆಂಟ್ ಬಿಟ್ರೆ ಏನಿಲ್ಲ. ಯಾವ ಹಿಂದೂಗಳಿಗೆ ಏನಾಗಿದೆ, ಅದರ ಡಿಟೇಲ್ಸ್ ಕೊಡ್ತಾರಾ?. ಜಿಡಿಪಿ ಗ್ರೋಥ್ ಬಗ್ಗೆ ಸ್ಪಷ್ಟೀಕರಣ ಕೊಡ್ತಾರಾ..? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಹಾಗಾಗಿದೆ ಬಿಜೆಪಿ ಸ್ಥಿತಿ. ಮೇಕ್ ಇನ್ ಇಂಡಿಯಾದಲ್ಲಿ ಏನಾಗಿದೆ. ಏನೋ ಒಂದು ಹೇಳೋದು, ಹೋಗೋದು ಎಂದರು.
ಶ್ರೀರಾಮುಲು ಕಾಂಗ್ರೆಸ್ ಬಂದ್ರೆ ಸ್ವಾಗತ;
ಇನ್ನೂ ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಅವರು, ರಾಮುಲು ನನಗೆ ವಂಡರ್ ಫುಲ್ ಫ್ರೆಂಡ. ನಾನು ರಾಮುಲು ಜೊತೆ ಮಾತಾಡಿಲ್ಲ. ರಾಮುಲು ಕಾಂಗ್ರೆಸ್ ಗೆ ಬಂದರೆ ಸ್ವಾಗತ. ಶ್ರೀರಾಮುಲು ಮೋಸ್ಟ್ ಹಂಬಲ್ ಪರ್ಸನ್. ರಾಮುಲು ವಂಡರ್ ಫುಲ್ ಫ್ರೆಂಡ್. ನಾನು ಪಕ್ಷಕ್ಕೆ ಬಂದರೆ ಸ್ವಾಗತ ಮಾಡ್ತೀನಿ. ನನಗೇನೂ ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್, ಯಾರಾದರೂ ಬರಬಹುದು ಹೋಗಬಹುದು ಎಂದು ಹೇಳಿದರು.
Narendra Modi, Amit Shah sins will never be forgiven ever, santosh lad on BJP leaders taking dip in Ganga. On a day Union Home Minister Amit Shah took a dip at the Triveni Sangam, Congress president Mallikarjun Kharge on Monday alleged that BJP leaders were competing for the cameras and asked if poverty could be removed by such an act.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 11:09 pm
Mangalore Correspondent
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm