ಬ್ರೇಕಿಂಗ್ ನ್ಯೂಸ್
25-01-25 09:58 pm Bangalore Correspondent ಕರ್ನಾಟಕ
ಬೆಂಗಳೂರು, ಜ. 25: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತದ ಅತ್ಯನ್ನತ ಗೌರವದ ಪೈಕಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಧಕರ ಪಟ್ಟಿಯನ್ನು ಪ್ರಕಟಿಸಲಾಗಿದೆ. 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ರಾಜ್ಯದಿಂದ ಕಲಬುರಗಿ ಮೂಲದ ಡಾ. ವಿಜಯಲಕ್ಷ್ಮಿ ದೇಶಮಾನೆ, ಬಾಗಲಕೋಟೆ ಮೂಲದ ವೆಂಕಪ್ಪ ಅಂಬಾಜಿ ಸುಗತೇಕರ್ ಹಾಗೂ ಕೊಪ್ಪಳ ಮೂಲದ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ಪದಗಳನ್ನು ಹಾಡುತ್ತಿದ್ದಾರೆ. ಜಾನಪದ ಗಾಯಕ ಸುಗತೇಕರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ 110ನೇ ಮನ್ ಕೀ ಬಾತ್ ರೇಡಿಯೋ ಸರಣಿಯಲ್ಲೂ ಗುಣಗಾನ ಮಾಡಿದ್ದರು. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ.
ಹಣವನ್ನೇ ಪಡೆಯದೆ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. 81 ವರ್ಷದ ವೆಂಕಪ್ಪ ಅಂಬಾಜಿಯವರು, ಕಳೆದ 71 ವರ್ಷಗಳಿಂದ ಪದಗಳನ್ನು ಹಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗಾಗಿ ಅವರಿಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು.
ಭೀಮವ್ವ ಶಿಳ್ಳೇಕ್ಯಾತ ಇವರು ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು, ತೊಗಲು ಗೊಂಬೆ ಕಲಾವಿದರಾಗಿ 75 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಕಲಾವಿದೆಯೂ ಆಗಿದ್ದಾರೆ. ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇಳಿ ವಯಸ್ಸಿನಲ್ಲೂ ತೊಗಲು ಗೊಂಬೆಯಾಟವನ್ನು ಮನ ಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೆರಿಕ, ಇರಾನ್, ಸ್ವಿಜರ್ಲ್ಯಾಂಡ್ ಮೊದಲಾದೆಡೆ ಪ್ರದರ್ಶನ ನೀಡಿದ್ದಾರೆ.
ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರು. ಮೂಲತಃ ಗುಲ್ಬರ್ಗ ಜಿಲ್ಲೆಯಲ್ಲಿ ಜನಿಸಿದವರು. ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ). ಎಫ್.ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸರ್ಜರಿ ಪ್ರಾಧ್ಯಾಪಕರಾಗಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿದ್ದು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಇದಲ್ಲದೆ, ದೇಶ ವಿದೇಶಗಳಲ್ಲಿ ಸಾಧನೆ ಮಾಡಿರುವ ನರೇನ್ ಗುರುಂಗ್ (ಜಾನಪದ ಗಾಯಕ) – ನೇಪಾಳ, ಹರಿಮನ್ ಶರ್ಮಾ (ಸೇಬು ಬೆಳೆಗಾರ) – ಹಿಮಾಚಲ ಪ್ರದೇಶ, ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಸಾಮಾಜಿಕ ಕಾರ್ಯಕರ್ತ) – ಅರುಣಾಚಲ ಪ್ರದೇಶ, ವಿಲಾಸ್ ಡಾಂಗ್ರೆ (ಹೋಮಿಯೋಪತಿ ವೈದ್ಯ) – ಮಹಾರಾಷ್ಟ್ರ, ಜೋನಾಸ್ ಮಾಸೆಟ್ಟಿ (ವೇದಾಂತ ಗುರು) ಬ್ರೆಜಿಲ್, ಹರ್ವಿಂದರ್ ಸಿಂಗ್ (ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ) - ಹರಿಯಾಣ, ಭೀಮ್ ಸಿಂಗ್ ಭಾವೇಶ್ (ಸಮಾಜ ಕೆಲಸ) ಬಿಹಾರ, ಪಿ.ದಕ್ಷಿಣಾ ಮೂರ್ತಿ (ಡೋಲು ಕಲಾವಿದ) ಪುದುಚೇರಿ, ಎಲ್. ಹ್ಯಾಂಗ್ಥಿಂಗ್ (ಕೃಷಿ- ಹಣ್ಣುಗಳು) ನಾಗಾಲ್ಯಾಂಡ್, ಬೇರು ಸಿಂಗ್ ಚೌಹಾಣ್ (ಜಾನಪದ ಗಾಯಕ) – ಮಧ್ಯಪ್ರದೇಶ, ಶೇಖಾ ಎ.ಜೆ. ಅಲ್ ಸಬಾಹ್ (ಯೋಗ) – ಕುವೈತ್ ಅವರನ್ನೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
The Central Government on Saturday announced the prestigious Padma Shri awards on the occasion of Republic Day, recognizing excellence across various fields. Among the awardees, three distinguished individuals from Karnataka—Venkappa Ambaji Sugatekar from Bagalkot, Vijayalakshmi Deshmane from Kalaburagi, and Bhimavva Doddabalappa Shillekyathara from Koppal—have been conferred with the honour for their contributions in folk art, medicine, and puppetry, respectively.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 11:09 pm
Mangalore Correspondent
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm