ಬ್ರೇಕಿಂಗ್ ನ್ಯೂಸ್
25-01-25 06:17 pm Bangalore Correspondent ಕರ್ನಾಟಕ
ಬೆಂಗಳೂರು, ಜ.25: ರಾಜ್ಯ ಬಿಜೆಪಿಯ ಬಣ ಸಂಘರ್ಷ, ಆಂತರಿಕ ಕಲಹಕ್ಕೆ ಅಂತ್ಯ ಹಾಡಲು ಕಡೆಗೂ ಆರೆಸ್ಸೆಸ್ ನಾಯಕರು ಮುಂದಾಗಿರುವಂತಿದೆ. ಬಸವನಗೌಡ ಯತ್ನಾಳ್ ಬಣದ ತೀವ್ರ ಅಪಸ್ವರದ ಬಳಿಕ ಬಳ್ಳಾರಿಯಲ್ಲಿ ಮಾಜಿ ಸಚಿವ ರಾಮುಲು ಕೂಡ ಪಕ್ಷದ ನಾಯಕರ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಪಕ್ಷ ಬಿಡುವ ಆಲೋಚನೆ ಇಲ್ಲ ಎಂದಿದ್ದರೂ, ಪಕ್ಷದ ನಾಯಕರ ಬಗ್ಗೆ ಅಸಮ್ಮತಿ ತೋರಿಸಿದ್ದು ರಾಜ್ಯ ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಇದನ್ನೆಲ್ಲ ಆರೆಸ್ಸೆಸ್ ಮುಖಂಡರು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ತಂಡಕ್ಕೆ ಮೂಗುದಾರ ಹಾಕಲು ಮತ್ತೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆ ಸೃಜಿಸಲು ಚಿಂತನೆ ನಡೆಸಿದ್ದಾರೆ.
ಯತ್ನಾಳ್ ಏನೇ ಬಡಿದಾಟ ಮಾಡಿದರೂ ಕ್ಯಾರೆನ್ನದ ಹೈಕಮಾಂಡ್ ನಾಯಕರು ಎಸ್ಟಿ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ಸಿಡಿದು ನಿಂತೊಡನೆ ಅವರಿಗೆ ನೇರವಾಗಿ ಕರೆ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೇ ಕರೆ ಮಾಡಿ, ಏನೇ ಮುನಿಸಿದ್ದರೂ ದೆಹಲಿಗೆ ಬನ್ನಿ, ನಿಮ್ಮ ಅಹವಾಲು ಕೇಳಿಸಿಕೊಳ್ಳುತ್ತೇವೆ ಎನ್ನುವ ಮಾತನ್ನು ಹೇಳಿದ್ದಾರೆ. ಇವೆಲ್ಲ ನೋಡಿದರೆ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ. ಯತ್ನಾಳ್ ಮತ್ತವರ ಜೊತೆಗಿರುವ ನಾಯಕರು ರಾಜ್ಯಾಧ್ಯಕ್ಷ ಬದಲಾವಣೆಗೆ ಕೂಗು ಹಾಕುತ್ತಿದ್ದರೆ, ಆರೆಸ್ಸೆಸ್ ನಾಯಕರು ಪಕ್ಷದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ.
ಒಂದೆಡೆ ವಿಜಯೇಂದ್ರ ಮೇಲೆ ಅಂಕುಶ ಹಾಕುವುದರೊಂದಿಗೆ ಹಿರಿಯ ನಾಯಕರು ಬಹಿರಂಗ ಹೇಳಿಕೆ ನೀಡುವುದನ್ನು ತಡೆದು ಪಕ್ಷದಲ್ಲಿ ಶಿಸ್ತು ಸ್ಥಾಪಿಸಬೇಕೆಂಬ ಲೆಕ್ಕಾಚಾರ ವರಿಷ್ಠರಲ್ಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರೂ ಭಾಗವಹಿಸಿದ್ದು, ರಾಜ್ಯ ಬಿಜೆಪಿಗೆ ಸಂಘಟನಾ ಕಾರ್ಯದರ್ಶಿ ನೇಮಕ ಕುರಿತಾಗಿ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿಯಿದೆ.
ಮೂಲಗಳ ಪ್ರಕಾರ, ಉತ್ತರ ಕರ್ನಾಟಕದ ಆರೆಸ್ಸೆಸ್ ಪ್ರಮುಖರನ್ನೇ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ತಂದು ಆ ಭಾಗದ ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಚಿಂತನೆಯಾಗಿದೆ. ಇದಕ್ಕಾಗಿ ಹಿರಿಯ ವ್ಯಕ್ತಿಯೊಬ್ಬರನ್ನು ಆ ಹುದ್ದೆಗೇರಿಸಬೇಕೆಂಬ ಚಿಂತನೆ ಕೆಲವರದ್ದು ಬಂದಿದೆ ಎನ್ನಲಾಗಿದೆ. ಸದ್ಯ ಉತ್ತರ ಪ್ರಾಂತ ಕಾರ್ಯವಾಹ ಜವಾಬ್ದಾರಿ ಹೊಂದಿರುವ ನರೇಂದ್ರ ಅವರ ಹೆಸರಿನ ಬಗ್ಗೆಯೂ ಚರ್ಚೆಯಾಗಿದ್ಯಂತೆ. ಈ ಹಿಂದೆ ಪ್ರಚಾರಕ್ ಜವಾಬ್ದಾರಿ ಹೊಂದಿದ್ದ ದಕ್ಷಿಣ ಕನ್ನಡ ಮೂಲದ ರಾಜೇಶ್ ಕುಂತೂರು ಅವರನ್ನು ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಬೆನ್ನಲ್ಲೇ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದರೂ, ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡಿರಲಿಲ್ಲ. ಈ ನಡುವೆಯೇ ಕೇಂದ್ರ ನಾಯಕರು ಪಕ್ಷದ ಮೇಲೆ ಆರೆಸ್ಸೆಸ್ ಹಿಡಿತ ತಪ್ಪಿಸುವುದಕ್ಕಾಗಿ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನೇ ಖಾಲಿ ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿಬಂದಿತ್ತು.
ಕಳೆದ ಬಾರಿ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಹೀನಾಯ ಸೋತ ಬಳಿಕ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕ ಮಾಡಲಾಗಿತ್ತು. ರಾಜೇಶ್ ಕುಂತೂರು – ವಿಜಯೇಂದ್ರ ಜೋಡಿ ಚೆನ್ನಾಗಿಯೇ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎನ್ನುತ್ತಿರುವಾಗಲೇ ಲೋಕಸಭೆ ಚುನಾವಣೆ ಬಳಿಕ ರಾಜೇಶ್ ಅವರನ್ನು ದಿಢೀರ್ ಎನ್ನುವಂತೆ ಪಕ್ಷದ ಕೆಲಸದಿಂದ ಹೊರಗಿಡಲಾಗಿತ್ತು. ಆನಂತರ, ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಮಾತ್ರ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಕಿಡಿಕಾರುವುದನ್ನು ಮುಂದುವರಿಸಿದ್ದರು. ಕಳೆದ ಬಾರಿ ವಕ್ಫ್ ವಿಚಾರ ಗಲಾಟೆಗೆ ಕಾರಣವಾದಾಗ ಇನ್ನೊಂದಷ್ಟು ಅತೃಪ್ತ ನಾಯಕರು ಯತ್ನಾಳ್ ಜೊತೆಗೂಡಿದ್ದರು. ಅಲ್ಲದೆ, ಈ ವಿರೋಧಿ ಬಣಕ್ಕೊಂದು ಸಾಂಸ್ಥಿಕ ರೂಪ ಕೊಡುವ ಯತ್ನವನ್ನೂ ಮಾಡಿದ್ದರು. ಆದರೆ ಅದು ಸಫಲವಾಗಲಿಲ್ಲ.
ಆನಂತರವೂ, ವಿಜಯೇಂದ್ರ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬಂದಾಗ ಸಂಘಟನಾ ಪರ್ವದ ನೆಪದಲ್ಲಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬಗ್ಗೆ ಮಾತು ಬಂದಿತ್ತು. ಆದರೆ ಜಿಲ್ಲೆ, ಮಂಡಲ ಮಟ್ಟದಲ್ಲಿ ಆಯ್ಕೆ ಆಗುತ್ತಿರುವಾಗಲೇ ಮತ್ತೆ ರಾಮುಲು ಎಪಿಸೋಡ್ ಮುಂಚೂಣಿಗೆ ಬಂದಿತ್ತು. ಇತ್ತೀಚೆಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಕ್ಕೆ ಬಂದಾಗಲೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತೆ ಎನ್ನುವ ಸುಳಿವು ಕೊಟ್ಟಿದ್ದರು. ಇದರ ಬೆನ್ನಲ್ಲೇ ಯತ್ನಾಳ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಅಭ್ಯರ್ಥಿ ಎನ್ನುತ್ತ ಸ್ಪರ್ಧಿಸಲು ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆಯೇ ಸಂಘಟನಾ ಕಾರ್ಯದರ್ಶಿ ನೇಮಕ ವಿಚಾರ ಮುನ್ನೆಲೆಗೆ ಬಂದಿದೆ. ಅದರ ಮೇಲಾದರೂ ರಾಜ್ಯ ಬಿಜೆಪಿ ಬಿಕ್ಕಟ್ಟು ಶಮನಗೊಳ್ಳಲಿ ಎಂಬ ಆಶಯ ಕೇಂದ್ರ ನಾಯಕರದ್ದು ಇರಬಹುದು.
Amid faction fights and dissidence within the party, BJP State president B.Y. Vijayendra rushed to New Delhi on Friday. Sources said he was meeting certain leaders in the party’s high command to discuss the emerging situation within the party’s State unit.
19-10-25 07:00 pm
HK News Desk
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
MLA K.N. Rajanna: ರಸ್ತೆಯಲ್ಲಿ ನಮಾಜ್ ಮಾಡಲು ಮುಸ್...
18-10-25 09:11 pm
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
19-10-25 10:32 pm
Mangalore Correspondent
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
ದಿನೇಶ್ ಮಟ್ಟುಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ,...
18-10-25 11:01 pm
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
19-10-25 11:09 pm
Mangalore Correspondent
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm