ಬ್ರೇಕಿಂಗ್ ನ್ಯೂಸ್
25-01-25 12:50 pm Bangalore Correspondent ಕರ್ನಾಟಕ
ಬೆಂಗಳೂರು, ಜ 25: ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರ ಮೇಲೆ ಜ. 24ರಂದು ಸಂಜೆ ಹಲ್ಲೆಯಾಗಿದೆ. ಜ. 23ರಂದು ಅವರು ಕೊಡಿಗೇಹಳ್ಳಿಯಲ್ಲಿನ ತಮ್ಮ ನಿವಾಸದ ಬಳಿ, ಅಣ್ಣಮ್ಮ ಕೂರಿಸಿ ತಮ್ಮ ಲೇಔಟ್ ಒಂದರ ದಾರಿಯನ್ನು ಬಂದ್ ಮಾಡಿದ್ದಕ್ಕೆ ಆ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದರು. ಆ ಸಂದರ್ಭದಲ್ಲಿ ಕೆಲವು ಸ್ಥಳೀಯ ಹುಡುಗರು ಸೇರಿಕೊಂಡು ಹಲ್ಲೆ ಮಾಡಿದ್ದರು. ಆದರೆ, ಶುಕ್ರವಾರ (ಜ. 24) ಸಂಜೆ ಜಗದೀಶ್ ಅವರು ಅದೇ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಅವರ ಮೇಲೆ ಹಲ್ಲೆಯಾಗಿದೆ.
ಜ. 21ರಂದು ಅವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆ ಬಗ್ಗೆ ಜಗದೀಶ್ ಅವರು ವಿಚಾರಿಸಿದಾಗ, ಅ ರಸ್ತೆಯ ಒಂದು ತುದಿಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಲು ವೇದಿಕೆ ಸಿದ್ಧಪಡಿಸಲಾಗಿದ್ದು ಅದಕ್ಕಾಗಿ ರಸ್ತೆ ಬಂದ್ ಆಗಿದೆ ಎಂಬ ವಿಚಾರ ತಿಳಿಯಿತು. ಕೂಡಲೇ ಹೋಗಿ ಅವರು ಅಲ್ಲಿ ಅಣ್ಣಮ್ಮ ದೇವಿ ಉತ್ಸವ ಕೂರಿಸಿದ್ದ ಯುವಕರ ತಂಡವೊಂದಕ್ಕೆ ಕ್ಲಾಸ್ ತೆಗದುಕೊಂಡು, ಜನರು ಅಡ್ಡಾಡುವ ರಸ್ತೆಯನ್ನು ಹೀಗೆ ಆಕ್ರಮಿಸಿಕೊಂಡರೆ ಹೇಗೆ ಪ್ರಶ್ನಿಸಿದರು. ಆಗ, ಮಾತಿಗೆ ಮಾತು ಬೆಳೆದು ಜಗಳವಾಯಿತು.
ಈ ಸಂದರ್ಭದಲ್ಲಿ ಕೆಲವು ಯುವಕರು ಜಗದೀಶ್ ಅವರನ್ನು ಎಳೆದಾಡಿದ್ದು ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಜಗದೀಶ್, ತಾವು ಸಾರ್ವಜನಿಕರ ರಸ್ತೆ ಬಂದ್ ಮಾಡಿದ್ದೇಕೆ ಎಂದು ಕೇಳಿದ್ದೇ ದೊಡ್ಡ ತಪ್ಪಾಗಿ ಜನರಿಗೆ ಕಂಡಿತು ಎಂದು ಬೇಸರ ವ್ಯಕ್ತಪಡಿಸಿದ್ದರು.
ಅದಾಗಿ ಮರುದಿನ ಜ. 24ರಂದು ಸಂಜೆ ಹೊತ್ತಿಗೆ ಅದೇ ರಸ್ತೆಯಲ್ಲಿ ಜಗದೀಶ್ ಅವರು ತಮ್ಮ ಕಾರಿನಲ್ಲಿ ಬಂದಿದ್ದಾಗ ಅವರ ಮೇಲೆ ಕೆಲವು ಜನರು ಹಲ್ಲೆ ಮಾಡಿದ್ದಾರೆ. ಮೊದಲು ಅವರ ಕಾರು ನಿಲ್ಲಿಸಿ ವಾಗ್ವಾದಕ್ಕಿಳಿದ ಅವರು ಜಗದೀಶ್ ಅವರು ಕಾರಿನಿಂದ ಕೆಳಗಿಳಿದು ಮಾತನಾಡುವಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 100 ಜನರು ಇದ್ದರೆಂದು ಹೇಳಲಾಗಿದೆ.
ಜ. 23ರಂದು ನಡೆದಿದ್ದ ತಳ್ಳಾಟ, ನೂಕಾಟದಲ್ಲಿ ಬಹುಮುಖ್ಯವಾಗಿ ನಾಗರಾಜ್ ಎಂಬುವರು ಜಗದೀಶ್ ಮೇಲೆ ಹಲ್ಲೆ ಮಾಡಿದ್ದರು. ಜ. 24ರಂದು ನಡೆದಿರುವ ಗಲಾಟೆಯಲ್ಲಿ ನಾಗರಾಜ್ ಅವರು ಕರೆಯಿಸಿರುವ ಜನ ಎಂದು ಹೇಳಲಾಗುತ್ತಿದೆ. ಹಲ್ಲೆ ನಡೆಸಿದ ನಂತರ ಅವರ ಕಾರನ್ನು ಜನರು ಪುಡಿಗಟ್ಟಿದ್ದಾರೆ. ಅಷ್ಟರಲ್ಲಿ ಜಗದೀಶ್ ಅವರ ಗನ್ ಮ್ಯಾನ್ ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ, ಗುಂಪು ಚದುರಿಹೋಗಿದೆ.
ಆನಂತರ, ಗನ್ ಮ್ಯಾನ್ ಅವರು ಜಗದೀಶ್ ರನ್ನು ಕರದುಕೊಂಡು ಸಹಕಾರ ನಗರದಲ್ಲಿರುವ ಜಗದೀಶ್ ಅವರ ನಿವಾಸಕ್ಕೆ ತಲುಪಿಸಿದ್ದಾರೆ. ಆದರೆ, ಗಲಾಟೆ ನಡೆಸಿದ ವ್ಯಕ್ತಿಗಳು ಅವರ ಮನೆಗೂ ಹೋಗಿ ಅಲ್ಲಿಯೂ ಅವರನ್ನು ಬಾಯಿಗೆ ಬಂದಂತೆ ನಿಂದಿಸಿ ಗಲಭೆಗೆ ಮತ್ತೊಮ್ಮೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
200 ಜನ ಅಟ್ಯಾಕ್ ಮಾಡಿದ್ರು ;
ಫೇಸ್ಬುಕ್ ಲೈವ್ನಲ್ಲಿ ತನ್ನ ಮೇಲಾದ ಅಟ್ಯಾಕ್ ಬಗ್ಗೆ ಜಗದೀಶ್ ಮಾತಾಡಿದ್ದಾರೆ. ಇವತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪೊಲೀಸರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ನನ್ನ ಫ್ಯಾಮಿಲಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಜಗದೀಶ್ ವಿಡಿಯೋದಲ್ಲಿ ಹೇಳಿದ್ದಾರೆ.
ನಾನು ಸತ್ರು ಪರವಾಗಿಲ್ಲ, ಇದನ್ನು ವಿರೋಧಿಸುವೆ ;
‘ನನ್ನ ಗನ್ ಮ್ಯಾನ್ಗೆ ಮಚ್ಚು ದೊಣ್ಣೆಯಿಂದ ಹೊಡೆದಿದ್ದಾರೆ. ನನಗೆ ರಕ್ತ ಬರುವಂತೆ ಹೊಡೆದಿದ್ದಾರೆ ನಾನು ಸತ್ರು ಪರವಾಗಿಲ್ಲ ಆದ್ರೆ ನಾನು ಇದನ್ನು ವಿರೋಧಿಸುತ್ತೇನೆ ಎಂದು ಜಗದೀಶ್ ಆಕ್ರೋಶ ಹೊರಹಾಕಿದ್ದಾರೆ.
ಇಂತಹ ನಾಚಿಗೆಗೇಡಿನ ಸಮಾಜದಲ್ಲಿ ನಾವು ಬದುಕಬೇಕು, ನಮ್ಮ ಮಕ್ಕಳು ಬದುಕಬೇಕು ಅನ್ನೋದೆ ಬೇಸರ. ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಯತ್ನಿಸಿದ್ರು. ನನ್ನ ಮಗನ ಮೇಲೂ ಅಟ್ಯಾಕ್ ಆಗಿದೆ ಎಂದು ಜಗದೀಶ್ ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಹೋಗಿ ಜಗದೀಶ್ ದೂರು ಕೊಟ್ಟಿದ್ದಾರೆ.
ಇನ್ನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯೇ ಪೊಲೀಸರು ಲಾಯರ್ ಜಗದೀಶ್, ಪುತ್ರ ಹಾಗೂ ಇಬ್ಬರು ಗನ್ಮ್ಯಾನ್ಗಳನ್ನ ಅರೆಸ್ಟ್ ಮಾಡಿದ್ದಾರೆ.
ನಿನ್ನೆ ನಡೆದ ಘಟನೆಯಲ್ಲಿ ಜಗದೀಶ್ ಗಾಯಗೊಂಡಿದ್ದಕ್ಕೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಜಗದೀಶ್, ಅವರ ಮಗ ಆರ್ಯನ್ ಹಾಗೂ ಇಬ್ಬರು ಗನ್ ಮ್ಯಾನ್ಗಳನ್ನು ಅರೆಸ್ಟ್ ಮಾಡಿದ್ದಾರೆ.
ಜಗದೀಶ್ ವಿರುದ್ಧ ಸ್ಥಳೀಯರು ದೂರು ನೀಡಿದ್ದಾರೆ. ಇದಕ್ಕೆ ಜಗದೀಶ್ ಕೂಡ ಪ್ರತಿ ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
For the past few days, the antics of Bigg Boss Kannada 11th season contestant Lawyer Jagadish have been in the news. First, he pushed a security guard in front of the passport office with his stomach and even tried to hit him. This video went viral on social media. Then on Thursday, Jagadish got into an argument with local boys over the issue of Annamamma sitting, and they all joined hands and beat him up. Now, Jagadish has been attacked again. This time, the attack was so serious that blood started pouring from his nose.
02-05-25 10:52 am
Bangalore Correspondent
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 12:23 pm
Mangalore Correspondent
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm