ಬ್ರೇಕಿಂಗ್ ನ್ಯೂಸ್
23-12-24 07:40 pm Bangalore Correspondent ಕರ್ನಾಟಕ
ಬೆಂಗಳೂರು, ಡಿ 23: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ನೆಲೆಸಿದ್ದ 45 ವರ್ಷದ ಲಾರಿ ಮಾಲೀಕ ಸ್ವಾಮಿ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ವಾಮಿ ಪತ್ನಿ ಎರಡು ವರ್ಷಗಳ ಹಿಂದೆ ಗುತ್ತಿಗೆ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟರ್ ಆಗಿದ್ದ ಮೈಲಾರಪ್ಪ ಎಂಬುವರ ಜೊತೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಈ ವಿಚಾರ ಗೊತ್ತಿದ್ದ ಮೈಲಾರಾಪ್ಪ ಅವರ ಪತ್ನಿಯ ಸ್ವಾಮಿ ಮನೆಗೆ ಬಂದು ಆತನ ಪತ್ನಿಗೆ ಬುದ್ಧಿ ಹೇಳಿ ಹೋಗಿದ್ದರು ಆದ್ರು ಹೆಂಡತಿ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
2005-06ರಲ್ಲಿ ಸೋಮಶೇಖರ್ ಪವಿತ್ರಾಳನ್ನು ವಿವಾಹವಾಗಿದ್ದರು. ಪಿಯುಸಿ ಮಗಿಸಿದ್ದ ಪವಿತ್ರಾಳನ್ನು ಸ್ವಾಮಿ ಕಾಲೇಜಿಗೆ ಸೇರಿಸಿ ಬಿ.ಕಾಂ ಓದಿಸಿದ್ದನು. ನಂತರ ಪವಿತ್ರಾ ಬೆಂಗಳೂರು ವಿ.ವಿ.ಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಈ ವೇಳೆ ಬೆಂಗಳೂರು ವಿವಿ ಉಪಕುಲಪತಿ (ರಿಜಿಸ್ಟ್ರಾರ್) ಆಗಿದ್ದ ಮೈಲಾರಪ್ಪ ಪವಿತ್ರಾಳಿಗೆ ಹಣದಾಸೆ ತೋರಿಸಿ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮೃತನ ಸಂಬಂಧಿ ನಾಗರಾಜ್ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತ ಸ್ವಾಮಿ ಒಳ್ಳೆಯ ಮನುಷ್ಯ. ಮದುವೆ, ಮನೆ, ಮಕ್ಕಳು ಅಂತ ಇದ್ದವರು. ಆತನ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಗುತ್ತಿಗೆ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿದ್ದರು.
ಆಗ ಅಲ್ಲಿ ಮೈಲಾರಾಪ್ಪ ಎಂಬುವವರು ಇದ್ದರು. ಆಗ ಅವರು ಯುನಿವರ್ಸಿಟಿ ರಿಜಿಸ್ಟರ್ ಆಗಿದ್ದರು. ಈಗ ನಿವೃತ್ತಿ ಹೊಂದಿದ್ದಾರೆ. ಅವರೊಂದಿಗೆ ಸಂಪರ್ಕ ಆಗಿದೆ. ಆ ಮೇಲೆ ಅವರ ಸಂಸಾರ ಹಾಳಾಗಿತ್ತು. ಈ ವಿಚಾರ ಮೈಲಾರಾಪ್ಪ ಪತ್ನಿಗೂ ಗೊತ್ತಿದ್ದು, ಅವರು ಸ್ವಾಮಿ ಮನೆಗೆ ಬಂದು ಬುದ್ಧಿ ಹೇಳಿದ್ದರು. ಆದರೆ ಸ್ವಾಮಿ ಪತ್ನಿ ಬಿಟ್ಟಿರಲಿಲ್ಲ.
ಇದಕ್ಕೆಲ್ಲಾ ಮನನೊಂದು ಸ್ವಾಮಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಮೂರು ಪುಟಗಳ ಡೆತ್ ನೋಟ್ ಬರೆದು ಇಟ್ಟಿದ್ದಾರಂತೆ. ಅದು ನಮಗೆ ಸಿಕ್ಕಿಲ್ಲ. ಪೊಲೀಸರು ಮಹಜರು ಮಾಡಿದಾಗ ನೋಡಬೇಕು ಎಂದು ಹೇಳಿದ್ದಾರೆ.
Tuck driver and owner from Bangalore committes suicide due to his wife's illicit affair with a former registrar of Bangalore University. The deceased has been identified as Swami. Wife had affair with Mailarappa who was the former sub registrar of Bangalore University
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 08:39 pm
Mangalore Correspondent
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm