ಬ್ರೇಕಿಂಗ್ ನ್ಯೂಸ್
23-12-24 03:17 pm HK News Desk ಕರ್ನಾಟಕ
ಬೆಳಗಾವಿ, ಡಿ.23: ಯಾವುದೇ ಕಾರಣಕ್ಕೂ ಸಿಟಿ ರವಿಯನ್ನು ಕ್ಷಮಿಸುವ ಪ್ರಮೇಯವೇ ಇಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಹಿಂಜರಿಯೋದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸಿಟಿ ರವಿ ಅಶ್ಲೀಲ ಪದ ಬಳಕೆ ವಿಚಾರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವೆ ಹೆಬ್ಬಾಳ್ಕರ್, ಘಟನೆ ಬಗ್ಗೆ ಸಿಎಂ ಮತ್ತು ವಿಧಾನ ಪರಿಷತ್ ಸಭಾಪತಿ ಅವರೂ ಪ್ರತ್ಯೇಕ ತನಿಖೆ ಮಾಡಿಸಬೇಕು. ಬೇಗ ಎಫ್ಎಸ್ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು. ಬಿಜೆಪಿಯಲ್ಲಿ ಯಾರಾದ್ರೂ ಒಬ್ಬರಾದರೂ ಕ್ಷಮೆ ಕೇಳಿದ್ರಾ. ಅದು ಬಿಟ್ಟು ನಾಚಿಕೆ ಬದಿಗಿಟ್ಟು ಮೆರವಣಿಗೆ ಮಾಡಿಕೊಳ್ತಿದಾರೆ. ಸಿಟಿ ರವಿಯವರೇ ನನಗೆ ಆ ಪದ ಬಳಸಿದೀರಿ. ಹಾಗಂತ, ಎದೆಗುಂದಲ್ಲ. ಇಂತಹ ನೂರು ಸಿಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ, ನಾನು ಇಂದೇ ಬಿಡುಗಡೆ ಮಾಡ್ತೇನಿ ಎಂದು ಹೇಳಿ ಸಿಟಿ ರವಿ ಪ್ರಾಸ್ಟಿಟ್ಯೂಟ್ ಎಂದ ವಿಡಿಯೋ ಬಿಡುಗಡೆ ಮಾಡಿದರು.
ನಿಮಗೆ ನಾಚಿಗೆ ಆಗಬೇಕು, ಈ ವಿಚಾರದಲ್ಲಿ ಪೊಲೀಸರು ಎನ್ ಕೌಂಟರ್ ಮಾಡೋಕೆ ಹೊರಟಿದ್ದಾರೆ ಅಂತ ರಾಜಕಾರಣ ಮಾಡಲು ಹೊರಟಿದೀರಿ. ಇಡೀ ಕರ್ನಾಟಕ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕೋ ಮಾಡಿದ್ದಾರೆ. ಮೂಲ ಕಾರಣ ಏನೂ ಯಾವುದಕ್ಕೋಸ್ಕರ ಎಫ್ಐಆರ್ ಮಾಡಿದ್ದಾರೆ ಅದನ್ನು ಯೋಚನೆ ಮಾಡಬೇಕು ಎಂದರು.
ಈ ವಿಚಾರವನ್ನು ಹಾಗೇ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ. ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ರೆ ಪ್ರಧಾನಿ ಮೋದಿಯವರನ್ನೂ ಭೇಟಿ ಆಗ್ತೇನಿ. ರಾಜಕಾರಣದಲ್ಲಿ ಹಿಂದಕ್ಕೆ ಸರಿಸಬೇಕು ಅಂತಾ ಮಾಡಿದ್ದಾರೆ. ನಾವಿದ್ರಿಂದ ನೊಂದುಕೊಂಡು ಮನೆಯಲ್ಲಿ ಕುಳಿತುಕೊಳ್ತೇವಿ ಅಂತ ಅಂದುಕೊಂಡ್ರೇ ನೀವು ಬಿಟ್ಟು ಬಿಡಿ. ಇಡೀ ಬಿಜೆಪಿಯವರನ್ನ ನೋಡಿದ್ರೆ ಎಲ್ಲರೂ ದೃತರಾಷ್ಟ್ರರೇ ಆಗಿದ್ದಾರೆ. ಆಗಿರುವ ತಪ್ಪನ್ನು ಸರಿ ಎನ್ನುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಸುಮ್ಮನೆ ಕೂಡುವ ಹೆಣ್ಣು ಮಗಳಲ್ಲ. ಪ್ರತಿಯೊಬ್ಬರೂ ನಮ್ಮ ಜೊತೆಗೆ ಇದ್ದಾರೆ. ಪ್ರಿಯಾಂಕಾ ಗಾಂಧಿ ಹಿಡಿದು ಎಲ್ಲರೂ ಫೋನ್ ಮಾಡಿ ಮಾತಾಡಿದ್ದಾರೆ. ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಮಹಿಳೆಯರು ನನ್ನ ಜೊತೆಗೆ ಇದಾರೆ ಎಂದ ಹೆಬ್ಬಾಳ್ಕರ್, ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಅಂದ್ರೆ ಸುಮ್ಮನಿರ್ತೀರಾ. ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿಟಿ ರವಿ ಎಂದು ಕುಟುಕಿದರು.
ದೇಶದ ಜನರ ಎದುರುಗಡೆ ಸದನದ ಗೌರವ, ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸವನ್ನು ಎಂಎಲ್ಸಿ ಸಿಟಿ ರವಿ ಮಾಡಿದ್ದಾರೆ. ಇಡೀ ಮಹಿಳಾ ಕುಲದ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ. ಪರಿಷತ್ ನಲ್ಲಿ ಡ್ರಗ್ ಎಡಿಕ್ಟ್ ರಾಹುಲ್ ಗಾಂಧಿ ಅಂತಾ ಡ್ಯಾನ್ಸ್ ಮಾಡ್ತಿದ್ರೀ. ಹೀಗೆ ಮಾಡುವಾಗ ನಾನು ಸುಮ್ಮನೆ ಕುಳಿತುಕೊಳ್ಳಬೇಕಾ. ರವಿಕುಮಾರ್ ಅವರಿಗೆ ಹೊಳ್ಳಿ ಹೊಳ್ಳಿ ಹೇಳಿದ್ದಕ್ಕೆ ನಾನು ರಿಯಾಕ್ಟ್ ಮಾಡಿದೆ. ನಿಮಗೆ ಕೊಲೆಗಾರ ಅಂದಿದ್ದಕ್ಕೆ ನನಗೆ ಆ ಮಾತು ಹೇಳಿದ್ರಿ. ನಿಮ್ಮ ನಾಟಕ ಏನು? ಹಣೆಗೆ ಅಷ್ಟು ದೊಡ್ಡ ಪಟ್ಟಿ ಕಟ್ಟಿಕೊಂಡಿದಿರಿ, ಅಬ್ಬಾಬ್ಬಾಬಾ ಅಂತಾ ಸಿಟಿ ರವಿಗೆ ಹೆಬ್ಬಾಳ್ಕರ್ ಛೇಡಿಸಿದರು. ದೇವರ ನ್ಯಾಯಾಲಯ ಇದೆ, ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿ
ಮಾತಿನ ಮಧ್ಯದಲ್ಲೇ ಸಿಟಿ ರವಿ ಹೇಳಿದ ವಿಡಿಯೋವನ್ನು ರಿಲೀಸ್ ಮಾಡಿದರು.
Women and Child Development Minister Laxmi Hebbalkar dubbed the BJP leaders as "Dhritarashtra" (blind king) for choosing to remain mum in the Legislative Council last week.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm