ಬ್ರೇಕಿಂಗ್ ನ್ಯೂಸ್
07-12-24 10:27 pm HK News Desk ಕರ್ನಾಟಕ
ಚಾಮರಾಜನಗರ, ಡಿ 07: ಗಂಡಸರಿಗೂ ಫ್ರೀ ಬಸ್ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರಲ್ಲಿ ಶನಿವಾರ ಸಂಜೆ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಮಹಿಳೆಯರಿಗೆ ಫ್ರೀ ಬಸ್ ವ್ಯವಸ್ಥೆ ಕುರಿತು ಮಾತನಾಡುವ ವೇಳೆ, ಗಂಡಸರಿಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಗಂಡಸರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ರೆ KSRTC ಮುಚ್ಚಬೇಕಾಗುತ್ತೆ ಎಂದಿದ್ದಾರೆ.
ನಂತರ ಕಾರ್ಯಕ್ರಮದ ಕುರಿತು ಮಾತನಾಡಿ, ಸರ್ಕಾರಿ ವೈದ್ಯರು ರೋಗಿಗಳ ಬಳಿ ಚೆನ್ನಾಗಿ ಮಾತನಾಡಿದರೇ ಅರ್ಧ ರೋಗ ಕಡಿಮೆಯಾಗತ್ತೆ. ನಮ್ಮ ವೈದ್ಯರು ಬಹಳಷ್ಟು ಮಂದಿ ಸರಿಯಾಗಿ ಮಾತನಾಡಿಸುವುದಿಲ್ಲ, ಇನ್ಮೇಲಾದರೂ ರೋಗಿಗಳ ಜೊತೆ ವೈದ್ಯರು ಚೆನ್ನಾಗಿ ಮಾತನಾಡಿಸಿ ಎಂದು ಹೇಳಿದರು.
ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕು, ತುರ್ತು ಚಿಕಿತ್ಸೆ ಕೊಡಿ, ರೋಗಿಗಳಿಂದ ವೈದ್ಯರು ಏನನ್ನೂ ನಿರೀಕ್ಷೆ ಮಾಡಬೇಡಿ, ಗೋಲ್ಡನ್ ಹವರ್‌ನಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು. ಇದೇ ವೇಳೆ ಪ್ರತಿ ಜಿಲ್ಲೆಯಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಯೋಚಿಸಿದ್ದೇನೆ, ಪ್ರತಿ ಜಿಲ್ಲಾಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಗ್ಗೆ ಸರ್ಕಾರದ ಗಂಭೀರ ಚಿಂತನೆ ನಡೆಸಿದೆ ಎಂದರು.
ನಾನು ಚಿಕ್ಕವನಿದ್ದಾಗ ಜ್ವರ ಬಂದರೆ ಚಿಕನ್ ಬಿರಿಯಾನಿ, ಮಟನ್ ಫ್ರೈ ತಿನ್ನುತ್ತಿದೆ, ಈಗ ಜ್ವರ ಬಂದಾಗ ಬಿರಿಯಾನಿ ತಿಂದ್ರೆ ಜ್ವರ ಜಾಸ್ತಿ ಆಗುತ್ತೆ. ಆಗ ಹಳ್ಳಿ ಜನರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತಿತ್ತು. ಈಗ ಕಡಿಮೆಯಾಗಿದೆ, ಜನರನ್ನು ಕೇಳಿದರೇ ಸಕ್ಕರೆ, ಬಿಪಿ ಇದೆ ಎನ್ನುತ್ತಾರೆ. ಬಹಳಷ್ಟು ಮಂದಿ ವ್ಯಾಯಾಮ ಮಾಡುತ್ತಿಲ್ಲ, ಹೊಲ ಉಳುವ ಜಾಗಕ್ಕೆ ಟ್ರ್ಯಾಕ್ಟರ್, ಟಿಲ್ಲರ್ ಬಂದಿದೆ. ವಿಜ್ಞಾನ ಬೆಳೆದಷ್ಟೂ ಹೊಸ ರೋಗಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಅಧಿಕಾರ ಹಂಚಿಕೆ ಕುರಿತು ಚರ್ಚೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಟೋಟಕ ಹೇಳಿಕೆ ನೀಡಿದ್ದಾರೆ.
ನಾನು ಈಗ ರಾಜಕೀಯದ ಕೊನೆಗಾಲದಲ್ಲಿ ಇದ್ದೇನೆ ಎಂದು ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದಿದ್ದರು. ಜೆ.ಎಚ್ ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ಈ ಮೂಢನಂಬಿಕೆಯನ್ನು ರಾಚಯ್ಯ ನಂಬಲಿಲ್ಲ. ನಾನು ಸಹ ನಂಬಲಿಲ್ಲ ಎಂದು ತನ್ನ ಹಳೆಯ ಗುರುಗಳಾದ ಬಿ ರಾಚಯ್ಯರನ್ನ ವೇದಿಕೆ ಮೇಲೆ ಸಿಎಂ ಸಿದ್ಧರಾಮಯ್ಯ ಅವರನ್ನ ನೆನಪಿಸಿಕೊಂಡರು. . ಚಾಮರಾಜನಗರ ಹೊಸ ಜಿಲ್ಲೆ ಎಂದು ಘೋಷಿಸಿದಾಗ ನಾನು ಡಿಸಿಎಂ ಆಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ ಮಾಡಿದ್ದೆವು ಎಂದು ಹೇಳಿದರು.
Chief Minister Siddaramaiah has said that if men are given free buses, KSRTC will have to close.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm