ಬ್ರೇಕಿಂಗ್ ನ್ಯೂಸ್
14-12-20 12:25 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14 : ಕೋಲಾರ ಜಿಲ್ಲೆಯ ನರಸಾಪುರ ಸಮೀಪದ ಐಫೋನ್ ಕಾರ್ಖಾನೆಯಲ್ಲಿ ಕಾರ್ಮಿಕರು ನಡೆಸಿದ ದಾಂಧಲೆಯಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆಕ್ರೋಶದಲ್ಲಿ ಕಾರ್ಮಿಕರು ಘಟಕದ ಮೇಲೆ ದಾಳಿ ನಡೆಸಿದ್ದರು. ಜತೆಗೆ ಸಾವಿರಾರು ಐಫೋನ್ಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದ್ದು, ಸುಮಾರು 440 ಕೋಟಿ ರೂ. ನಷ್ಟ ಆಗಿದೆ ಎಂದು ವಿಸ್ಟ್ರಾನ್ ಕಂಪೆನಿ ತಿಳಿಸಿದೆ.
ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ನೀಡಿರುವ ದೂರಿನಲ್ಲಿ ಕಂಪೆನಿ ಈ ಮಾಹಿತಿ ನೀಡಿದೆ. ಈ ನಷ್ಟದಲ್ಲಿ ಹೆಚ್ಚಿನ ಮೊತ್ತದ ಪಾಲು ಐಫೋನ್ಗಳ ಕಳ್ಳತನದಿಂದ ಆಗಿದೆ. ದಾಳಿಯ ವೇಳೆ ಸುಮಾರು 21 ಸಾವಿರ ಐ ಫೋನ್ಗಳನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿತ್ತು. ಹಿಂಸಾಚಾರದ ಸಂದರ್ಭದಲ್ಲಿ ಘಟಕದಲ್ಲಿದ್ದ ಸಾವಿರಾರು ಫೋನ್ಗಳನ್ನು ಕಳವು ಮಾಡಲಾಗಿದೆ. ಜತೆಗೆ ಕಾರ್ಖಾನೆಯ ಪ್ರಮುಖ ಕಾರ್ಯ ಚಟುವಟಿಕೆಯ ಕೇಂದ್ರ ಹಾಗೂ ಉಪಕರಣಗಳಿಗೆ ಹಾನಿ ಮಾಡಲಾಗಿದೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಕಂಪೆನಿ ದೂರಿನಲ್ಲಿ ತಿಳಿಸಿದೆ.


ಎರಡು ಗಂಟೆ ನಡೆದಿದ್ದ ದಾಳಿ
ಕೋಲಾರದ ನರಸಾಪುರ ಸಮೀಪದಲ್ಲಿರುವ ಐಫೋನ್ ತಯಾರಿಕಾ ಘಟಕದಲ್ಲಿ ಶನಿವಾರ ಸುಮಾರು ಎರಡು ಗಂಟೆಗಳ ಕಾಲ ಹಿಂಸಾಕೃತ್ಯ ನಡೆದಿತ್ತು. ಕಂಪೆನಿ ಸರಿಯಾಗಿ ಸಂಬಳ ಕೊಡದೆ ಸತಾಯಿಸಿದ್ದರ ವಿರುದ್ಧ ರೊಚ್ಚಿಗೆದ್ದಿದ್ದ ಕಾರ್ಮಿಕರು ಕೈಗೆ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದರು. ಕಂಪೆನಿಗೆ ಹಾನಿ ಮಾಡಿದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ವಿಸ್ಟ್ರಾನ್ ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ಮೂರು ತಿಂಗಳಿನಿಂದಲೂ ವೇತನದ ಕುರಿತಂತೆ ವಿವಾದ ನಡೆಯುತ್ತಿತ್ತು. ಕೋಲಾರದಲ್ಲಿನ ತನ್ನ ಘಟಕಕ್ಕೆ ಆರು ಅಂಗಸಂಸ್ಥೆಗಳಿಂದ 8,900 ಮಂದಿ ಕಾರ್ಮಿಕರನ್ನು ವಿಸ್ಟ್ರಾನ್ ನೇಮಿಸಿಕೊಂಡಿತ್ತು ಅವರು ತಿಳಿಸಿದ್ದಾರೆ.



ಗುತ್ತಿಗೆ ಸಂಸ್ಥೆಗಳ ಲೋಪ
'ಕಂಪೆನಿಯು ಕಾರ್ಮಿಕರನ್ನು ಗುತ್ತಿಗೆ ನೀಡಿದ ಸಂಸ್ಥೆಗಳಿಗೆ ವೇತನವನ್ನು ಸರಿಯಾಗಿ ಪಾವತಿ ಮಾಡಿತ್ತು. ಆದರೆ ಆ ಸಂಸ್ಥೆಗಳು ತನ್ನ ಉದ್ಯೋಗಿಗಳ ವೇತನವನ್ನು ವಿಳಂಬಮಾಡಿತ್ತು ಎಂದು ನಮಗೆ ತಿಳಿದುಬಂದಿದೆ. ಇದನ್ನು ಪರಿಶೀಲಿಸಲಾಗುತ್ತಿದೆ' ಎಂದು ಶೆಟ್ಟರ್ ಹೇಳಿದ್ದಾರೆ. ಬಾಕಿ ಮೊತ್ತವನ್ನು ಕಾರ್ಮಿಕರಿಗೆ ಪಾವತಿಸುವಂತೆ ವಿಸ್ಟ್ರಾನ್ಗೆ ಕಾರ್ಮಿಕ ಇಲಾಖೆ ನೋಟಿಸ್ ನೀಡಿದೆ.
An iPhone manufacturing plant run by giant Wistron Corporation at Narsapura came under attack from its employees over salary dues, by incurring a loss of 440 crores.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 05:32 pm
Mangalore Correspondent
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
15-07-26 07:02 pm
HK News Staffer
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm