ಬ್ರೇಕಿಂಗ್ ನ್ಯೂಸ್
26-11-24 10:23 pm HK News Desk ಕರ್ನಾಟಕ
ಶಿವಮೊಗ್ಗ, ನ.26: ಮಂಗನ ಕಾಯಿಲೆ ತಡೆಗಟ್ಟಲು ಆರಂಭದಿಂದಲೇ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಿವಮೊಗ್ಗ ಜಿಲ್ಲೆಯ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಗರ ತಾಲೂಕಿನ ಅರಳಗೋಡು, ತಲವಾಟ, ಹಿರೇಮನೆ ಸೇರಿದಂತೆ, ಶರಾವತಿ ಕಣಿವೆಯ ಅಂಚಿನ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಗ್ರಾಮಸ್ಥರ ಅಹವಾಲುಗಳನ್ನ ಸ್ವೀಕರಿಸಿದರು.
ಮಂಗನ ಕಾಯಿಲೆ ಕುರಿತಂತೆ ಗ್ರಾಮಸ್ಥರು ಈಗಿನಿಂದಲೇ ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚನೆ ನೀಡಿದ ಸಚಿವರು, ಸರ್ಕಾರದಿಂದ ಅಗತ್ಯ ಆರೋಗ್ಯ ಸೇವೆ ಒದಗಿಸಲಾಗುವುದು. 2026 ಕ್ಕೆ ಕೆಎಫ್.ಡಿ ಗೆ ಲಸಿಕೆ ದೊರೆಯುವ ನಿರೀಕ್ಷೆಯಿದೆ. ಲಸಿಕೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಐಸಿಎಂಆರ್ ಜೊತೆ ಮಾತುಕತೆ ನಡೆಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಲಸಿಕೆ ಒದಗಿಸಲು ಮನವಿ ಮಾಡಲಾಗಿದೆ. ಅಲ್ಲಿಯ ವರೆಗೂ ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸುವಂತೆ ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಂಗನ ಕಾಯಿಲೆಯಿಂದ ಯಾವುದೇ ಸಾವು ಆಗಬಾರದು. ಮಂಗನ ಕಾಯಲೆ ಗುಣಪಡಿಸಬಹುದಾದ ಕಾಯಿಲೆ. ಮುಂಜಾಗ್ರತೆ ವಹಿಸಿದರೆ ಸಾವುಗಳನ್ನ ತಡೆಯಬಹುದು. ಗ್ರಾಮಗಳಲ್ಲಿ ಜನರಿಗೆ ಮಂಗನ ಕಾಯಿಲೆ ಹರಡುವ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಗಳನ್ನ ಕೈಗೆತ್ತಿಕೊಳ್ಳಬೇಕು. ಸಿದ್ದಾಪುರ ಹಾಗೂ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಕಳೆದ ವರ್ಷ ಹೆಚ್ಚು ಕಾಣಿಸಿಕೊಂಡಿತ್ತು. ಈ ಬಾರಿ ಮುಂಚಿತವಾಗಿಯೇ ಜಾಗ್ರತೆ ವಹಿಸಲಾಗುತ್ತಿದೆ ಎಂದರು.
ಕೆಎಫ್.ಡಿ ಪೀಡಿತ ಪ್ರದೇಶಗಳಿಗಾಗಿಯೇ ಪ್ರತ್ಯೇಕ ಸಂಚಾರಿ ಮೊಬೈಲ್ ಕ್ಲಿನಿಕ್ ನೀಡುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ವಿನ ಸೌಲಭ್ಯ ಒದಗಿಸುವುದರ ಜೊತೆಗೆ, ವೈದ್ಯರಿಗೆ ಸ್ಥಳೀಯ ಮಟ್ಟದಲ್ಲಿ ಉಳಿದುಕೊಳ್ಳಲು ಮೂಲಸೌಕರ್ಯಗಳನ್ನ ಕಲ್ಪಿಸಲಾಗುವುದು. ಬೇಸಿಗೆ ಸಂದರ್ಭದಲ್ಲಿ ಕಾಡಿಗೆ ಹೋಗುವ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು. ದೀಪದ ತೈಲವನ್ನ ಲೇಪಿಸಿಕೊಳ್ಳುಂತಹ ಕ್ರಮಗಳನ್ನ ಕೈಗೊಳ್ಳಬೇಕು. ಅಗತ್ಯ ಔಷಧಿಗಳ ಕೊರತೆಯಾಗದಂತೆ ಇಲಾಖೆ ವಿಶೇಷ ಗಮನ ಹರಿಸಲಿದೆ. ಗ್ರಾಮಸ್ಥರು ಮಂಗನ ಸಾವಿನ ಸುದ್ದಿ ತಿಳಿದಾಗ ತಕ್ಷಣ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Health Minister Dinesh Gundu Rao on Tuesday stated that Hyderabad-based Indian Immunologicals Limited is expected to come up with a new vaccine for Kyasanur Forest Disease (KFD), also known as Monkey fever, in 2026.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm