ಬ್ರೇಕಿಂಗ್ ನ್ಯೂಸ್
12-12-20 06:17 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.12: ಡ್ರೋಣ್ ಹೆಸರಲ್ಲಿ ಕುಖ್ಯಾತಿ ಪಡೆದಿರುವ ಮಂಡ್ಯ ಮೂಲದ ಡ್ರೋಣ್ ಪ್ರತಾಪ್, ಈ ಬಾರಿಯ ಬಿಗ್ ಬಾಸ್ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಜನವರಿಯಲ್ಲಿ ಆರಂಭಗೊಳ್ಳುವ ಬಿಗ್ ಬಾಸ್ -8ನೇ ಸೀಸನ್ ನಲ್ಲಿ ಡ್ರೋಣ್ ಪ್ರತಾಪ್ ಕೂಡ ಒಬ್ಬ ಸ್ಪರ್ಧಿಯಾಗಲಿದ್ದಾರೆ ಎನ್ನುವ ವದಂತಿ ಕೇಳಿಬಂದಿದೆ.
ಆದರೆ, ಡ್ರೋಣ್ ಹೆಸರಲ್ಲಿ ಕನ್ನಡಿಗರನ್ನು ವಂಚಿಸಿರುವ ಡ್ರೋಣ್ ಪ್ರತಾಪ್ ಬಿಗ್ ಬಾಸ್ ಸ್ಪರ್ಧಿಯಾಗುವ ವಿಚಾರದಲ್ಲಿ ವಿರೋಧ ಕೇಳಿಬಂದಿದೆ. ಟಿವಿ, ಮಿಕ್ಸರ್ ಮತ್ತಿತರ ಉಪಕರಣಗಳ ವೇಸ್ಟ್ ಬಳಸಿ, 600ಕ್ಕೂ ಹೆಚ್ಚು ಡ್ರೋಣ್ ತಯಾರಿಸಿದ್ದೇನೆ ಎಂದು ಪುಂಗಿ ಬಿಟ್ಟಿದ್ದಲ್ಲದೆ, ಜಪಾನ್ ಮತ್ತು ಜರ್ಮನಿಯಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದೆ ಎಂದು ಹೇಳಿಕೊಂಡು ಕನ್ನಡ ಚಾನೆಲ್ ಗಳಲ್ಲಿ ಭಾರೀ ಪ್ರಚಾರ ಪಡೆದಿದ್ದ. ಆದರೆ, ಹೊರದೇಶಗಳಲ್ಲಿ ಪ್ರದರ್ಶನ ಮಾಡಿದ್ದಕ್ಕೆ ಯಾವುದೇ ರೀತಿಯ ಪುರಾವೆ ಒದಗಿಸಬಲ್ಲ ಫೋಟೋ ಆಗಲೀ, ವಿಡಿಯೋ ಆಗಲೀ ಇರಲಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿಬಂದ ಬಳಿಕ ಡ್ರೋಣ್ ಪ್ರತಾಪ್ ನಾಪತ್ತೆಯಾಗಿದ್ದ. ಅಲ್ಲದೆ, ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದ ಬಗ್ಗೆ ಫೋಟೋ, ವಿಡಿಯೋ ಒದಗಿಸಲು ವಿಫಲವಾಗಿದ್ದ. ಹೀಗಾಗಿ ಡ್ರೋಣ್ ಪ್ರತಾಪ್ ನಕಲಿ ಎನ್ನುವ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಕನ್ನಡದ ಹೆಸರಾಂತ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಚಿತ್ರನಟ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸ್ಪರ್ಧೆಗೆ ಕೆಲವರ ಹೆಸರು ಕೇಳಿಬರುತ್ತಿದೆ. ಟಿವಿ ಆಂಕರ್ ರಾಧಾ ಹಿರೇಗೌಡರ್, ನಟ ಅನಿರುದ್ಧ್, ಟಿಕ್ ಟಾಕ್ ಕ್ವೀನ್ ಸೋನು ಗೌಡ, ಬಿಂದು ಗೌಡ, ಡ್ರೋಣ್ ಪ್ರತಾಪ್ ಹೀಗೆ ಕೆಲವರ ಹೆಸರು ಕೇಳಿಬರುತ್ತಿದೆ. ಆದರೆ, ಕನ್ನಡಿಗರಿಗೆ ವಂಚನೆ ಎಸಗಿದ್ದ ಡ್ರೋಣ್ ಪ್ರತಾಪ್ ಅನ್ನು ಬಿಗ್ ಬಾಸ್ ಸ್ಪರ್ಧೆಗೆ ಸೇರಿಸಬಾರದೆಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಸಲಹೆ ನೀಡುತ್ತಿದ್ದಾರೆ. ಡ್ರೋಣ್ ಹೆಸರಲ್ಲಿ ದೊಡ್ಡ ಪ್ರಾಜೆಕ್ಟ್ ಮಾಡಬೇಕೆಂದು ಹಲವರಿಂದ ಹಣ ಪಡೆದು ವಂಚನೆ ಎಸಗಿದ್ದಾನೆ ಎನ್ನಲಾಗುತ್ತಿದ್ದು, ಇಂಥ ವ್ಯಕ್ತಿಯನ್ನು ಬಿಗ್ ಬಾಸ್ ಸ್ಪರ್ಧೆಗೆ ಪರಿಗಣಿಸಬಾರದು ಎನ್ನುತ್ತಿದ್ದಾರೆ.
ಆದರೆ, ಕನ್ನಡ ಬಿಗ್ ಬಾಸ್ ಸ್ಪರ್ಧೆಯಲ್ಲಿ ವಿವಾದಕ್ಕೊಳಗಾದ ವ್ಯಕ್ತಿಗಳನ್ನು ಹೆಚ್ಚಾಗಿ ಸ್ಪರ್ಧೆಗೆ ಪರಿಗಣಿಸುತ್ತಿರುವುದು ನಡೆದುಬಂದಿದೆ. ಈ ಬಾರಿ ಡ್ರೋಣ್ ಪ್ರತಾಪ್ ಬಗ್ಗೆ ಆಗಲೀ, ಯಾವುದೇ ಸ್ಪರ್ಧಿ ಬಗ್ಗೆ ಆಗಲೀ ಚಾನೆಲ್ ಮಾಹಿತಿ ಹೊರಗೆಡವಿಲ್ಲ. ಆದ್ರೂ ಈ ಕುರಿತು ವದಂತಿ ಮತ್ತು ಟೀಕೆ ಎರಡೂ ಕೇಳಿಬರುತ್ತಿದೆ.
Drone Boy or Drone Prathap, whose claim of building 600 drones using e-waste is all set to enter the house of Bigg Boss Kannada in colours channel.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm