ಬ್ರೇಕಿಂಗ್ ನ್ಯೂಸ್
26-10-24 10:32 pm Bangalore Correspondent ಕರ್ನಾಟಕ
ಬೆಂಗಳೂರು, ಅ.26: ಜಾತಿ ಸಂಘರ್ಷ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ಇಡೀ ದೇಶವೇ ತಿರುಗಿ ನೋಡುವಂತಹ ಐತಿಹಾಸಿಕ ತೀರ್ಪು ನೀಡಿದೆ. ದಲಿತರ ಮೇಲಿನ ಹಲ್ಲೆ, ಮನೆಗಳ ಧ್ವಂಸ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇಷ್ಟೊಂದು ಅತಿ ಹೆಚ್ಚು ಸಂಖ್ಯೆಯ ಆರೋಪಿಗಳಿಗೆ ಒಂದೇ ಬಾರಿಗೆ ಶಿಕ್ಷೆ ನೀಡಿರುವುದು ದೇಶದಲ್ಲಿ ಇದೇ ಮೊದಲು.
2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸಣ್ಣ ಕಾರಣಕ್ಕೆ ಹೊತ್ತಿಕೊಂಡಿದ್ದ ಗಲಭೆ ಪ್ರಕರಣ ಇಷ್ಟೊಂದು ಭಯಾನಕ ಆಗಬಹುದೆಂದು ಆ ಗ್ರಾಮದ ಜನರು ಊಹಿಸಿರಲಿಕ್ಕಿಲ್ಲ. ಅಂದು ಕ್ಷೌರದಂಗಡಿಯಲ್ಲಿ ಮೇಲ್ವರ್ಗ ಮತ್ತು ದಲಿತ ವರ್ಗದ ಯುವಕರ ನಡುವೆ ಸಿಟ್ಟು ಹೊತ್ತಿಕೊಂಡಿತ್ತು. ಕ್ಷೌರ ಮಾಡುವಲ್ಲಿ ಹೀನಾಯವಾಗಿ ಬೈದ ಎಂಬ ಕಾರಣಕ್ಕೆ ರಾತ್ರಿ ಸಿನಿಮಾ ನೋಡಿ ಮರಳುತ್ತಿದ್ದ ಮೇಲ್ಬರ್ಗದ ಯುವಕನಿಗೆ ಅರ್ಧ ದಾರಿಯಲ್ಲಿ ತಡೆದು ನಿಲ್ಲಿಸಿದ್ದ ದಲಿತ ವರ್ಗದ ಯುವಕರು ಧರ್ಮದೇಟು ಬಿಗಿದಿದ್ದರು. ಅಷ್ಟೇ ಆಗುತ್ತಿದ್ದರೆ, ಅಲ್ಲಿಗೇ ಇತ್ಯರ್ಥ ಆಗಿಬಿಡುತ್ತಿತ್ತು. ಆದರೆ, ಅದೇ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಮೇಲ್ವರ್ಗದ ಜನರು ಗ್ರಾಮದಲ್ಲಿದ್ದ ದಲಿತರ ಕೇರಿಗೆ ನುಗ್ಗಿ ಅದೇ ದಿನ ರಾತ್ರಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೈದು ಮನೆಯಲ್ಲಿದ್ದ ಮಕ್ಕಳು, ಮಹಿಳೆಯರನ್ನು ಹೊರಕ್ಕೆಳೆದು ಹಾಕಿ ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಗಲಭೆಗೆ ಸಂಬಂಧಿಸಿ ಗಂಗಾವತಿ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳೆಲ್ಲರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿದ್ದರು. ಮೂವರು ದಲಿತರನ್ನು ಮೇಲ್ವರ್ಗದವರ ಹಿಂಸೆಗೆ ಬೆಂಬಲಿಸಿದ ಕಾರಣಕ್ಕೆ ಇದೇ ಕೇಸಿನಲ್ಲಿ ಸೇರಿಸಲಾಗಿತ್ತು. ಬರೋಬ್ಬರಿ 9 ವರ್ಷಗಳ ನಂತರ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಸಿ. ಅವರು ತೀರ್ಪು ಪ್ರಕಟಿಸಿದ್ದಾರೆ. 101 ಆರೋಪಿಗಳ ಪೈಕಿ 98 ಆರೋಪಿಗಳಿಗೆ ಜೀವವಾಧಿ ಶಿಕ್ಷೆ ಹಾಗೂ ತಲಾ ರು. 5000 ದಂಡ ಹಾಗೂ ಇನ್ನುಳಿದ 3 ಆರೋಪಿಗಳಿಗೆ ತಲಾ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 2000 ರೂಪಾಯಿ ದಂಡ ವಿಧಿಸಿದ್ದಾರೆ.
ಇದೇ ಅಕ್ಟೋಬರ್ 21ರಂದು ಕೊಪ್ಪಳ ಜಿಲ್ಲಾ ನ್ಯಾಯಾಧೀಶರು ಎಲ್ಲಾ ಆರೋಪಿಗಳನ್ನು ಕೋರ್ಟಿಗೆ ಹಾಜರಾಗಲು ಸೂಚಿಸಿದ್ದರು. 117 ಮಂದಿ ಪೈಕಿ 101 ಅಪರಾಧಿಗಳು ಕೋರ್ಟ್ಗೆ ಹಾಜರಾಗಿದ್ದರು. ಉಳಿದ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದರಿಂದ ದಾಖಲೆ ಪರಿಶೀಲಿಸಿದ ನ್ಯಾಯಾಧೀಶರು, ಎಲ್ಲಾ ಅಪರಾಧಿಗಳ ವಿರುದ್ಧ ಆರೋಪ ಸಾಬೀತುಪಡಿಸಿ ಜೈಲಿಗೆ ಕಳುಹಿಸಿದ್ದರು. ಆರೋಪ ಸಾಬೀತುಪಡಿಸಿದ ಬಳಿಕವೇ ನ್ಯಾಯಾಧೀಶರು ಎರಡು ದಿನಗಳ ಬಳಿಕ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ತೀರ್ಪು ನೀಡಿದ ಬಳಿಕ 101 ಅಪರಾಧಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಪೊಲೀಸರು ರಾತ್ರಿಯೇ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ಜೀವಾವಧಿ ಶಿಕ್ಷೆ ತೀರ್ಪು ಹೊರ ಬರುತ್ತಿದ್ದಂತೆ ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟರು. ಮಹಿಳೆಯರು, ಮಕ್ಕಳು, ಯುವಕರು ಗ್ರಾಮದ ಮುಖಂಡರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ, ತಪ್ಪು ಮಾಡದವರಿಗೆ ಯಾಕೆ ಶಿಕ್ಷೆ ಕೊಡುತ್ತಾರೆ. 9 ವರ್ಷಗಳ ನಂತರ ಯಾಕೆ ಶಿಕ್ಷೆ ಕೊಡುತ್ತಿದ್ದಾರೆ. ನಾವೆಲ್ಲರೂ ಗ್ರಾಮದಲ್ಲಿ ಒಂದಾಗಿದ್ದೀವಿ. ಇದೀಗ ಯಾವುದೇ ಅಂತಹ ವಾತಾವರಣ ಇಲ್ಲ ಎಂದು ಕಣ್ಣೀರಿಟ್ಟಿದ್ದು ಕಂಡುಬಂತು.
In a landmark ruling, 98 individuals have been sentenced to life imprisonment in a decade-old atrocity case involving violence against Dalits in Marakumbi village, in Karnataka’s Koppal district. The Principal District and Sessions Court in Koppal pronounced the verdict, marking a significant step against caste-based violence in the region.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm