ಬ್ರೇಕಿಂಗ್ ನ್ಯೂಸ್
24-10-24 09:13 pm Bangalore Correspondent ಕರ್ನಾಟಕ
ಬೆಂಗಳೂರು, ಅ.24: ಚನ್ನಪಟ್ಟಣ ಉಪ ಚುನಾವಣೆಯ ರಾಜಕೀಯ ಕಣ ರಂಗೇರಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಐದು ಬಾರಿಯ ಶಾಸಕ ಸಿಪಿ ಯೋಗೀಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಯೋಗೀಶ್ವರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದೇ ವೇಳೆ, ನಾಮಪತ್ರದಲ್ಲಿ ಸಿ.ಪಿ.ಯೋಗೇಶ್ವರ್ ತನ್ನ ಒಟ್ಟು ಆಸ್ತಿ ಮೌಲ್ಯ 35.09 ಕೋಟಿ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಒಟ್ಟು 7.15 ಕೋಟಿ ಮೌಲ್ಯದ ಚರಾಸ್ತಿ ಇದ್ದರೆ, 27.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಯೋಗೇಶ್ವರ್ ಹೊಂದಿದ್ದಾರೆ.
ಪತ್ನಿ ಶೀಲಾ ಮತ್ತು ಅವರ ಒಟ್ಟು ಚರ ಮತ್ತು ಸ್ಥಿರಾಸ್ತಿ 32.46 ಕೋಟಿ ರೂ. ಆಗಿದೆ. ಯೋಗೀಶ್ವರ್ ಹೆಸರಲ್ಲಿ 250 ಗ್ರಾಂ ಚಿನ್ನ ಇದ್ದರೆ, ತಲಾ 70 ಲಕ್ಷ ರೂ. ಮೌಲ್ಯದ ಒಂದು ಬೆಂಜ್ ಮತ್ತು ಬಿಎಂಡಬ್ಲೂ ಕಾರು ಇದೆ. ತಾವು ಸಾರ್ವಜನಿಕರಿಂದ ಉಡುಗೊರೆಯಾಗಿ ಪಡೆದ 1 ಕೆಜಿ ಚಿನ್ನ ಮತ್ತು 50 ಕೆಜಿ ಬೆಳ್ಳಿಯನ್ನು ಪತ್ನಿ ಶೀಲಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಉಳಿದಂತೆ ಪತ್ನಿ ಹೆಸರಲ್ಲಿ 1.5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇದೆ.
ಯೋಗೀಶ್ವರ್ ಅವರ ಬಳಿ 54.2 ಎಕರೆ ಕೃಷಿ ಭೂಮಿ, ಬೆಂಗಳೂರಿನಲ್ಲಿ ಮನೆ ಸೇರಿದಂತೆ ಒಟ್ಟು 27.94 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಶೀಲಾ ಅವರ ಬಳಿ 14.19 ಎಕರೆ ಕೃಷಿ ಭೂಮಿ ಸೇರಿದಂತೆ 25.35 ಕೋಟಿ ರೂ. ಮೌಲ್ಯದ ಸ್ತಿರಾಸ್ತಿ ಇದೆ. ಒಟ್ಟಾರೆ ಯೋಗೀಶ್ವರ್ 35.09 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಮಾಲೀಕರಾದರೆ, ಶೀಲಾ 32.46 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಒಡತಿ. ಯೋಗೇಶ್ವರ್ ಅವರಿಗೆ 25.46 ಕೋಟಿ ರೂ ಸಾಲವಿದ್ದರೆ, ಶೀಲಾ 3.41 ಕೋಟಿ ರೂ ಸಾಲ ಹೊಂದಿದ್ದಾರೆ. ಇನ್ನು ಯೋಗೇಶ್ವರ್ ಅವರ ವಿರುದ್ಧ 10 ಪ್ರಕರಣಗಳು ಬಾಕಿ ಇವೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
Former Minister C P Yogeshwar, who joined the Congress after quitting BJP, on Thursday filed his nomination as the grand old party's candidate for the November 13 Assembly by-poll from Channapatna, amid a show of strength. He was accompanied by Chief Minister Siddaramaiah, state Congress President and Deputy Chief Minister D K Shivakumar and district in-charge Minister Ramalinga Reddy, among other party leaders.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm