ಬ್ರೇಕಿಂಗ್ ನ್ಯೂಸ್
19-09-24 08:07 pm HK News Desk ಕರ್ನಾಟಕ
ಧಾರವಾಡ, ಸೆ.19: ಆ ಪಕ್ಷ ಈ ಪಕ್ಷ ಅಂತಲ್ಲ, ಎಲ್ಲ ಪಕ್ಷಗಳಿಂದಲೂ ಭ್ರಷ್ಟಾಚಾರ ಆಗ್ತಾ ಇದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಯಬೇಕು. ಈ ರೀತಿ ಭ್ರಷ್ಟಾಚಾರ ನಡೆದರೆ ನಮ್ಮ ಆರ್ಥಿಕ ಪರಿಸ್ಥಿತಿ ಏನಾಗಬಹುದು. ಇದರಿಂದ ಕಷ್ಟ ಪಡುವವರು ಮಧ್ಯಮ ಮತ್ತು ಕೆಳವರ್ಗದವರು. ಹೀಗಾದರೆ ಪ್ರಜಾಪ್ರಭುತ್ವ ಉಳಿಯಲ್ಲ ಎನ್ನೋದು ನನ್ನ ಭಾವನೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಭ್ರಷ್ಟಾಚಾರ ಮಿತಿಮೀರಿದರೆ ದೊಡ್ಡ ಕ್ರಾಂತಿ ಆಗಬಹುದು, ಅದು ನಮಗೆ ಬೇಡ. ಹೀಗಾಗಿ ಭ್ರಷ್ಟಾಚಾರ ತಡೆಗಟ್ಟುವ ಕೆಲಸ ನಡೆಯಬೇಕು. ಅಭಿವೃದ್ಧಿ ಕೆಲಸ ಆಗುತ್ತಿವೆ, ಆದರೆ ಅದು ಸಾರ್ವಜನಿಕ ಹಿತಾಸಕ್ತಿಗಲ್ಲ. ರಾಜಕಾರಣಿಗಳು ತಮ್ಮ ಅಭಿವೃದ್ಧಿಯನ್ನಷ್ಟೆ ಮಾಡುತ್ತಿದ್ದಾರೆ. ಹಿಂದೆ ಇದ್ದ ಸರ್ಕಾರವನ್ನು ಇವತ್ತು ಅಧಿಕಾರದಲ್ಲಿರುವವರು ಶೇ.40 ಸರ್ಕಾರ ಎಂದು ಕರೆಯುತ್ತಿದ್ದರು. ಈಗ ಈ ಸರ್ಕಾರದಲ್ಲು ವಾಲ್ಮೀಕಿ ನಿಗಮದ ಹಗರಣ ನಡೆದಿದೆ. ಹೀಗಾಗಿ ಭ್ರಷ್ಟಾಚಾರ ಒಂದೇ ಪಕ್ಷಕ್ಕೆ ಸೀಮಿತವಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ರಾಜಕೀಯಕ್ಕೆ ಬರೋದು ಶ್ರೀಮಂತರಾಗುವುದಕ್ಕೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ.

ಇತ್ತೀಚೆಗೆ ಕೆಲ ಲೋಕಾಯುಕ್ತ ದಾಳಿ ನಡೆದಿವೆ. ಅದರ ಕಾರ್ಯವೈಖರಿ ಬಗ್ಗೆ ಜಾಸ್ತಿ ಮಾತಾಡುವುದಿಲ್ಲ. ಯಾರು ಆದರ್ಶಪ್ರಿಯರಾಗಬೇಕಿತ್ತೋ, ಅವರು ಈಗ ಜೈಲಿನಲ್ಲಿದ್ದಾರೆ. ಇದು ಯಾವ ಮಟ್ಟಕ್ಕೆ ಹೋಗಿದೆ. ದುರಾಸೆ ಕಡಿಮೆಯಾಗುವುದಿಲ್ಲ ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂದು ಮುನಿರತ್ನ ಹೆಸರೇಳದೆ ಶಾಸಕರಾದವರು ಜೈಲಿಗೆ ಹೋಗುತ್ತಿರುವುದನ್ನು ಟೀಕಿಸಿದರು.
ಸಮಾಜದಲ್ಲಿ ದೊಡ್ಡ ಬದಲಾವಣೆ ಬರಬೇಕಿದೆ, ಆ ಬದಲಾವಣೆ ಮುಂದಿನ ಪೀಳಿಗೆಗೆ ಶಾಂತಿ, ಸೌಹಾರ್ದವನ್ನು ಬೆಳೆಸಿಕೊಡಬೇಕಿದೆ. ಮಕ್ಕಳು, ಮೊಮ್ಮಕ್ಕಳು ಸೌಹಾರ್ದತೆಯ ದಾರಿಯಲ್ಲಿ ನಡೆಯಬೇಕಿದೆ. ರಾಜಕೀಯಕ್ಕೆ ಬರುವುದಿದ್ದರೆ ಸೇವೆಗಾಗಿ ಬರಬೇಕು, ತಮ್ಮ ತಮ್ಮ ಲಾಭಕ್ಕಾಗಿ ಅಲ್ಲ. ರಾಜಕೀಯ ಎನ್ನುವುದು ಒಂದು ವ್ಯಕ್ತಿಯಲ್ಲ. ದೇಶ ಸೇವೆ ಮಾಡಲು ರಾಜಕೀಯಕ್ಕೆ ಬಂದವರನ್ನು ನಾವು ನೋಡಿದ್ದೇವೆ. ಅಂಥವರು ತಮ್ಮ ಲಾಭಕ್ಕಾಗಿ ರಾಜಕೀಯ ಮಾಡಿರಲಿಲ್ಲ. ಈಗ ರಾಜಕೀಯಕ್ಕೆ ಬರುವವರು ತಮ್ಮ ಲಾಭಕ್ಕಾಗಿ ಮಾತ್ರ ಬರುತ್ತಿದ್ದಾರೆ. ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ಆಗು ಹೋಗುಗಳು ಬೇರೆಯೇ ಇರುತ್ತವೆ ಎಂದು ಹೇಳಿದರು.
The former Lokayukta and Supreme Court judge Santosh Hegde has said that he has seen the disease of corruption in every political party and only a mass movement can prevent corruption.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
19-04-26 10:41 pm
HK News Staffer
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
19-04-26 10:23 pm
HK News Staffer
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm