ಬ್ರೇಕಿಂಗ್ ನ್ಯೂಸ್
03-09-24 11:10 am HK News Desk ಕರ್ನಾಟಕ
ಶಿವಮೊಗ್ಗ, ಸೆ 03: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಶನಿವಾರ ತೀರ್ಥಹಳ್ಳಿ ತಾಲೂಕು ಇಂದಾವರ ಗ್ರಾಮದ ಜಯದೀಪ್(24) ಎಂಬಾತ ತನ್ನ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ. ಈತನ ಬೈಕ್ ತೀರ್ಥಹಳ್ಳಿಯ ತುಂಗಾ ನದಿಯ ಪಕ್ಕದಲ್ಲಿ ಪತ್ತೆಯಾಗಿತ್ತು. ಪೋಷಕರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾದ ಕುರಿತು ದೂರು ದಾಖಲಿಸಿದ್ದರು.
ಇದರಿಂದ ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ಪೊಲೀಸರು ಹಾಗೂ ಅಗ್ನಿ ಶಾಮಕದಳವರು ಜಯದೀಪ್ ಶವಕ್ಕಾಗಿ ತುಂಗಾ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಸೋಮವಾರ ಸಂಜೆ ತೀರ್ಥಹಳ್ಳಿಯ ಸ್ಮಶಾನಕಟ್ಟೆ ಸಮೀಪ ನದಿಯಲ್ಲಿ ಮೃತದೇಹ ಸಿಕ್ಕಿದೆ.
ಜಯದೀಪ್ ನಾಪತ್ತೆಯಾಗುವ ಮುನ್ನ ತನ್ನ ಮೊಬೈಲ್ನಲ್ಲಿ ಮೂರು ಪುಟದ ಡೆತ್ನೋಟನ್ನು ವಾಟ್ಸ್ಆ್ಯಪ್ ಸ್ಟೇಟಸ್ಗೆ ಅಪ್ಲೋಡ್ ಮಾಡಿ ನಾಪತ್ತೆಯಾಗಿದ್ದ. ಇದರಲ್ಲಿ ಪ್ರೀತಿಸಲು ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾನೆ. ನಾನು ಬದುಕಲು ಬೇರೆ ದಾರಿ ಹುಡುಕಬಹುದಾಗಿತ್ತು. ಆದರೆ, ಸಾವಿನ ದಾರಿ ಕರೆಯುತ್ತಿದೆ. ತಂದೆ-ತಾಯಿ ನನ್ನನ್ನು ಕ್ಷಮಿಸಿ. ನಾನು ಸಾಲ ಮಾಡಿದ್ದನ್ನು ನಿಮ್ಮ ಮೇಲೆ ಬಿಟ್ಟು ಹೋಗುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಅದರಲ್ಲಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಣ ಕೊಟ್ಟು ಸಾಲ ತೀರಿಸಿ ಎಂದು ಬರೆದಿದ್ದಾನೆ.
ಮೃತ ಯುವಕ ಜಯದೀಪ್ ಓದಿನಲ್ಲಿ ಮುಂದಿದ್ದ. ಆದರೆ ತನಗೆ ಪ್ರೀತಿ ಮಾಡಲು ಯುವತಿ ಸಿಗುತ್ತಿಲ್ಲ ಅಂತಾ ನೊಂದಿದ್ದ. ಜೊತೆಗೆ ಆನ್ಲೈನ್ನಲ್ಲಿ ಹಣ ತೊಡಗಿಸಲು ಸಾಲ ಮಾಡಿಕೊಂಡಿದ್ದ. ಈಗಾಗಿ ಮನನೊಂದ ಯುವಕ ವಾಟ್ಸಪ್ ಸ್ಟೇಟಸ್ನಲ್ಲಿ ಡೆತ್ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಂಗಾನದಿಯಿಂದ ಮೃತದೇಹ ಹೊರ ತೆಗೆದು, ಮರಣೋತ್ತರ ಶವ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಘಟನೆ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga 24 year old youth commits suicide by jumping into river, posts death note on whatsapp. The deceased has been identified as Jayadeep.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm