ಬ್ರೇಕಿಂಗ್ ನ್ಯೂಸ್
15-07-24 08:56 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 15: ಪೆಟ್ರೋಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಸಾಮಾನ್ಯ ಜನರು ಪ್ರಯಾಣಿಸುವ ಬಸ್ ಟಿಕೆಟ್ ದರವೂ ಏರಿಕೆಯಾಗುತ್ತದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದರು.
ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದ ರಾಜು ಕಾಗೆ ಮತ್ತು ಕೆಎಸ್ಆರ್ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್ ಅವರು ದರ ಏರಿಕೆಯ ಬಗ್ಗೆ ಮಾತನಾಡಿದ್ದರಿಂದ ಪ್ರಯಾಣ ದರ ಹೆಚ್ಚುವುದು ಖಚಿತ ಎನ್ನಲಾಗಿತ್ತು.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡೀಸೆಲ್ ಹಾಗೂ ಬಸ್ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಿಗಮವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್ ದರ ಏರಿಸದೇ ಇದ್ದರೆ ಕೆಎಸ್ಆರ್ಟಿಸಿ ಸಂಸ್ಥೆ ಉಳಿಯುವುದಿಲ್ಲ. ಸದ್ಯದಲ್ಲೇ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು ಶೇಕಡಾ 15ರಿಂದ 20 ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಹೇಳಿದ್ದರು.
Following the hike in petrol and milk prices, there were reports that the prices of bus tickets travelled by the common man will also go up. Transport Minister Ramalinga Reddy said there is no proposal before the government to increase bus ticket prices as of now.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm