ಬ್ರೇಕಿಂಗ್ ನ್ಯೂಸ್
14-06-24 07:13 pm HK News Desk ಕರ್ನಾಟಕ
ದಾವಣಗೆರೆ, ಜೂನ್.14: ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ವಿರುದ್ಧ ರಾಜಕೀಯ ಪ್ರೇರಿತ ಕೇಸ್ ದಾಖಲಿಸಲಾಗಿದೆ. ಆಕೆ ಮಾನಸಿಕ ಅಸ್ವಸ್ಥೆ, 53 ಜನರ ಮೇಲೆ ಕೇಸ್ ಹಾಕಿದ್ದಾಳೆ ಎಂದು ಗೃಹ ಸಚಿವರೇ ಹೇಳಿದ್ದರು. ಇದೀಗ ಧೀಡಿರ್ ಅಂತ ಕೇಸ್ ಗೆ ಮರುಜೀವ ಬಂದಿದ್ದು ಯಾಕೆ..? ಎಂದು ಪ್ರಶ್ನಿಸಿದ್ದಾರೆ.
ನನ್ನ ಸಹೋದರ ಸಂಬಂಧಿಗಳೇ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ, ನ್ಯಾಯ ಕೊಡಿಸಿ ಅಂತ ಯಡಿಯೂರಪ್ಪ ಮನೆಗೆ ಮಹಿಳೆ ಬಂದಿದ್ದಳು. 5 ಸಾವಿರ ಕೋಟಿ ಬಜಾಜ್ ಕಂಪನಿಯವರು ಕೊಡಬೇಕು, ಕೊಡಿಸಿ ಅಂತಾ ಗೋಗರೆದಿದ್ದಳು. ಅದು ಯಾವ ಅಕೌಂಟ್ ನಿಂದ ಬಂತು, ಯಾವ ಹಣ ಅನ್ನೋದು ತನಿಖೆ ಆಗಬೇಕು. ರಾಹುಲ್ ಗಾಂಧಿ, ಸುರ್ಜೇವಾಲಾ ಕೋರ್ಟ್ ಗೆ ಬಂದು ಹೋದ ಮೇಲೆ ಇದೆಲ್ಲ ಆಗ್ತಾ ಇದೆ.
ವಾಲ್ಮೀಕಿ ನಿಗಮದ ಭ್ರಷ್ಟಾಚಾರದಿಂದ ಶಿವಮೊಗ್ಗದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರು. ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 24 ಸ್ಥಾನ ಗೆಲ್ಲುವ ಭರವಸೆ ಇಟ್ಕೊಂಡಿದ್ರು, ಆದರೆ ಆಸೆ ಕೈಗೂಡಲಿಲ್ಲ. ಈ ರೀತಿ ಅಸಹಾಯಕರಾದ ಕೈ ಮುಖಂಡರು ದ್ವೇಷದ ರಾಜಕಾರಣ ಮಾಡ್ತಾ ಇದಾರೆ. ಬಾಲಕಿ ಸಹೋದರ, ತಾಯಿ ಮತ್ತು ಸಹೋದರಿ ಜೊತೆಗೆ ಇರಲಿಲ್ಲ. ಬಾಲಕಿ ಸಹೋದರನನ್ನು ಪ್ರಭಾವಿ ಸಚಿವರು ಕರೆಸಿ ಅವನಿಗೆ ಆಮಿಷ ತೋರಿಸಿ ಸತ್ತು ಹೋದ ಕೇಸಿಗೆ ಜೀವ ಕೊಟ್ಟಿದ್ದಾರೆ. ಸದ್ಯದಲ್ಲೇ ಅವರು ಯಾರು, ಏನು ಅಂತ ಹೆಸರು ಬಹಿರಂಗ ಪಡಿಸ್ತೀನಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಯಡಿಯೂರಪ್ಪ ಅವರು ಈಗಾಗಲೇ ಸಿಐಡಿ ಮುಂದೆ ತನಿಖೆಗೆ ಅಟೆಂಡ್ ಆಗ್ತೀನಿ ಅಂದಿದ್ದಾರೆ. ಈಗ ಸಾಕ್ಷ್ಯ ನಾಶ ಮಾಡ್ತಾರೆ ಬಂಧಿಸಬೇಕು ಅಂತಾರೆ, ಮಾಡೋದಿದ್ದರೆ 60 ದಿನಗಳ ಹಿಂದೆ ಸಾಕ್ಷ್ಯ ಮಾಡಬಹುದಿತ್ತಲ್ಲ. ಇದು ದುರುದ್ದೇಶದಿಂದ ದ್ವೇಷದ ರಾಜಕಾರಣ ಮಾಡ್ತಾ ಇದ್ದಾರೆ. ಯಡಿಯೂರಪ್ಪ ಬಂಧಿಸಿದ್ರೆ ಸರ್ಕಾರ ಪತನವಾಗುತ್ತೆ. ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಅವರು ಮಹಿಳೆ ದೂರು ನೀಡಿದ್ದ ಉಳಿದ 52 ಜನರನ್ನ ಯಾಕೆ ಬಂಧಿಸಲಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಆಗ ಮಾತ್ರ ಬಾಲಕಿ ಹಿಂದೆ ಯಾರ್ಯಾರು ಇದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
POCSO case against BSY, Influential minister behind conspiracy slams Renukacharya in Dawanagere.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm