ಬ್ರೇಕಿಂಗ್ ನ್ಯೂಸ್
23-05-24 10:11 pm HK NEWS ಕರ್ನಾಟಕ
ಬೆಂಗಳೂರು, ಮೇ 23: ಅದಕ್ಷ, ಅಸಮರ್ಥ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರನ್ನು ಕೂಡಲೇ ಸಚಿವಸಂಪುಟದಿಂದ ವಜಾ ಮಾಡಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಗೃಹ ಸಚಿವರು ಈ ದೇಶ ಕಂಡ ಅಸಮರ್ಥ ಗೃಹ ಸಚಿವರಲ್ಲಿ ಮೊದಲಿಗರು. ಇವರ ಆಡಳಿತದಲ್ಲಿ ಇಷ್ಟೊಂದು ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳು ನಡೆದಿವೆ. ದರೋಡೆಗಳೂ ನಡೆಯುತ್ತಿದ್ದು, ಕಾನೂನು - ಸುವ್ಯವಸ್ಥೆ ಹದಗೆಟ್ಟಿದೆ. ಈ ಸರಕಾರ ಬಂದ ಬಳಿಕ ಪೊಲೀಸ್ ಇಲಾಖೆಯಿಂದ ಸಕ್ರ್ಯುಲರ್ ಅನ್ನುವುದೇ ಮರೆತುಹೋಗಿದೆ ಎಂದು ಟೀಕಿಸಿದರು.
ಹಿಂದೆ ರಾಜ್ಯದಲ್ಲಿ ಒಂದು ಅಪರಾಧ ಪ್ರಕರಣ ನಡೆದರೂ, ಎಲ್ಲೋ ಒಂದು ದರೋಡೆ, ಅತ್ಯಾಚಾರ ನಡೆದರೆ ಎಲ್ಲ ಪೊಲೀಸ್ ಠಾಣೆಗೆ ಸುತ್ತೋಲೆ ಕಳುಹಿಸಲಾಗುತ್ತಿತ್ತು. ತಾವು ಗಸ್ತನ್ನು ತೀವ್ರಗೊಳಿಸಬೇಕು, ಸಂಶಯಿತರನ್ನು ತಪಾಸಣೆಗೆ ಒಳಪಡಿಸಿ, ರೌಡಿಗಳ ಪರೇಡ್ ಮಾಡಬೇಕು ಎಂದು ಸುತ್ತೋಲೆ ಕಳಿಸುತ್ತಿದ್ದರು. ಹೊಸ ಸರಕಾರ ಬಂದ ಬಳಿಕ ಪೊಲೀಸ್ ಇಲಾಖೆಗೆ ಕ್ರಿಯಾಶೀಲವಾಗಲು ಒಂದೇ ಒಂದು ಸುತ್ತೋಲೆ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಡಿಜಿಪಿಗೆ ಗೃಹ ಸಚಿವರೇ ಸೂಚನೆ ಕೊಡುತ್ತಿಲ್ಲ ಎಂದಾದಾಗ ಡಿಜಿ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ಸಿನ ಕಚೇರಿಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಟೀಕಿಸಿದರು. ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಲು 3 ಕಾರಣಗಳು ಇರಬೇಕೆಂದು ಸುಪ್ರೀಂ ಕೋರ್ಟ್ ಬಹಳಷ್ಟು ಸಲ ಹೇಳಿದೆ. ಆರೋಪಿ ತಲೆ ಮರೆಸಿಕೊಳ್ಳುವ ವ್ಯಕ್ತಿ ಆಗಿದ್ದರೆ ಕೂಡಲೇ ಬಂಧಿಸಬೇಕು. ಆತ ಸಾಕ್ಷ್ಯ ನಾಶ ಮಾಡುವ ಅವಕಾಶಗಳಿದ್ದರೆ, ಇಲ್ಲವೇ ಫಿರ್ಯಾದಿದಾರ ಅಥವಾ ದೂರುದಾರನ ಮೇಲೆ ಪ್ರಭಾವ ಬೀರಿ ಆತನಿಗೆ ಅಪಾಯ ತಂದೊಡ್ಡುವ ಸ್ಥಿತಿ ಇದ್ದರೆ ಬಂಧಿಸಬೇಕು ಎಂದು ತಿಳಿಸಿದೆ ಎಂದು ಪಿ.ರಾಜೀವ್ ಅವರು ತಿಳಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಪ್ರಕರಣದಲ್ಲಿ ಅವರು ತಲೆ ಮರೆಸಿಕೊಳ್ಳುವುದು, ಸಾಕ್ಷ್ಯ ನಾಶ ಮಾಡುವುದು ಇರಲಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಅವರನ್ನು ಬಂಧಿಸುವ ಉದ್ದೇಶದಿಂದ 70 ಜನ ಪೊಲೀಸರನ್ನು ಈ ಸರಕಾರ ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು.
ಹರೀಶ್ ಪೂಂಜ ಅವರು ಹಿಂದೆ ಬೇರೊಬ್ಬರು ಪ್ರತಿಭಟನಾ ಭಾಷಣದಲ್ಲಿ ಯಾವ ರೀತಿ ಉಲ್ಲೇಖಿಸಿದ್ದರು ಎಂದುದನ್ನು ಭಾಗಶಃ ಇಟ್ಟುಕೊಂಡು ಸುಳ್ಳು ಆರೋಪವನ್ನು ಅಥವಾ ತಪ್ಪು ಅಭಿಪ್ರಾಯ ಸೃಷ್ಟಿಸಲು ಷಡ್ಯಂತ್ರ ಮಾಡಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಅಪರಾಧದ ಉದ್ದೇಶ ಇರಲಿಲ್ಲ. ಈ ರೀತಿ ಕೆಲಸ ಮಾಡುವ ಈ ಸರಕಾರವು ಸುಧಾಕರ್ ಅವರ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಾಗಿದ್ದರೂ ಅವರನ್ನು ಬಂಧಿಸಲಿಲ್ಲ. ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಮಾರಣಾಂತಿಕವಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಬೆಳಗಾವಿಯ ಪೃಥ್ವಿ ಎಂಬವರು ದೂರು ದಾಖಲಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿದರು.
BJP P Rajeev slams Congress, says karnataka police stations have become congress hubs. Home minister parameshwar is one of the most unfit ministers India has seen he added.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am