ಬ್ರೇಕಿಂಗ್ ನ್ಯೂಸ್
10-05-24 02:32 pm HK News Desk ಕರ್ನಾಟಕ
ಗಂಗಾವತಿ, ಮೇ.10: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದು ಕೇಂದ್ರ ಸರಕಾರವಲ್ಲ. ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಹಿಂದೂಗಳ ಟ್ರಸ್ಟ್ ಕಡೆಯಿಂದ ನಿರ್ಮಿಸಿರುವುದು. ಅಯೋಧ್ಯೆ ರಾಮ ಮಂದಿರ ಕೆಡವುತ್ತೇನೆ ಎನ್ನುವುದು ಸರ್ವೋಚ್ಚ ನ್ಯಾಯಲಯದ ಆದೇಶವನ್ನು ಉಲ್ಲಂಘಿಸಿದಂತೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಗಂಗಾವತಿಯ ಜಯನಗರದಲ್ಲಿ ಸತ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಅಯೋಧ್ಯೆ ರಾಮ ಮಂದಿರ ಕೆಡವುತ್ತೇನೆ ಎನ್ನುವುದು ಸರ್ವೋಚ್ಚ ನ್ಯಾಯಲಯದ ಆದೇಶ ಉಲ್ಲಂಘಿಸಿದಂತೆ. ಅದನ್ನು ಯಾರೇ ಹೇಳಲಿ, ಅದು ಸುಪ್ರೀಂ ಕೋರ್ಟ್ ಉಲ್ಲಂಘನೆ ಎಂದರು.
ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ನಡೆಸುತ್ತಿರುವ ಹಿಂದು ದೇವಾಲಯಗಳನ್ನು ಆಯಾ ಪ್ರದೇಶಗಳಲ್ಲಿ ಇರುವ ಹಿಂದೂಗಳಿಗೆ ನಿರ್ವಹಣೆ ಹಾಗೂ ಆಡಳಿತದ ಹೊಣೆ ನೀಡಬೇಕು ಎಂದವರು ಆಗ್ರಹಿಸಿದರು. ದೇಶದಲ್ಲಿರುವ ಬಹುತೇಕ ಪ್ರಾರ್ಥನಾ ಮಂದಿರಗಳನ್ನು ಆಯಾ ಸಮುದಾಯಗಳಿಗೆ ಆಡಳಿತದ ಹೊಣೆ ನೀಡಲಾಗಿದೆ. ಆದರೆ, ಹಿಂದೂಗಳ ದೇವಾಲಯಗಳ ಆಡಳಿತವನ್ನು ಮಾತ್ರ ಧಾರ್ಮಿಕ ದತ್ತಿ ಇಲಾಖೆ ಮೂಲಕ ಸರಕಾರ ನಿಯಂತ್ರಣ ಮಾಡುತ್ತಿದೆ. ಇದು ಸರಿಯಾದ ನಿಯಮವಲ್ಲ. ಆಯಾ ಧರ್ಮದ ವ್ಯಾಪ್ತಿಗೆ ಒಳಪಡುವ ದೇವಾಲಯಗಳನ್ನು ಅವರದೇ ಆಡಳಿತಕ್ಕೆ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸರಕಾರ ಎಲ್ಲಿಯೂ ಈ ಆದೇಶವನ್ನು ಜಾರಿಗೆ ತರುತ್ತಿಲ್ಲ. ಇದು ತಕ್ಷಣದಿಂದ ಜಾರಿಗೆ ಬರಬೇಕು. ಅಷ್ಟೇ ಅಲ್ಲದೆ, ಹಿಂದೂಗಳ ಸಂಖ್ಯೆ ಕುಸಿಯುತ್ತಿದ್ದು ಇದರ ಬಗ್ಗೆ ಯೋಚನೆ ಮಾಡಬೇಕಾಗಿದೆ. ದೇಶದಲ್ಲಿ ಸಮಾನ ನಾಗರಿಕ ಕಾಯಿದೆ ಜಾರಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಷ್ಟು ಬೇಗನೆ ಈ ಮಸೂದೆ ಮಂಡನೆಯಾಗಿ ಜಾರಿಗೆ ಬರಬೇಕು ಎಂದರು.
ಶತಮಾನಗಳಿಂದ ಕಂಡಿದ್ದ ಮಂದಿರ ನಿರ್ಮಾಣದ ಕನಸು ಸದ್ಯ ನನಸಾಗಿದೆ. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಮಂದಿರ ನಿರ್ಮಾಣ ಮಾಡಿದ್ದು, ದೊಡ್ಡ ಕಾರ್ಯವಲ್ಲ. ಅದನ್ನು ಸೂರ್ಯ ಚಂದ್ರರು ಇರುವವರೆಗೂ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಮಂದಿರದ ಮೇಲೆ ಯಾವುದೇ ರೀತಿ ದಾಳಿಯಾಗದಂತೆ, ಮಂದಿರಕ್ಕೆ ಧಕ್ಕೆಯಾಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯ, ಅದರಲ್ಲೂ ಪ್ರತಿಯೊಬ್ಬ ಹಿಂದೂವಿನ ಕೆಲಸವಾಗಿದೆ. ಹಿಂದುಗಳು ಹಿಂದುಗಳಾಗಿಯೇ ಉಳಿದರಷ್ಟೇ ಈ ಮಂದಿರ ಉಳಿಯುತ್ತದೆ ಎಂದು ಸ್ವಾಮೀಜಿ ಹೇಳಿದರು.
It was not the central government that built the Ram temple in Ayodhya. Constructed by the Hindu Trust as per the order of the Supreme Court. Vishwaprasanna Theertha Swamiji of Pejawar Mutt, Udupi, said that the demolition of ram temple in Ayodhya is a violation of the Supreme Court's order.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm