ಬ್ರೇಕಿಂಗ್ ನ್ಯೂಸ್
23-04-24 10:46 pm HK News Desk ಕರ್ನಾಟಕ
ಚಿತ್ರದುರ್ಗ, ಏ 23: ದೇಶದ ಅತಿ ದೊಡ್ಡ ನಾಯಕ ನೈತಿಕತೆಯನ್ನು ತೊರೆದು ಜನರ ಮುಂದೆ ನಾಟಕವಾಡುತ್ತಿದ್ದಾರೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ. ಸತ್ಯದ ಹಾದಿಯಲ್ಲಿ ನಡೆಯೋದು ಹಿಂದೂ ಧರ್ಮದ ಪರಂಪರೆ. ಶ್ರೀರಾಮ, ಗಾಂಧೀಜಿ, ಇತರೆ ಪ್ರಧಾನಿಗಳು ಸೇವಾಭಾವದಿಂದ ನಡೆದರು. ಆದರೆ ಮೋದಿ ಸರ್ಕಾರದಲ್ಲಿ ಕೇವಲ ಸುಳ್ಳಿನ ಕಂತೆಯೇ ಇದೆ ಎಂದು ಕಿಡಿಕಾರಿದರು.



ಪ್ರಧಾನಿ ತಪ್ಪು ದಾರಿಯಲ್ಲಿ ನಡೆದು, ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಾರೆ. ನೂರಾರು ಕೋಟಿ ರೂ. ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಬಿಟ್ಟು ಜನರ ಭಾವನೆ ಕೆರಳಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಹೇಳಿದರು.
ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಅವರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿಸುತ್ತಾರೆ ಮತ್ತು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗಟ್ಟುವ ಮೂಲಕ ದುರ್ಬಲಗೊಳಿಸುವ ಯತ್ನ ನಡೆಸಿದರು ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.
ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್ಗಳ ಯೋಜನೆ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕಿ, ದಾಳಿಗೊಳಗಾದ ಕಂಪನಿಗಳು ಬಿಜೆಪಿಗೆ ನೂರಾರು ಕೋಟಿ ರೂ. ದೇಣಿಗೆ ನೀಡಿವೆ ಮತ್ತು ನಂತರ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ. ನೋಟು ಅಮಾನ್ಯೀಕರಣದ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಿ ಬಿಜೆಪಿ ಖಾತೆಗೆ ಜಮಾ ಮಾಡಿದ್ದು ಹೇಗೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಎಸ್ಸಿ ಎಸ್ಟಿಗಳಿಗೆ ಪ್ರತ್ಯೇಕ ಬಜೆಟ್ ಮಂಡನೆ ;
ಇದೇ ವೇಳೆ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್ಸಿ ಎಸ್ಟಿ ವರ್ಗಗಳಿಗೆ ವಿಶೇಷ ಬಜೆಟ್ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಘೋಷಿಸಿದರು. ಸಂವಿಧಾನ ಬದಲಾವಣೆ ಮಾಡಿ 50%ಕ್ಕಿಂತಲೂ ಹೆಚ್ಚು ತಿದ್ದುಪಡಿ ಮಾಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಆಶ್ವಾಸನೆ ನೀಡಿದರು.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕೊಡಲಾಗುತ್ತದೆ ಎಂದು ತಿಳಿಸಿದ ಅವರು, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದಾಗ ಜಿಎಸ್ಟಿ ರದ್ದುಗೊಳಿಸಲಾಗುವುದು. ಕೃಷಿಗಾಗಿ ಹೊಸ ನೀತಿ ಮಾಡಲಾಗುತ್ತದೆ. ರೈತರಿಗೆ ನೇರವಾಗಿ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು
Congress General Secretary Priyanka Gandhi Vadra on Tuesday targeted Prime Minister Narendra Modi, alleging that "the biggest leader of the country has given up morality, does drama before people and does not walk on the path of truth."
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm