ಬ್ರೇಕಿಂಗ್ ನ್ಯೂಸ್
17-04-24 10:14 pm Bangalore Correspondent ಕರ್ನಾಟಕ
ಬೆಂಗಳೂರು, ಎ.17: ಲೋಕಸಭಾ ಚುನಾವಣೆ ಮುಕ್ತಾಯಗೊಂಡ 15 ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದು ಡಿಕೆ ಶಿವಕುಮಾರ್ ಕರ್ನಾಟಕದ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಕಷ್ಟು ಪ್ಲ್ಯಾನ್ ಹಾಕಿದ್ದಾರೆ. ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಮಗಳನ್ನ ಗೆಲ್ಲಿಸಿಕೊಟ್ಟರೆ ಶಿವಾನಂದ ಪಾಟೀಲ್ ನನ್ನ ಜೊತೆಗಿರ್ತಾರೆ. ನಾನು ಅವರು ಸೇರಿ ಸಿದ್ದರಾಮಯ್ಯ ಅವರನ್ನ ಇಳಿಸೋಕೆ ಕಾರ್ಯತಂತ್ರ ಮಾಡಿದ್ದೇವೆ ಎನ್ನುವ ಸಂದೇಶವನ್ನ ಜನರಿಗೆ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಒಬ್ಬ ಸ್ವಾಮಿಜಿ ಜೊತೆಗೆ ಮಾತನಾಡಿ ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯನವರನ್ನು ಇಳಿಸಲು ನಮಗೆ ಲಿಂಗಾಯತರು ಸಪೋರ್ಟ್ ಮಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾದ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದು ಚುನಾವಣೆ ಮುಗಿದ 15 ದಿನದಲ್ಲೇ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಲಿಂಗಾಯತರು, ಒಕ್ಕಲಿಗರು ಒಂದು ಎಂಬ ಸಂದೇಶ ಕೊಡಲು ಒಬ್ಬ ಸ್ವಾಮೀಜಿ ಪ್ರಯತ್ನ ಮಾಡಿದ್ದಾರೆ.
ಅದಕ್ಕೆ ಶಿವಾನಂದ ಪಾಟೀಲ ಅವರ ಮಗಳನ್ನು ಗೆಲ್ಲಿಸಿದರೆ, ಶಿವಾನಂದ ಪಾಟೀಲ ಹಾಗೂ ನಾನು ಸೇರಿ ಎಲ್ಲ ಸಿದ್ದರಾಮಯ್ಯನವರನ್ನು ಇಳಿಸುವ ಕಾರ್ಯತಂತ್ರ ಮಾಡಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ ಯತ್ನಾಳ್, ಕಾಂಗ್ರೆಸ್ ಇನ್ನು ಒಡೆದು ಹೋಗಿ ಹೊಸ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯನವರಿಗೆ ಒಂದು ಕಿವಿಮಾತು ಹೇಳುತ್ತೇನೆ. ನೀವು ಡಿ.ಕೆ ಶಿವಕುಮಾರ್ ಪರವಾದ ಅಭ್ಯರ್ಥಿ ಗಳನ್ನು ಸೋಲಿಸದಿದ್ದರೆ ನಿಮ್ಮ ಮುಖ್ಯಮಂತ್ರಿ ಹುದ್ದೆ ಹೋಗುವದು ಗ್ಯಾರಂಟಿ. ಐದು ಗ್ಯಾರಂಟಿಗಳ ಜೊತೆಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಹೋಗುವುದು ಇದೊಂದು ಗ್ಯಾರಂಟಿ ಎಂದರು. ಬಾಗಲಕೋಟೆಯಲ್ಲಿ ಶಿವಾನಂದ ಪಾಟೀಲ, ಧಾರವಾಡದಲ್ಲಿ ಕೆಲವರು, ಬೆಳಗಾವಿ ಲೋಕಸಭಾ ಅಭ್ಯರ್ಥಿ ಡಿಕೆಶಿ ಬೆಂಬಲಿಗರು ಇದ್ದಾರೆ. ಅವರನ್ನು ನೀವು ಸೋಲಿಸಲೇ ಬೇಕು. ಇರದಿದ್ದರೆ ನಿಮ್ಮ ಸಿಎಂ ಹುದ್ದೆ ಹೋಗುವದು ಗ್ಯಾರಂಟಿ ಎಂದರು ಯತ್ನಾಳ.
ದೇಶಕ್ಕೆ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಪರ್ಯಾಯ ನಾಯಕ ಇಲ್ಲ ಎಂಬುದು ಜನರಿಗೆ ತಿಳಿದಿದೆ. ಪ್ರತಿಯೊಬ್ಬರ ತಲೆಯಲ್ಲಿ ಮೋದಿ ಮತ್ತು ಬಿಜೆಪಿ ಇದೆ. ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಮೊದಲು ತಲೆಯಿಂದ ಜಾತಿ ಕಿತ್ತೊಗೆಯಿರಿ. ಮೋದಿಯವರು ಬಂದರೆ ಸನಾತನ ಧರ್ಮ ಉಳಿಯುತ್ತದೆ. ನಮ್ಮ ಜಾತಿಗಳು ಇರುತ್ತವೆ. ಎಲ್ಲ ಸಮುದಾಯದವರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂದರು.
Bjp MLA Basavanagouda Yatnal has said that DK Shivakumar will be the new Chief Minister of Karnataka within 15 days of the conclusion of the Lok Sabha elections.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm