ಬ್ರೇಕಿಂಗ್ ನ್ಯೂಸ್
05-04-24 04:24 pm HK News Desk ಕರ್ನಾಟಕ
ತೀರ್ಥಹಳ್ಳಿ, ಏ 05: ಅಂಬುತೀರ್ಥ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಚುನಾವಣೆಯ ಪ್ರವಾಸ ಆರಂಭ ಮಾಡಿದ್ದೇನೆ. ಈ ಬಾರಿ ಅನ್ಯಾಯವಾಗಿರುವ ಹಿಂದುತ್ವವಾದಿಗಳ ಪರ ನೀವು ಹೋರಾಟ ಮಾಡುತ್ತಿದ್ದೀರಾ ನಿಮ್ಮ ಜೊತೆ ನಾವಿದ್ದೇವೆ ಎಂದು ಹಳ್ಳಿಯ ಜನರು ಕೂಡ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಹೇಳಿದರು.
ಶುಕ್ರವಾರ ತೀರ್ಥಹಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಸಂದರ್ಭದಲ್ಲಿ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಒಂದೇ ಕುಟುಂಬದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಅದರ ವಿರುದ್ಧವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮೋದಿ ಹಾಗೂ ಅಮಿತ್ ಶಾ ಹೇಳುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಸಂಸ್ಕೃತಿಯಲ್ಲಿದೆ.
ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಪಕ್ಷ ಇರುವುದನ್ನು ವಿರೋಧ ಮಾಡಿದ್ದಕ್ಕೆ ಇಡೀ ಕರ್ನಾಟಕದ ಜನತೆ ಮೆಚ್ಚಿ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಸ್ಪರ್ಧೆ ಮಾಡಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಮೋದಿ ಹಾಗೂ ಅಮಿತ್ ಶಾ ಅವರಿಗೆ ಕರ್ನಾಟಕದ ಕುಟುಂಬ ರಾಜಕಾರಣವನ್ನು ಎದುರಿಸುವ ಸಮರ್ಥ್ಯವಿದೆ. ಆದರೆ ಅವರಿಗೆ ಇವರು ಭ್ರಮೆ ತುಂಬಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪನವರೆ ಲಿಂಗಾಯತ ನಾಯಕರು, ಅವರೇ ಜನರ ನಾಯಕರು, ಅವ್ರ ಕುಟುಂಬವನ್ನು ಬಿಟ್ಟರೆ ಬೇರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಭ್ರಮೆ ಹುಟ್ಟಿಸಿರುವುದರಿಂದ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದರು.
ನಿಮ್ಮ ಸ್ಪರ್ಧೆಯಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲವೇ ಎಂಬ ಪ್ರೆಶ್ನೆಗೆ ಬರಿ ಸೀಟ್ ಗೆದ್ದು ವಿರೋಧ ಪಕ್ಷದಲ್ಲಿ ಕೂರುವುದಲ್ಲ. ಈ ಪಕ್ಷದ ವಿಚಾರ ಸಿದ್ದಾಂತದ ಬಗ್ಗೆ ಆಗಲಿ, ಈಗ ರಾಜ್ಯದಲ್ಲಿ ನೋವಿನಿಂದ ಪಕ್ಷವನ್ನು ಕಾರ್ಯಕರ್ತರು ಕಟ್ಟುತ್ತಿದ್ದಾರೆ. ಸಂತೃಪ್ತಿಯಿಂದ ಪಕ್ಷವನ್ನು ಕಟ್ಟಬೇಕು. ಹಿಂದೆ ಉತ್ತರ ಪ್ರದೇಶದಲ್ಲಿ ಮುನ್ಸಿಪಲ್ ಚುನಾವಣೆಯಲ್ಲಿ ಗೆದ್ದರೂ ಕೂಡ ಇಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡುತ್ತಿದ್ದೆವು. ಅಧಿಕಾರ ಪಡೆಯಬೇಕು ನಿಜ ಆದರೆ ಸಿದ್ಧಾಂತವನ್ನು ಬಿಟ್ಟು ಅಲ್ಲ ಎಂದರು.
ಬಿಜೆಪಿಯ ಹಿರಿಯರು ತಿರಸ್ಕಾರ ಮಾಡಿದ್ದಾರಾ ಎಂಬ ಪ್ರಶ್ನೆಗೆ, ಅವರು ಕರೆದಿದ್ದರು, ನಾನು ಹೋಗಿದ್ದೆ, ಅವರು ಬುದ್ಧಿವಂತಿಕೆಯಿಂದ ನನ್ನನ್ನು ವಾಪಸ್ ಕಳಿಸಿದ್ದಾರೆ. ಚುನಾವಣೆಯಲ್ಲಿ ನಿಂತು ಗೆದ್ದು ಪುನಃ ಅವರ ಬಳಿ ಹೋಗುತ್ತೇನೆ. ಅವಮಾನ ಎಂದು ನಾನು ಭಾವಿಸುವುದಿಲ್ಲ. ದೊಡ್ಡವರು ಕರೆದಾಗ ಹೋಗಲಿಲ್ಲ ಎಂದರೆ ನನಗೆ ಸೊಕ್ಕು ಎನ್ನುತ್ತಾರೆ. ನನ್ನನ್ನು ಬೆಳೆಸಿರುವವರೆ ಅವರು. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಬಂದಿದ್ದರು ಅವರಿಗೆ ಚುನಾವಣೆಗೆ ಯಾಕೆ ನಿಲ್ಲುತ್ತೇನೆ ಎಂದು ತಿಳಿಸಿದ್ದೇನೆ ಎಂದರು. ಇ.ಡಿ. ದಾಳಿ ನಡೆಯಬಹುದಾ ಎಂಬ ಪ್ರಶ್ನೆಗೆ, ನನ್ನ ಹತ್ತಿರ ಇದ್ದರೆ ತಾನೇ ಸಿಗುವುದಕ್ಕೆ, ಅವರು ಮಾಡಿ ಜೈಲಿಗೆ ಹೋಗಿ ಬಂದರು. ನನ್ನ ಹತ್ತಿರ ಆ ರೀತಿ ಏನು ಇಲ್ಲ ಯಾವನಿಗೆ ತಾಕತ್ತಿದೆ ಬರಲಿ ನೋಡೋಣ ಎಂದರು.
ಗೀತಾ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ಇಬ್ಬರನ್ನು ಸೋಲಿಸುತ್ತೇನೆ. ಹೊಂದಾಣಿಕೆ ರಾಜಕಾರಣ ಹೇಗೆ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲೆಯ ಜನ ಬಲಿಯಾಗಲ್ಲ. ಸಿದ್ಧಾಂತದ ವಿಚಾರದಲ್ಲಿ ಹಿಂದುತ್ವದ ವಿಚಾರದಲ್ಲಿ ಸ್ಪರ್ಧೆ ಮಾಡಿರುವ ಈಶ್ವರಪ್ಪನವರಿಗೆ ಖಂಡಿತವಾಗಿ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದ ಈಶ್ವರಪ್ಪನವರ ಸ್ಪರ್ಧೆ ನಾಮಕಾವಸ್ಥೆ ಎಂಬ ಮಾತಿಗೆ ಉತ್ತರಿಸಿದ ಅವರು ಈ ಕ್ಷೇತ್ರದಲ್ಲಿ ಮರಳು ಮಾಫಿಯಾ ಎಷ್ಟು ನಡೆಯುತ್ತಿದೆ ಎಂದು ನನಗೆ ಮೊನ್ನೆ ಮೊನ್ನೆ ಗೊತ್ತಾಯಿತು. ಬಹಳ ಹಿರಿಯರು ನನಗೆ ಈ ವಿಷಯ ತಿಳಿಸಿದರು. ಜ್ಞಾನೇಂದ್ರರ ಕಣ್ಣಿಗೆ ಬಿದ್ದಿಲ್ಲವೇ? ಅವನ ರೋಲ್ ಎಷ್ಟು ಇದೆ ನನಗೆ ಗೊತ್ತಿಲ್ಲ, ಎಂ.ಪಿ ರೋಲ್ ಬಹಳ ಇದೆ ಎಂದು ಹೇಳುತ್ತಾರೆ. ನನಗೆ ಅದು ಕ್ಲಿಯರ್ ಇಲ್ಲ. ಈ ಚುನಾವಣೆ ಮುಗಿಯುತ್ತಿದ್ದಂತೆ ನಾಮಕಾವಸ್ತೆ ಯಾರು ಎಂದು ಜನ ತೋರಿಸುತ್ತಾರೆ. ಚುನಾವಣೆಯಲ್ಲಿ ಗೆದ್ದು ಈ ಮರಳು ಮಾಫಿಯಾವನ್ನು ಮಟ್ಟ ಹಾಕುತ್ತೇನೆ ಎಂದು ಶಪಥ ಮಾಡಿದರು.
ನಾನು ಬೆಳಸಿದ ಹುಡುಗನೇ ಜ್ಞಾನೇಂದ್ರ, ನಮ್ಮ ಮನೆಯಲ್ಲೇ ಇದ್ದವನು, ಡಿಗ್ರಿ ಓದಿದ್ದು ನಮ್ಮ ಮನೆಯಲ್ಲೇ, ವೈಯಕ್ತಿಕವಾಗಿ ನಾನು ಅವನ ಬಗ್ಗೆ ಟೀಕೆ ಮಾಡುತ್ತಿಲ್ಲ. ಒಬ್ಬ ಎಂಎಲ್ಎ ಆದವನ ಡ್ಯೂಟಿ ಇದು, ಮರಳು ಮಾಫಿಯ ಆಗುತ್ತಿರುವ ಸಮಯದಲ್ಲಿ ಯಾಕೆ ಸುಮ್ಮನೆ ಕೂತಿದ್ದಾರೆ. ಹಿಂದುತ್ವಕ್ಕೆ ತೀರ್ಥಹಳ್ಳಿಯಲ್ಲಿ ಹೆಚ್ಚಿನ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆಸುತ್ತೇನೆ ಎಂದರು.
Eshwarappa slams Modi and amith sha says they think BJP can't win without Yediyurappa family, I will show them this time by winning the elections he added
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm