Sadhguru, Delhi Hospital: ಇಶಾ ಫೌಂಡೇಶನ್‌ನ ಸದ್ಗುರುಗೆ  ಮೆದಳಿನಲ್ಲಿ ರಕ್ತಸ್ರಾವ ; ತುರ್ತು ಬ್ರೇನ್ ಸರ್ಜರಿ

20-03-24 09:16 pm       Bangalore Correspondent   ಕರ್ನಾಟಕ

ಆಧ್ಯಾತ್ಮಿಕ ಗುರು, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ತೀವ್ರ ತಲೆ ನೋವು ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೈದ್ಯರು ತುರ್ತು ಮೆದಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬೆಂಗಳೂರು, ಮಾ 20: ಆಧ್ಯಾತ್ಮಿಕ ಗುರು, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ತೀವ್ರ ತಲೆ ನೋವು ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೈದ್ಯರು ತುರ್ತು ಮೆದಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಮಾರ್ಚ್‌ 20 ಬೆಳಿಗ್ಗೆ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಸದ್ಗುರು ಆರೋಗ್ಯ ಚೇತರಿಕೆ ಕಾಣುತ್ತಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

They Tried To Find Something, But Couldn't,' Jokes Sadguru From Hospital  Bed After Emergency Brain Surgery

ಶಿವರಾತ್ರಿ ಉತ್ಸವದ ಕಳೆದ ಕೆಲ ದಿನಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಆಸ್ಪತ್ರೆ ವೈದ್ಯರ ಸಂಪರ್ಕ ಮಾಡಿದ್ದರು. ಆದರೆ, ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುವುದಕ್ಕೆ ಹಿಂದೇಟು ಹಾಕಿದ್ದರು. ಆ ಬಳಿಕ ಎಡಗಾಲು ಸೆಳೆತ ಸೇರಿದಂತೆ ತಲೆ ನೋವು ಮತ್ತಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆ ಸಿಟಿ ಮತ್ತು ಎಂಐಆರ್‌ ಸ್ಕ್ಯಾನ್‌ ಮಾಡಿದಾಗ ಮೆದಳಿನಲ್ಲಿ ರಕ್ತ ಸ್ರಾವವಾಗಿದೆ ಜೊತೆಗೆ ಮೆದುಳಿನಲ್ಲಿ ಊತವಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆ ದಾಖಲಾದ ಸದ್ಗುರುವಿನ ತಪಾಸಣೆ ನಡೆಸಿದ ವೈದ್ಯರು ತುರ್ತು ಮೆದುಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ

Sadhguru undergoes emergency brain surgery at Apollo Delhi, overcomes  'life-threatening situation' (WATCH)

ಸದ್ಗುರುಗಳಿಗೆ ಕರೆ ಮಾಡಿ ಪ್ರಧಾನಿ ಮೋದಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿಗಳು ಟ್ವೀಟ್‌ ಮಾಡಿದ್ದು, " ಸದ್ಗುರುಗಳ ಜತೆ ಕರೆ ಮಾಡಿ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಸಿಗಲಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ " ಎಂದಿದ್ದಾರೆ.

ಇನ್ನು ಸದ್ಗುರು ಆಸ್ಪತ್ರೆ ದಾಖಲು ಮಾಹಿತಿ ಹೊರಬೀಳುತ್ತಿದ್ದಂತೆ ದೇಶ ವಿದೇಶದಲ್ಲಿರುವ ಸದ್ಗುರು ಅನುಯಾಯಿಗಳು, ಶಿಷ್ಯರು, ಬೆಂಬಲಿಗರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

Sadhguru Jaggi Vasudev underwent surgery at a Delhi hospital for a life-threatening brain bleed, his Isha Foundation said in a statement. He is recovering well, and improving "beyond expectations", it added.