ಬ್ರೇಕಿಂಗ್ ನ್ಯೂಸ್
05-03-24 02:20 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.5: ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ತೀವ್ರಗೊಂಡಿರುವಾಗಲೇ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಏಳು ರಾಜ್ಯಗಳ 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೈಲಿನಲ್ಲಿರುವ ಶಂಕಿತ ಲಷ್ಕರ್ ತೊಯ್ಬಾ ಸಂಘಟನೆಗೆ ಸೇರಿದ ಉಗ್ರ ತಡಿಯಂದವಿಡೆ ನಸೀರ್, ತನ್ನಲ್ಲಿ ಬರುತ್ತಿದ್ದ ಯುವಕರನ್ನು ಬ್ರೇನ್ ವಾಶ್ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ದಾಳಿ ಕಾರ್ಯಾಚರಣೆ ಮಾಡಿದ್ದಾಗಿ ಮೇಲ್ನೋಟಕ್ಕೆ ತಿಳಿದುಬಂದ ಮಾಹಿತಿ. ಕೇಂದ್ರೀಯ ಗುಪ್ತಚರ ಮಾಹಿತಿ ಆಧರಿಸಿ, 2023ರ ಜುಲೈ ತಿಂಗಳಲ್ಲಿ ಬೆಂಗಳೂರು ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದರು. 2008ರ ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಲಷ್ಕರ್ ಶಂಕಿತ ಉಗ್ರ ಕೇರಳ ಮೂಲದ ತಡಿಯಂದವಿಡೆ ನಸೀರ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದ. ಜೈಲಿನಲ್ಲಿದ್ದುಕೊಂಡೇ ಹೊರಗಿನಿಂದ ಬರುತ್ತಿದ್ದ ಯುವಕರಿಗೆ ವಿಧ್ವಂಸಕ ಕೃತ್ಯಕ್ಕೆ ಪ್ರೇರಣೆ, ಸಂಚು ಮಾಡುತ್ತಿದ್ದ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ತಡಿಯಂದವಿಡೆ ನಸೀರ್, 2009ರಲ್ಲಿ ಅರೆಸ್ಟ್ ಆಗಿದ್ದ. ನಿಷೇಧಿತ ಸಿಮಿ ಸಂಘಟನೆಯ ಸದಸ್ಯನೂ ಆಗಿದ್ದ ನಸೀರ್, 2007ರಲ್ಲಿ ಕೇರಳದ ವಾಗ್ಮೋನ್ ಎಂಬಲ್ಲಿ ಉಗ್ರವಾದಿ ತರಬೇತಿ ನೀಡಿದ್ದ ಪ್ರಕರಣದಲ್ಲಿ ಕೋರ್ಟ್ 2018ರಲ್ಲಿ ಏಳು ವರ್ಷಗಳ ಶಿಕ್ಷೆ ನೀಡಿತ್ತು. ಬಂಧಿತರಲ್ಲಿ ಸಿಕ್ಕಿದ್ದ ತಾಂತ್ರಿಕ ಸಾಕ್ಷ್ಯಗಳು ವಿದೇಶದಿಂದ ಹಣಕಾಸು ರವಾನೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಮಾಹಿತಿಗಳನ್ನು ನೀಡಿದ್ದವು. 2019ರಲ್ಲಿ ಬಂಧಿತನಾಗಿದ್ದ ಜುನೈದ್ ಅಹ್ಮದ್ ಕೂಡ, ನಸೀರ್ ಪ್ರೇರಣೆಯಿಂದಲೇ ಕೃತ್ಯ ನಡೆಸಿರುವುದು ತಿಳಿದುಬಂದಿತ್ತು.
ಇದೀಗ ರಾಮೇಶ್ವರ ಕೆಫೆ ಬಾಂಬ್ ಸ್ಫೋಟದ ಹಿಂದೆ ಉಗ್ರವಾದಿ ಕೃತ್ಯದ ಶಂಕೆ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಬೆಂಗಳೂರಿನ ಪೊಲೀಸರು ಹತ್ತು ತಂಡಗಳಲ್ಲಾಗಿ ತನಿಖೆ ನಡೆಸುತ್ತಿದ್ದರೆ, ಎನ್ಐಎ ಅಧಿಕಾರಿಗಳು ತಮ್ಮದೇ ಆದ ಮೂಲಗಳನ್ನು ಅನುಸರಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಫೋಟ ಕೃತ್ಯ ಮಂಗಳೂರಿನ ಕುಕ್ಕರ್ ಬಾಂಬ್ ಘಟನೆಗೆ ಸಾಮ್ಯತೆ ಹೊಂದಿರುವುದರಿಂದ ಬೆಂಗಳೂರಿನ ಜೈಲಿನಲ್ಲಿರುವ ಮೊಹಮ್ಮದ್ ಶಾರೀಕ್, ಮಾಝ್ ಮುನೀರ್ ಅವರನ್ನು ಭೇಟಿಯಾದ ಯುವಕರ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಎನ್ಐಎ ದಾಳಿ ಸಂದರ್ಭದಲ್ಲಿ ಯಾವೆಲ್ಲ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ ಅಥವಾ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎನ್ನುವುದು ತಿಳಿದುಬಂದಿಲ್ಲ.
Rameshwaram cafe blast, NIA Raids 17 locations in India over prison radicalisation case to find connections. The National Investigation Agency (NIA) on Tuesday carried out raids at 17 locations in seven states in connection with its probe into the Bengaluru prison radicalisation case, people familiar with the development said. In January, the National Investigation Agency (NIA) had filed a charge-sheet against eight people in the case. The charge-sheeted accused included T. Naseer of Kerala's Kannur, who is serving life sentence in the central prison in Bengaluru since 2013, and Junaid Ahmed alias "JD" and Salman Khan, who are suspected to have fled abroad.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
12-09-25 11:32 am
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm