MLA Vedavyas Kamath, Assembly, congress: ಹುಚ್ಚ ಅವನು, ಎತ್ತಿಕೊಂಡು ಹೊರಗೆ ಹಾಕ್ರೀ... ಶಾಸಕ ವೇದವ್ಯಾಸ್ ಕಾಮತ್ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ, ಸದನದಲ್ಲಿ ಗದ್ದಲ

20-02-24 10:52 pm       Bangalore Correspondent   ಕರ್ನಾಟಕ

ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ಅನುದಾನ ತಾರತಮ್ಯ ಮಾಡ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ಕೊಡುತ್ತಿದ್ದಾಗ, ಎದ್ದು ನಿಂತು ವಿರೋಧಿಸಿದ್ದಕ್ಕೆ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಕಾಂಗ್ರೆಸ್ ಶಾಸಕರು ಹುಚ್ಚ ಎಂದು ರೇಗಿಸಿದ ಘಟನೆ ನಡೆದಿದೆ.

ಬೆಂಗಳೂರು, ಫೆ.20: ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ಅನುದಾನ ತಾರತಮ್ಯ ಮಾಡ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ಕೊಡುತ್ತಿದ್ದಾಗ, ಎದ್ದು ನಿಂತು ವಿರೋಧಿಸಿದ್ದಕ್ಕೆ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಕಾಂಗ್ರೆಸ್ ಶಾಸಕರು ಹುಚ್ಚ ಎಂದು ರೇಗಿಸಿದ ಘಟನೆ ನಡೆದಿದೆ.

ಫುಡ್ ಕಾರ್ಪೊರೇಶನ್ ಕಡೆಯಿಂದ ನಾವು ಅಕ್ಕಿ ಕೇಳಿದ್ದೆವು. ಅದರ ಮ್ಯಾನೇಜರ್ ಓಕೆಯೆಂದು ಹೇಳಿದ್ದೂ ಆಗಿತ್ತು. ಆದರೆ ಕೇಂದ್ರ ಸರಕಾರದವರು ರಾಜಕೀಯ ಕಾರಣಕ್ಕೆ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ವಿರೋಧಿಸಿದ ವಿಪಕ್ಷ ನಾಯಕ ಅಶೋಕ್, ನೀವು ಗ್ಯಾರಂಟಿ ಘೋಷಣೆ ಮಾಡಿದಾಗ ಕೇಂದ್ರವನ್ನು ಕೇಳಿದ್ರಾ.. ಆನಂತರ ಕೇಂದ್ರ ಅಕ್ಕಿ ಕೊಡಲಿಲ್ಲ ಎಂದರೆ ಹೇಗೆ. ಅಕ್ಕಿಯನ್ನು ಮ್ಯಾನೇಜರ್ ಕೊಡೋದಾ ಎಂದು ಛೇಡಿಸಿದರು.

ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಆಹಾರ ಭದ್ರತಾ ನಿಗಮ ಅನ್ನೋದು ಸ್ವತಂತ್ರ ಸಂಸ್ಥೆ ಎಂದು ಹೇಳಲು ಹೊರಟಾಗ ಎದ್ದು ನಿಂತ ವೇದವ್ಯಾಸ ಕಾಮತ್, ಸ್ವತಂತ್ರ ಸಂಸ್ಥೆಯಲ್ಲ. ಕೇಂದ್ರಕ್ಕೆ ಅಧಿಕಾರ ಇದೆಯೆಂದು ಹೇಳಲು ಹೊರಟರು. ಕಾಂಗ್ರೆಸ್ ಶಾಸಕರು ಅದಕ್ಕೆ ವಿರೋಧಿಸಿ ಗದ್ದಲ ಎಬ್ಬಿಸಿದ್ದಾರೆ. ಏಯ್ ಹುಚ್ಚಾ ಅವನು. ಹೊರಗೆ ಹಾಕಿ ಎಂದು ಕೂಗಿದ್ದಾರೆ. ಇದರಿಂದ ಕುಪಿತರಾದ ವೇದವ್ಯಾಸ್ ಅವರನ್ನು ಖಾದರ್ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹುಚ್ಚ ನೀವು ಎಂದು ವೇದವ್ಯಾಸ್ ಹೇಳಿದ್ದಕ್ಕೆ ಖಾದರ್ ಗರಂ ಆಗಿದ್ದು ನೀವೊಮ್ಮೆ ಕೂತ್ಕೊಳ್ಳಿ ಮಾರ್ರೆ, ಸರಿಯಾಗಿ ತಿಳಿದುಕೊಳ್ಳದೆ ಮಾತಾಡಬೇಡಿ ಎಂದಿದ್ದಾರೆ.

ಇದನ್ನು ಕೇಳಿದ ಆಡಳಿತ ಪಕ್ಷದ ಸದಸ್ಯರು, ವೇದವ್ಯಾಸ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷ ಪೀಠಕ್ಕೆ ಗೌರವ ಕೊಡಬೇಕಲ್ಲ. ಹುಚ್ಚ ಅಂತಾನೆ, ಅವನನ್ನು ಎತ್ತಿ ಹೊರಗೆ ಹಾಕ್ರೀ ಎಂದು ಗದ್ದಲ ಎಬ್ಬಿಸಿದ್ದಾರೆ. ಮುಖ್ಯಮಂತ್ರಿ ಮಾತಾಡೋವಾಗ ನಡುವೆ ಬಾಯಿ ಹಾಕ್ತಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹುಚ್ಚ ಅವನು ಎಂದು ಹೇಳಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

MLA Vedavyas Kamath is mad, put him out, congress leaders assembly video goes viral. Congress leaders call him fool openly in the assembly