ಬ್ರೇಕಿಂಗ್ ನ್ಯೂಸ್
20-02-24 10:02 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.20: ರಾಜ್ಯ ಬಿಜೆಪಿ ನಾಯಕರು ಮೋದಿ ನಾಮಬಲದ ಭರವಸೆಯಲ್ಲಿ 28ಕ್ಕೆ 28 ಸ್ಥಾನ ಖಚಿತ ಎಂದು ಹೇಳಿಕೊಳ್ಳುತ್ತಿರುವಾಗಲೇ ರಾಜ್ಯದಲ್ಲಿ 9ರಿಂದ 11 ಕಡೆ ಗೆಲುವು ಕಷ್ಟ ಇದೆಯೆಂಬ ಮಾಹಿತಿ ಆಂತರಿಕ ಸರ್ವೆಯಲ್ಲಿ ಸಿಕ್ಕಿದೆಯಂತೆ. ಹೀಗಾಗಿ ಅಭ್ಯರ್ಥಿ ಬದಲಾವಣೆ, ಜಾತಿ ಲೆಕ್ಕಾಚಾರದ ಜೊತೆಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ವರ್ಚಸ್ಸಿನ ಮುಂದೆ ಮತಗಳನ್ನು ಬಾಚಿಕೊಳ್ಳಲು ಬಿಜೆಪಿ ಹೊಸ ತಂತ್ರಕ್ಕಾಗಿ ತಲೆಕೆಡಿಸಿಕೊಂಡಿದೆ.
ಆಂತರಿಕ ಲೆಕ್ಕಾಚಾರದ ಪ್ರಕಾರ, ಈ ಬಾರಿ ಬಿಜೆಪಿಗೆ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾವೇರಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಠಿಣ ಪರಿಸ್ಥಿತಿ ಇದೆ. ಇದು ಅಪಾಯದ ದೃಷ್ಟಿಯಲ್ಲಿ ಎ ಪಟ್ಟಿಯಲ್ಲಿರುವ 8 ಕ್ಷೇತ್ರಗಳಾಗಿದ್ದರೆ, ಚಿತ್ರದುರ್ಗ, ಬೆಂಗಳೂರು ಕೇಂದ್ರ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳನ್ನು ಕಷ್ಟದ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಒಟ್ಟು 11 ಕ್ಷೇತ್ರಗಳನ್ನು ಭರವಸೆ ಇಡಲಾಗದ ಸ್ಥಿತಿಯಲ್ಲಿ ಬಿಜೆಪಿ ಇದೆ.
ಕೆಲವು ಮೂಲಗಳ ಪ್ರಕಾರ, ಮಂಡ್ಯ ಸೇರಿದಂತೆ 9ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಠಿಣ ಸ್ಪರ್ಧೆ ಎದುರಾಗಬಹುದು. ದಿನ ಕಳೆದಂತೆ ಈ ನೇರಾನೇರ ಹಣಾಹಣಿಯ ಕಣಗಳ ಸಂಖ್ಯೆ 11 ಆದರೂ ಅಚ್ಚರಿ ಇಲ್ಲ. ಹೀಗಾಗಿ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುವ ಹುಮ್ಮಸ್ಸು ಬಿಜೆಪಿ ನಾಯಕರಲ್ಲಿ ಹೊರಗಡೆ ಇದ್ದರೂ, ಒಳಗಡೆ ಅಳುಕಿನಲ್ಲಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇದ್ದರೂ, ಸಿದ್ದರಾಮಯ್ಯ ವರ್ಚಸ್ಸಿನ ಮುಂದೆ ಮತಗಳನ್ನು ಬಾಚಿಕೊಳ್ಳುವ ಹುಮ್ಮಸ್ಸು ಪಕ್ಷದ ನಾಯಕರಲ್ಲಿ ಇಲ್ಲ. ಮಂಡ್ಯದಲ್ಲಿ ಸುಮಲತಾ ಬದಲು ಎಚ್ಡಿಕೆ ಅಭ್ಯರ್ಥಿ ಆಗಬೇಕೆಂದು ಎರಡೂ ಪಕ್ಷದ ನಾಯಕರಲ್ಲಿ ಇದ್ದರೂ, ಸ್ವತಃ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಲು ಮನಸ್ಸು ಹೊಂದಿಲ್ಲ. ಹೀಗಾಗಿ ಅಲ್ಲಿನ ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ಆಗಿಲ್ಲ.
ವಿರೋಧಿ ಅಲೆ ಇದ್ದವರಿಗಿಲ್ಲ ಟಿಕೆಟ್
ಉಳಿದಂತೆ, 2-3 ಬಾರಿ ಗೆದ್ದರೂ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳದವರನ್ನು ಬದಲಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿರುವ ಅನಂತ ಕುಮಾರ್ ಹೆಗಡೆ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದರೂ, ಪಕ್ಷದ ಬಲವರ್ಧನೆಗೆ ಕೊಡುಗೆ ನೀಡಿಲ್ಲ, ನಾಲ್ಕು ವರ್ಷಗಳಿಂದ ಪಕ್ಷದ ಚಟುವಟಿಕೆಯಿಂದಲೇ ದೂರ ಇದ್ದ ಕಾರಣಕ್ಕೆ ಪಕ್ಷದ ನಾಯಕರು ಮುನಿಸು ಹೊಂದಿದ್ದಾರೆ. ಉಡುಪಿ ಮತ್ತು ಮಂಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರ ಕಡೆಯಿಂದಲೇ ಅಭ್ಯರ್ಥಿ ಬದಲಾವಣೆಗೆ ಒತ್ತಡ ಬಂದಿದ್ದರಿಂದ ಆ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದಾರೆ. ತುಮಕೂರು, ಚಿಕ್ಕಬಳ್ಳಾಪುರ, ಹಾವೇರಿ, ಬೆಂಗಳೂರು ಉತ್ತರ, ಚಾಮರಾಜನಗರ ಕ್ಷೇತ್ರದಲ್ಲಿ ಅಲ್ಲಿನ ಸಂಸದರೇ ಮತ್ತೆ ಸ್ಪರ್ಧಿಸಲ್ಲ ಎಂದಿದ್ದಾರೆ. ಹೀಗಾಗಿ ಪರ್ಯಾಯ ಅಭ್ಯರ್ಥಿಗಳನ್ನು ರಾಜ್ಯ ನಾಯಕರು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ವಿರೋಧಿ ಅಲೆ ಎದುರಿಸುತ್ತಿರುವ ಬಳ್ಳಾರಿ, ವಿಜಯಪುರ, ದಾವಣಗೆರೆ, ಕೊಪ್ಪಳ, ತುಮಕೂರು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಕೈಸುಟ್ಟುಕೊಳ್ಳದಂತೆ ನಿಗಾ ವಹಿಸಲು ಚಿಂತಿಸುತ್ತಿದ್ದಾರೆ.
ಬಳ್ಳಾರಿ ಕ್ಷೇತ್ರದಲ್ಲಿ ದೇವೇಂದ್ರಪ್ಪ ಬದಲು ರಾಮುಲು ಕಣಕ್ಕಿಳಿಸಲು ತಯಾರಿ ನಡೆದಿದೆ. ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ ಬದಲು ಗೋವಿಂದ ಕಾರಜೋಳ ಅವರನ್ನು ತರಲು ಚಿಂತನೆ ಇದೆ. ತುಮಕೂರಿನಲ್ಲಿ ಸೋಮಣ್ಣ ಪ್ರಬಲ ಆಕಾಂಕ್ಷಿಯಾಗಿದ್ದರೆ, ಯಡಿಯೂರಪ್ಪ ಬಣದಲ್ಲಿರುವ ಮಾಧುಸ್ವಾಮಿಯೂ ಕದ ತಟ್ಟುತ್ತಿದ್ದಾರೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಮತ್ತೊಬ್ಬ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ಇದೆ. ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ ಬದಲು ಸೊಸೆ ಶ್ರದ್ಧಾ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ. ದಾವಣಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ವಯಸ್ಸಿನ ಕಾರಣಕ್ಕೆ ಬದಲಿಸಬೇಕೆಂದು ಒತ್ತಡ ಕೇಳಿಬರುತ್ತಿದೆ. ಅಲ್ಲಿಯೂ ಮತ್ತೊಬ್ಬ ಪ್ರಬಲ ಲಿಂಗಾಯತ ಅಭ್ಯರ್ಥಿ ಬಿಜೆಪಿಗೆ ಇಲ್ಲ. ರೇಣುಕಾಚಾರ್ಯ ರೇಸಿನಲ್ಲಿದ್ದರೂ ಅವರಿಗೆ ಕೊಟ್ಟರೆ ಒಳೇಟು ಬೀಳಬಹುದೆಂಬ ಆತಂಕ ಇದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಸುಧಾಕರ್ ಆಕಾಂಕ್ಷಿಯಾಗಿದ್ದು ಬಹುತೇಕ ಸೀಟು ಗಿಟ್ಟಿಸುವ ಸಾಧ್ಯತೆಯಿದೆ. ಉಡುಪಿ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸಿನಲ್ಲಿ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾದರೆ ಗೆಲುವು ಕಷ್ಟ ಎಂಬ ಲೆಕ್ಕಾಚಾರ ಇದೆ. ದಕ್ಷಿಣ ಕನ್ನಡ ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿರುವುದರಿಂದ ಅಭ್ಯರ್ಥಿ ಬದಲಾವಣೆಯಿಂದ ಹೆಚ್ಚೇನೂ ಪ್ರಭಾವ ಆಗಲ್ಲ. ಈ ಕ್ಷೇತ್ರದಲ್ಲಿ ಮಾಜಿ ಸೇನಾನಿ ಕ್ಯಾ.ಬೃಜೇಶ್ ಚೌಟ ಹೆಸರು ಮುಂಚೂಣಿಯಲ್ಲಿದ್ದು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಕರಾವಳಿಯ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆ ಆಗುತ್ತಾ ಎನ್ನುವ ಕುತೂಹಲ ಇದೆ. ಬೀದರ್ ಕ್ಷೇತ್ರದಲ್ಲಿ ಭಗವಂತ ಖೂಬಾಗೆ ಸ್ಥಳೀಯವಾಗಿ ವಿರೋಧ ಇದ್ದರೂ, ಬದಲಿ ಅಭ್ಯರ್ಥಿ ಕಾಣಿಸದಿರುವುದು ಬದಲಾವಣೆ ಸದ್ಯಕ್ಕೆ ತೂಗುಗತ್ತಿಯಲ್ಲಿದೆ.
Even as state BJP leaders are claiming that they are confident of 28 out of 28 seats in the name of Prime Minister Narendra Modi, an internal survey has revealed that it is difficult to win nine to 11 seats in the state. Thus, the BJP is looking for a new strategy to garner votes in the face of candidate change, caste calculations and the image of the state government's guarantee scheme.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am