ಬ್ರೇಕಿಂಗ್ ನ್ಯೂಸ್
06-02-24 09:15 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 06: 'ಅವನ್ಯಾರು ಚಕ್ರವರ್ತಿ ಸೂಲಿಬೆಲೆನಾ ತಲೆಹರಟೆ, ಅವ್ನಗೇನ್ ಮಾನ ಮಾರ್ಯಾದೆ ಇದೆಯಾ..?' ಇದೇ ತಾನೆ ವಿಷ ಬೀಜ ಬಿತ್ತೋ ಕೆಲಸ..?' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡುವಾಗ ಶೀಕ್ಷಣ ಸಚಿವ ಮಧು ಬಂಗಾರಪ್ಪ, ಸೂಲಿಬೆಲೆ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆ ಮಾಡುವ ಉದ್ದೇಶದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲೂನ ಮಾಜ್ಗಾಗಿ ಪರೀಕ್ಷೆಯ ಸಮಯವೇ ಬದಲು ಮಾಡಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದೂರುಗಳು ಬಂದಿವೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, "ಅವನ್ಯಾರು ಚಕ್ರವರ್ತಿ ಸೂಲಿಬೆಲೆನಾ ತಲೆಹರಟೆ, ಅವ್ನಗೇನ್ ಮಾನ ಮಾರ್ಯಾದೆ ಇದೆಯಾ..?. ಪುಸ್ತಕದಲ್ಲಿ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ಬರೆದಿದ್ದರು, ನಾನು ಬಂದಾಗ ಅದಕ್ಕೆ ಹೇಳಿದ್ದು ಅದನ್ನು ಕಿತ್ತು ಬಿಸಾಡುತ್ತೇನೆ ಅಂತ. ಅದು ಕೂಡ ದೊಡ್ಡ ಚರ್ಚೆ ಮಾಡಿದ್ದರು. ಇಂಥದ್ದನ್ನು ಕಿತ್ತು ಬಿಸಾಕದೆ ಇನ್ನೇನು ಮಾಡೋದು? ಹೊಲಸನ್ನು ಮನೆಯಲ್ಲಿ ಇಟ್ಟುಕೊಳ್ತೀರಾ?"ಎಂದು ಸಚಿವರು ಪ್ರಶ್ನಿಸಿದ್ದಾರೆ.
ಅವ ಮತ್ತೆ ಮೊನ್ನೆ ಟ್ವೀಟ್ ಮಾಡಿದ್ದಾನೆ. ಮಾನ ಮರ್ಯಾದೆ ಇಲ್ಲ... ಹತ್ತನೆ ಕ್ಲಾಸ್ ಪರೀಕ್ಷೆ ದಿನ ಒಂಬತ್ತು ಗಂಟೆಗೆ ಮಾಡ್ತಿರಾ ಮಾರ್ಚ್ 1 ಕ್ಕೆ ಶುಕ್ರವಾರ ಯಾಕೆ
ಎರಡು ಗಂಟೆಗೆ... ವೈ ...? ನಮಾಜ್ಗಾ? ಅಂತ ಟ್ವಿಟ್ ಮಾಡಿದ್ದಾರೆ. ವಿಷ ಬೀಜ ಬಿತ್ತೋದು ಇಂತಹವರೆ ಅಲ್ವಾ? ದೂರುಗಳು ಬಂದಿವೆ. ಕಂಪ್ಲೈಂಟ್ಸ್ ಹೋಗುತ್ತಿವೆ ಅವರ ಮೇಲೆ" ಎಂದಿದ್ದಾರೆ
ಮಾರ್ಚ್ 1 ರಿಂದ ಸೆಕೆಂಡ್ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಅದೇ ಶಾಲೆಯಲ್ಲಿ ಬೆಳಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ ಇದೆ. ಮಧ್ಯಾಹ್ನಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯಿದೆ. ಪರೀಕ್ಷೆಯನ್ನು ಪುಶ್ ಮಾಡಿರೋದಷ್ಟೆ. ಇವರಿಗೆ ಒಂದು ಕಾಮನ್ ಸೆನ್ಸ್ ಇಲ್ವಲ್ಲ? ಇವರು ಒಂದು ಪಠ್ಯ ಪುಸ್ತಕ ಪರೀಷ್ಕರಣಗೆ ಅಧ್ಯಕ್ಷನೋ ಸುಡುಗಾಡೋ ಆಗಿದ್ದರು. ಮಾನ ಮರ್ಯಾದೆ ಇದೆಯಾ ಇವರಿಗೆ.. ಒಂದು ಕಡೆ ಕೆಲಸ ಮಾಡಿ ಎಲೆಕ್ಷನ್ ಬಂದ ತಕ್ಷಣ ತಲೆ ಎತ್ತುತ್ತವೆ. ಇದೆಲ್ಲಾ ಬಿಟ್ಟು ಬಿಡಿ ಬಿಜೆಪಿ. ಇವು ಯಾವುದು ನಡೆಯುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಇಡೀ ದೇಶದ ಬಗ್ಗೆ ನಾನು ಮಾತಾಡಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಭಾವನಾತ್ಮಕ ವಿಷಯ ಇಟ್ಟುಕೊಂಡು ಬಂದರೆ ನಡೆಯುವುದಿಲ್ಲ. ನೀವು ವಿಷಯಗಳನ್ನು ಭಾವನಾತ್ಮ ಮಾಡಿದಷ್ಟು ಈ ರಾಜ್ಯದ ಜನ ಮತ್ತಷ್ಟು ಶಿಕ್ಷೆ ಕೊಡ್ತಾರೆ. ಗ್ಯಾರಂಟಿ, ಓಟು, ನಂಬಿಕೆ, ವಿಶ್ವಾಸ ಉಳಿಸಿಕೊಂಡಿರೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ" ಎಂದು ವಿಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಎಸ್ಎಸ್ಎಲ್ಸಿಯ ಎಲ್ಲ ಪರೀಕ್ಷೆಗಳು ಬೆಳಗೆಗ ಒಂಬತ್ತು ಗಂಟೆಗೆ ನಡೆಸಲಾಗುತ್ತಿದೆ. ಆದರೆ, ಮಾರ್ಚ್ ಒಂದರಂದು ಮಾತ್ರ ಒಂದು ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಅವತ್ತು ಶುಕ್ರವಾರ. ಅಂದೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಕೂಡ ಆರಂಭವಾಗಲಿವೆ. ಹಾಗಾಗಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಪುಶ್ ಮಾಡಲಾಗಿದೆ.
ಆದರೆ, ವಿಷಯ ತಿಳಿಯದೇ ನಮಾಜಿಗೋಸ್ಕರ ಪರೀಕ್ಷಾ ಸಮಯವನ್ನೇ ಬದಲಾಯಿಸಲಾಗಿದೆಯೇ ಅಂತ ಚಕ್ರವರ್ತಿ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ. ಈ ಟ್ವೀಟನ್ನು ಉಲ್ಲೇಖಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಅನ್ನು ಟೀಕಿಸಿದೆ.
Karnataka state 10th standard exam time table released. All the exams in the morning session but for Friday. Why?
— Chakravarty Sulibele (@astitvam) February 4, 2024
Oh.. time for Namaz? pic.twitter.com/zi5daLIoyr
Education minister Madhu Bangarappa slams Chakravarthy Sulibele, says he doesn't have shame for getting religion in SNCC exam time table. Chakravarthy Sulibele posted why there is a change of timings on Friday for students to write the exam of SSCL, asking is it for namaz
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am