ಬ್ರೇಕಿಂಗ್ ನ್ಯೂಸ್
28-01-24 04:23 pm HK News Desk ಕರ್ನಾಟಕ
ಮಂಡ್ಯ, ಜ.28: ಹನುಮ ಧ್ವಜ ತೆರವು ವಿಚಾರದಲ್ಲಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ವಿವಾದ ಭುಗಿಲೆದ್ದಿದ್ದು ಹಿಂದು ಸಂಘಟನೆ ಕಾರ್ಯಕರ್ತರು ಉದ್ವಿಗ್ನಗೊಂಡು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ವಿರೋಧ ಮಧ್ಯೆಯೇ ವಿವಾದಿತ ಜಾಗದಲ್ಲಿದ್ದ ಹನುಮ ಧ್ವಜ ತೆರವುಗೊಳಿಸಿ ಅದೇ ಸ್ತಂಭದಲ್ಲಿ ರಾಷ್ಟ್ರ ಧ್ವಜ ಏರಿಸಲಾಗಿದೆ.
ಕೆರಗೋಡು ಗ್ರಾಪಂ ಆವರಣದಲ್ಲಿ ರಾಮ ಮಂದಿರ ಪ್ರತಿಷ್ಠೆ ನೆನಪಿನಲ್ಲಿ ಹಾಕಲಾಗಿದ್ದ ಹನುಮ ಧ್ವಜವನ್ನು ತೆರವು ಮಾಡಲು ನಿನ್ನೆ ರಾತ್ರಿ ಅಧಿಕಾರಿಗಳು ಮುಂದಾಗಿದ್ದರು. 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿದ್ದ ಕೇಸರಿ ಧ್ವಜ ತೆರವು ಮಾಡಲು ಅಧಿಕಾರಿಗಳು ಮುಂದಾಗುತ್ತಿದ್ದಂತೆ ರಾತ್ರೋರಾತ್ರಿ ಜನರು ಸೇರಿದ್ದರು. ಕೆಲವು ದಿನಗಳ ಹಿಂದೆ ಧ್ವಜ ತೆರವಿಗೆ ವಿರೋಧ ಕೇಳಿ ಬಂದಿದ್ದರಿಂದ ಧ್ವಜ ಹಾರಾಟದ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು 22 ಸದಸ್ಯರಲ್ಲಿ 20 ಮಂದಿ ಹನುಮ ಧ್ವಜ ಹಾರಾಟಕ್ಕೆ ಬೆಂಬಲಿಸಿದ್ದರು. ಬಹುಮತ ಪಡೆದು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಮಾಡಲಾಗಿತ್ತು.
ಆನಂತರ, ಹಿರಿಯ ಅಧಿಕಾರಿಗಳ ಸೂಚನೆಯಂತೆ ಧ್ವಜಸ್ಥಂಭ ತೆರವು ಮಾಡಲು ತಾ.ಪಂ ಇಓ ವೀಣಾ ಆಗಮಿಸಿದ್ದರು. ಸರ್ಕಾರಿ ಜಾಗದಲ್ಲಿ ಧ್ವಜಸ್ಥಂಭ ನಿರ್ಮಾಣ ಮಾಡಲಾಗಿದೆ ಎಂಬ ಕಾರಣವೊಡ್ಡಿ ಧ್ವಜ ತೆರವಿಗೆ ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದರು. ನಿನ್ನೆ ರಾತ್ರಿ ದಿಢೀರ್ ಆಗಿ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ ಇಳಿಸಲು ಯತ್ನಿಸಿದ್ದು ಮತ್ತೆ ಆಕ್ರೋಶ ಕಟ್ಟೆ ಒಡೆಯುವಂತೆ ಮಾಡಿದೆ. ಗ್ರಾಮದ ಮಹಿಳೆಯರು, ಯುವಕರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ. ಧ್ವಜ ಇಳಿಸಲು ಒಪ್ಪದ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಹಿಂದು ಸಂಘಟನೆ ಕಾರ್ಯಕರ್ತರನ್ನು ಎಳೆದಾಡಿದ್ದಾರೆ. ಕೊನೆಗೆ ಗ್ರಾಮಸ್ಥರನ್ನು ದೂರಕ್ಕೆ ಅಟ್ಟಿ ಬಲವಂತದಿಂದ ಧ್ವಜ ಕಂಬಕ್ಕೆ ಕಟ್ಟಿದ್ದ ಶ್ರೀರಾಮನ ಪ್ಲೆಕ್ಸ್ ಮತ್ತು ಕೇಸರಿ ಧ್ವಜವನ್ನು ತೆರವು ಮಾಡಿದ್ದಾರೆ. ಕೇಸರಿ ಧ್ವಜವನ್ನು ಎತ್ತಿಕೊಂಡು ಹೋದ ಪೊಲೀಸರ ಬಗ್ಗೆ ಮತ್ತೆ ಆಕ್ರೋಶ ಎದ್ದಿದ್ದು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ.
ಇದೇ ವೇಳೆ, ಉದ್ರಿಕ್ತರು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಷಡ್ಯಂತ್ರದಿಂದಲೇ ಹನುಮ ಧ್ವಜ ತೆರವು ಮಾಡಿದ್ದಾರೆ ಎಂದಿದ್ದಾರೆ. ಹಿಂದು ಸಂಘಟನೆ ಯುವಕರು ಪೊಲೀಸರ ಬ್ಯಾರಿಕೇಡ್ ನುಗ್ಗಿ ಬಂದಿದ್ದು ಕೆಲಹೊತ್ತು ತೀವ್ರ ಜಟಾಪಟಿ ನಡೆದಿದೆ. ಸ್ಥಳದಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದು ಉದ್ರಿಕ್ತರನ್ನು ಚದುರಿಸಲು ಮತ್ತೆ ಲಾಟಿ ಬೀಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕೆರಗೋಡು ಗ್ರಾಮಕ್ಕೆ ಬಿಜೆಪಿ ರಾಜ್ಯ ನಾಯಕರು ಆಗಮಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಅದೇ ಧ್ವಜ ಸ್ತಂಭದಲ್ಲಿ ಪೊಲೀಸ್ ಭದ್ರತೆಯಲ್ಲಿ ರಾಷ್ಟ್ರ ಧ್ವಜ ಏರಿಸಲಾಗಿದೆ.
ಇದೇ ವೇಳೆ, ತನ್ನ ಮೇಲೆ ಆರೋಪ ಬಂದ ಕಾರಣ ಸ್ಥಳೀಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಸ್ಪಷ್ಟನೆ ನೀಡಿದ್ದು , ಬಿಜೆಪಿ ಹಾಗೂ ಜೆಡಿಎಸ್ ನವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಸ್ಥಳದಲ್ಲೇ ಇಲ್ಲದವರ ಮೇಲೆ ತಪ್ಪು ಹೊರಿಸುತ್ತಿದ್ದಾರೆ. ಅದು ಸರ್ಕಾರಿ ಜಾಗ, ಅಲ್ಲಿ ಬಸ್ ಸ್ಟಾಂಡ್ ನಿರ್ಮಾಣ ಮಾಡಬೇಕಿದೆ. ಎರಡು ಕೋಟಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡಬೇಕು ಎಂದುಕೊಂಡಿದ್ದೇವೆ. ರಾಷ್ಟ್ರಧ್ವಜ ನೆಡುತ್ತೇವೆ ಎಂದು ಅನುಮತಿ ಪಡೆದು, ಕೆಸರಿ ಧ್ವಜ ಹಾಕಿದ್ದಾರೆ. ನಿಮಗೆ ಬೇರೆ ಕಾನೂನು ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ಯವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
A controversy erupted at Keragodu village in Mandya taluk over the removal of hanuman flag and activists of Hindu outfits staged a protest. The police resorted to lathicharge on the protesters who shouted slogans against the state government.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am