ಬ್ರೇಕಿಂಗ್ ನ್ಯೂಸ್
16-01-24 10:07 pm Bangalore Correspondent ಕರ್ನಾಟಕ
ಬೆಂಗಳೂರು, ಜ 16: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಕುರಿತ ಕನ್ನಡದ ಹಾಡೊಂದಕ್ಕೆ ತಲೆದೂಗಿದ್ದಾರೆ. ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಹಾಡಿರುವ 'ಪೂಜಿಸಲೆಂದೇ ಹೂಗಳ ತಂದೆ..' ಕನ್ನಡ ಹಾಡಿನ ಲಿಂಕ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೆಚ್ಚಿಕೊಂಡಿದ್ದಾರೆ.
ಯೂಟ್ಯೂಬ್ ಲಿಂಕ್ ಶೇರ್ ಮಾಡಿರುವ ಮೋದಿ, "ಶಿವಶ್ರೀ ಸ್ಕಂದ ಪ್ರಸಾದ್ ಅವರು ಹಾಡಿದ ಹಾಡು ಪ್ರಭು ಶ್ರೀರಾಮನ ಮೇಲಿನ ಭಕ್ತಿ ಭಾವವನ್ನು ಸುಂದರವಾಗಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ" ಎಂದಿದ್ದಾರೆ. ಇದರ ಜೊತೆಗೆ, #ShriRamBhajan ಎಂಬ ಹ್ಯಾಶ್ಟ್ಯಾಗ್ ಬಳಸಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದು, "ತುಂಬಾ ಧನ್ಯವಾದಗಳು ಸರ್. ಇದು ಕಲ್ಪನೆಗೂ ಮೀರಿದ ಗೌರವ. ನಿಮಗೆ ನನ್ನ ಪ್ರಣಾಮಗಳು" ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ. "ನನಗಿದು ತುಂಬಾ ಸಂತೋಷದ ಕ್ಷಣ. ನಾನೀಗ ಅನುಭವಿಸುತ್ತಿರುವ ಭಾವನೆಯನ್ನು ವರ್ಣಿಸಲು ಪದಗಳೇ ಇಲ್ಲ. ಮೈ ರೋಮಾಂಚನಗೊಳ್ಳುವ ಕ್ಷಣ. ಇದು ಭಗವಾನ್ ರಾಮನ ಆಶೀರ್ವಾದ. ನನ್ನ ಹಾಡಿಗೆ ಇಷ್ಟೊಂದು ಮನ್ನಣೆ ಸಿಗುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ" ಎಂದು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪೂಜಿಸಲೆಂದೇ ಹೂಗಳ ತಂದೆ, ದರುಶನ ಕೋರಿ ನಾ ನಿಂದೆ.. ತೆರೆಯೋ ಬಾಗಿಲನು ರಾಮ.." ಇದು ಮೂಲತಃ ಡಾ.ರಾಜ್ಕುಮಾರ್ ಹಾಗೂ ಮಿನುಗುತಾರೆ ಕಲ್ಪನಾ ಅಭಿನಯದ 'ಎರಡು ಕನಸು' ಸಿನಿಮಾದ ಹಾಡು. ದೊರೈ-ಭಗವಾನ್ ಜೋಡಿ ನಿರ್ದೇಶನದ ಈ ಸಿನಿಮಾ 1974ರಲ್ಲಿ ತೆರೆಕಂಡು, ಸಿನಿಪ್ರಿಯರ ಮನಸ್ಸುಗೆದ್ದಿತ್ತು. ಇಂದಿಗೂ ಈ ಹಾಡು ಮಾತ್ರವಲ್ಲ, ಸಿನಿಮಾ ಕೂಡ ಕನ್ನಡಿಗರ ಮನಸಲ್ಲಿ ಅಜರಾಮರವಾಗಿದೆ. ಚಿ.ಉದಯಶಂಕರ್ ಬರೆದಿದ್ದ ಸಾಹಿತ್ಯಕ್ಕೆ ರಾಜನ್ ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ಗಾನ ಸರಸ್ವತಿ ಎಸ್. ಜಾನಕಿ ಅದ್ಭುತವಾಗಿ ಹಾಡಿದ್ದರು. ಸಿನಿಮಾದಲ್ಲಿ ನಾಯಕಿ ಕಲ್ಪನಾ ಶ್ರೀರಾಮನ ಪೂಜೆಗೆಂದು ಹಾಡುವ ಈ ಹಾಡು ಇದೀಗ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ತಮ್ಮದೇ ಶೈಲಿಯಲ್ಲಿ ಹಾಡಿ, ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
This rendition by Sivasri Skandaprasad in Kannada beautifully highlights the spirit of devotion to Prabhu Shri Ram. Such efforts go a long way in preserving our rich cultural heritage. #ShriRamBhajanhttps://t.co/9wYmjhC4p5
— Narendra Modi (@narendramodi) January 16, 2024
A Kannada song from the 1974 Rajkumar starrer Eradu Kanasu was trending on social media platforms on Tuesday after Prime Minister Narendra Modi posted a video of Chennai-based vocalist Sivasri Skandaprasad singing it.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am