ನೂರು ವಂಶ ಹೋದರೂ ಅಯೋಧ್ಯೆಯ ಒಂದು ಕಲ್ಲು ಅಲ್ಲಾಡಿಸಲು ಆಗಲ್ಲ ; ಈ ನೆಲದ ಅನ್ನ ತಿಂದು ರಾಮನ ವಿರುದ್ಧ ಬೊಗಳುವುದನ್ನು ನಿಲ್ಲಿಸಿ 

14-01-24 07:08 pm       HK News Desk   ಕರ್ನಾಟಕ

ನೂರು ವಂಶಗಳು ಬಂದು ಹೋದರೂ ಅಯೋಧ್ಯೆಯ ಒಂದು ಕಲ್ಲು ಅಲ್ಲಾಡಿಸಲು ಯಾರಿಗೂ ಆಗಲ್ಲ. ಇಂಥ‌ ಸಮಯದಲ್ಲಿ ‌ಹಲವರು ಅಯೋಧ್ಯೆ ಸ್ಥಳದಲ್ಲಿ ಬಾಬ್ರಿ ಮಸೀದಿ ಕಟ್ಟುವ ಹೇಳಿಕೆ ನೀಡ್ತಿದ್ದಾರೆ.

ಬೆಳಗಾವಿ, ಜ.14:  ನೂರು ವಂಶಗಳು ಬಂದು ಹೋದರೂ ಅಯೋಧ್ಯೆಯ ಒಂದು ಕಲ್ಲು ಅಲ್ಲಾಡಿಸಲು ಯಾರಿಗೂ ಆಗಲ್ಲ. ಇಂಥ‌ ಸಮಯದಲ್ಲಿ ‌ಹಲವರು ಅಯೋಧ್ಯೆ ಸ್ಥಳದಲ್ಲಿ ಬಾಬ್ರಿ ಮಸೀದಿ ಕಟ್ಟುವ ಹೇಳಿಕೆ ನೀಡ್ತಿದ್ದಾರೆ. ಹೀಗೆ ಹೇಳಿಕೆ ನೀಡುವವರ ನಾಲಿಗೆ ಕತ್ತರಿಸುವ ತಾಕತ್ತು ನಮ್ಮಲ್ಲಿ ಇಲ್ಲದಾಗಿದೆ. ಹಾಗಾಗಿ ಸೊಕ್ಕಿನ ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಬೆಳಗಾವಿಯ ಹಿಂದೂ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಮುತಾಲಿಕ್ ಮಾತನಾಡಿದ್ದು ಅಯ್ಯೋದ್ಯೆಯಲ್ಲೇ ರಾಮಮಂದಿರ ನಿರ್ಮಾಣ ‌ಆಗ್ತಿದೆ. ಇಂಥ‌ ಸಮಯದಲ್ಲಿ ‌ಹಲವರು ಅಯೋಧ್ಯೆ ಸ್ಥಳದಲ್ಲಿ ಬಾಬ್ರಿ ಮಸೀದಿ ಕಟ್ಟುವ ಹೇಳಿಕೆ ನೀಡ್ತಿದ್ದಾರೆ. ಹೀಗೆ ಹೇಳಿದವರ ನಾಳಿಗೆ ಕತ್ತರಿಸುವ ತಾಕತ್ತು ನಮ್ಮಲ್ಲಿ ಇಲ್ಲದಾಗಿದೆ. ಈ ಕಾರಣಕ್ಕೆ ಹಲವರು ಈ ರೀತಿಯ ಸೊಕ್ಕಿನ ಹೇಳಿಕೆ ನೀಡುತ್ತಿದ್ದಾರೆ. 

ನೂರು ವಂಶ ಹೋದರೂ ಅಯೋದ್ಯೆಯ ಒಂದು ಕಲ್ಲು ಅಲ್ಲಾಡಿಸಲು ಆಗಲ್ಲ. ಈ ದೇಶದ ಅನ್ನ ತಿಂದು ಹೀಗೆ ಬೊಗಳುವುದನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಪರಿಣಾಮ ನೆಟ್ಟಗಿರಲ್ಲ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. 

ರಾಮಮಂದಿರ ಬಗ್ಗೆ ಸಿಎಂ ಸಿದ್ದರಾಮಯ್ಯ ಸಿಲ್ಲಿ ಹೇಳಿಕೆಗೆ ಮುತಾಲಿಕ್ ‌ಆಕ್ರೋಶ ವ್ಯಕ್ತಪಡಿಸಿದ್ದು ದೇಶದ ಹಲವು ಕಡೆ ರಾಮಮಂದಿರಗಳು ಇದ್ದವು. ಆದರೆ ಬಾಬರ್ ದೆಹಲಿಯಿಂದ ಅಯೋಧ್ಯೆಗೆ ಹೋಗಿ ರಾಮ ಮಂದಿರ ಧ್ವಂಸಗೊಳಿಸಿದ. ರಾಮನ ಜನ್ಮಭೂಮಿ ಅಯೋಧ್ಯೆ ಎಂಬ ಕಾರಣಕ್ಕೆ ಬಾಬರ್ ಈ ಮಂದಿರ ಧ್ವಂಸಗೊಳಿಸಿದ. ರಾಮಮಂದಿರ ಹಿಂದೂಗಳ ಸ್ವಾಭಿಮಾನ ಸಂಕೇತವಾಗಿತ್ತು, ಅದಕ್ಕೆ ಅಯೋಧ್ಯೆಯ ರಾಮಮಂದಿರ ಒಡೆಯಲಾಗಿತ್ತು. 

ಅಯೋಧ್ಯೆ ರಾಮನ ಜನ್ಮಸ್ಥಳ ಒಡೆದರೆ ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತೆ ಎಂದು ಬಾಬರ್‌ಗೆ ಗೊತ್ತಾಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮಹತ್ವ ಸಿದ್ದರಾಮಯ್ಯಗೆ ಗೊತ್ತಾಗ್ತಿಲ್ಲ. ರಾಮ ಕೇವಲ ಆರ್‌ಎಸ್‌ಎಸ್, ಬಿಜೆಪಿಗೆ ಸೀಮಿತನಲ್ಲ, ಈತ ನೂರು ಕೋಟಿ ಹಿಂದೂಗಳ ರಾಮ. ಆದರೆ ರಾಮಮಂದಿರ ಉದ್ಘಾಟನೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕಾರ ಮಾಡಿದೆ. ನಿಮ್ಮಂಥ‌ ಪಾಪಿಗಳು ಮತ್ತೊಬ್ಬರಿಲ್ಲ. ಬರುವ ದಿನಗಳಲ್ಲಿ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನೇ ಸಂಹಾರ‌ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಮುತಾಲಿಕ್ ಹರಿಹಾಯ್ದರು.

Even if 100 dynasties come and go, no one will be able to shake a stone in Ayodhya. At such a time, many people are making statements that the Babri Masjid will be built at the site of Ayodhya. We do not have the capacity to cut off the tongues of those who make such statements. Therefore, they are saying such arrogant things," Sri Ram Sene chief Pramod Muthalik said.