ಬ್ರೇಕಿಂಗ್ ನ್ಯೂಸ್
06-01-24 09:50 pm Bangalore Correspondent ಕರ್ನಾಟಕ
ಬೆಂಗಳೂರು, ಜ.6: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರರ ಮನವಿಯನ್ನು ಎರಡು ತಿಂಗಳೊಳಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.
ಶಕ್ತಿ ಯೋಜನೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸುವಂತೆ ಕೋರಿ ಕಾರ್ಕಳದ ಖಾಸಗಿ ಬಸ್ ಮಾಲೀಕ ಶರತ್ ಕುಮಾರ್ ಶೆಟ್ಟಿ ಎಂಬವರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಖಾಸಗಿ ಬಸ್ ನಿರ್ವಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಖಾಸಗಿ ಬಸ್ ಗಳಿಗೂ ಯೋಜನೆ ಅನ್ವಯವಾಗಬೇಕು. ಸರ್ಕಾರಿ ಬಸ್ಗಳಂತೆ ಮಹಿಳೆಯರ ಪ್ರಯಾಣ ವೆಚ್ಚವನ್ನು ಖಾಸಗಿ ಬಸ್ ಗಳಿಗೂ ಮರುಪಾವತಿ ಮಾಡಬೇಕು ಎಂದು ಶರತ್ ಅವರು ಹೈಕೋರ್ಟ್ಗೆ ಸಲ್ಲಿಸಿದ್ದರು.


ಈ ಬಗ್ಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ರಾಜ್ಯ ಸರ್ಕಾರ ಮತ್ತು ಆರ್ಟಿಒಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಉಚಿತ ಯೋಜನೆ ಜಾರಿ ಬಂದ ವೇಳೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ತಮಗೂ ಯೋಜನೆ ವಿಸ್ತರಿಸಲು ಆಗ್ರಹಿಸಿದ್ದರು.
The High Court of Karnataka on Friday directed the state government to consider, within two months, a plea by private transport firms to extend the Shakti Scheme offering free bus travel for women to their buses as well.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am