ಬ್ರೇಕಿಂಗ್ ನ್ಯೂಸ್
31-12-23 01:26 pm Bangalore Correspondent ಕರ್ನಾಟಕ
ಬೆಂಗಳೂರು, ಡಿ 31: 2024 ಅನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಸಂಪೂರ್ಣ ಸಜ್ಜಾಗಿದ್ದು, ಯುವಜನರಲ್ಲಿ ಉತ್ಸಾಹ ಹೆಚ್ಚಿದೆ. ಹೊಸ ವರ್ಷದ ಮೋಜು-ಮಸ್ತಿಗಾಗಿ ದೊಡ್ಡ ದೊಡ್ಡ ಹೋಟೆಲ್, ಪಬ್, ಕ್ಲಬ್ಗಳಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದು, ನ್ಯೂ ಇಯರ್ಗೆ ಕೌಂಟ್ಡೌನ್ ಶುರುವಾಗಿದೆ
ವಿಧಾನಸೌಧ, ಕೇಂದ್ರೀಯ ಗ್ರಂಥಾಲಯ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರ ಮಂಗಲ, ವೈಟ್ಫೀಲ್ಡ್, ಕಮ್ಮನಹಳ್ಳಿ, ಜಯ ನಗರ, ಬಿಟಿಎಂ ಲೇಔಟ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರಂಗೋಲಿ ಬಿಡಿಸಿದರೆ, ಖ್ಯಾತ ಕಟ್ಟಡಗಳನ್ನು ಕಲರ್ ಕಲರ್ ವಿದ್ಯುತ್ ದೀಪಗಳಿಂದ ಅಲಂಕರಿ ಸಲಾಗಿದೆ.
ಇನ್ನೂ ಪ್ರಸಿದ್ಧ ಹೋಟೆಲ್, ಮಾಲ್, ಪಬ್, ಅಪಾರ್ಟ್ಮೆಂಟ್ಗಳಲ್ಲಿಯೂ ಹೊಸ ವರ್ಷದ ಹುರುಪು ಜೋರಾಗಿದೆ. ಸ್ನೇಹಿ ತರು, ಕಪಲ್ಸ್, ಫ್ಯಾಮಿಲಿ, ಪ್ರೇಮಿಗಳು ಸೇರಿ ಎಲ್ಲರೂ ಒಂದೆಡೆ ಸೇರುವ ಮೂಲಕ ನೂತನ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ.
ಒರಾಯನ್, ಮಂತ್ರಿ, ಗೋಪಾಲನ್, ಗರುಡ ಸೇರಿ ನಗರದಲ್ಲಿನ ಎಲ್ಲಾ ಮಾಲ್ಗಳಲ್ಲಿ ಹೊಸ ವರ್ಷ ಸ್ವಾಗತಿಸಲು ಅದ್ದೂರಿ ಸಿದ್ಧತೆ ಮಾಡಿಕೊಂಡಿವೆ. ಮಾಲ್ ಹೊರಾಂಗಣವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದು, ಒಳಾಂಗಣವನ್ನು ಒಂದು ವಿಷಯಾಧಾರಿತ ವಿನ್ಯಾಸವನ್ನು ನಿರ್ಮಿಸುವ ಮೂಲಕ ಜನರನ್ನು ಆಕರ್ಷಿಸಲಾಗುತ್ತದೆ. ಅಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
7 ಸಾವಿರ ಪೊಲೀಸರ ನಿಯೋಜನೆ:
ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳ ಲಾಗಿದೆ. ಇಬ್ಬರು ಹೆಚ್ಚುವರಿ ಆಯುಕ್ತರು, ಒಬ್ಬ ಜಂಟಿ ಪೊಲೀಸ್ ಆಯುಕ್ತ, 20 ಡಿಸಿಪಿಗಳು, 50 ಮಂದಿ ಎಸಿಪಿಗಳು ಸೇರಿ 7 ಸಾವಿರ ಪೊಲೀಸ್ ಅಧಿಕಾರಿ- ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಮುಖವಾಗಿ ಕೇಂದ್ರ ವಲಯದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಹೆಚ್ಚಿನ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದು, ಈ ಭಾಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ 18 ಮಂದಿ ಮಹಿಳಾ ಸೇಫ್ಟಿ ಐಲ್ಯಾಂಡ್, 16 ವಾಚ್ ಟವರ್, 14 ಕೆಎಸ್ಆರ್ಪಿ ತುಕಡಿ, ಎರಡು ಮೊಬೈಲ್ ಕಮಾಂಡ್ ಸೆಂಟರ್ ಸ್ಥಳದಲ್ಲಿ ಇರಲಿವೆ. ಜತೆಗೆ 10ಕ್ಕೂ ಅಗ್ನಿಶಾಮಕ ಸಿಬ್ಬಂದಿ ಮತ್ತು ವಾಹನಗಳನ್ನು ಮುಂಜಾಗೃತಾ ಕ್ರಮವಾಗಿ ನಿಯೋಜಿಸಲಾಗಿದೆ
ಮಹಿಳೆಯರ ಸುರಕ್ಷತೆ ಹಾಗೂ ಅವರ ನೆರವಿಗೆ ಸುರಕ್ಷತಾ ಐ ಲ್ಯಾಂಡ್ಸ್ ತೆರೆದು ಮಹಿಳಾ ಪೊಲೀಸರನ್ನು ನಿಯೋಜಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿಮಹಿಳೆಯರು ನೆರವು ಪಡೆಯಬಹುದಾಗಿದೆ,'' ಎಂದು ಬಿ.ದಯಾನಂದ ಹೇಳಿದರು.
ಡ್ರೋನ್ ಹಾರಾಟ, ವಿಚಕ್ಷಣಾ ಗೋಪುರ!
ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಚೆಕಿಂಗ್ ಪಾಯಿಂಟ್ಗಳನ್ನು ನಿರ್ಮಿಸಲಾಗಿದೆ. ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ ಶ್ವಾನದಳ, ಸ್ಫೋಟಕ ವಸ್ತುಗಳ ತಪಾಸಣೆ ತಂಡಗಳು ಪರಿಶೀಲನೆ ನಡೆಸಲಿವೆ. ಜತೆಗೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಸಾಮೂಹಿಕ ಹೊಸ ವರ್ಷಾಚರಣೆ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ವೀಕ್ಷಣಾ ಗೋಪುರಗಳನ್ನೂ ನಿರ್ಮಿಸಲಿದ್ದು, ಪೊಲೀಸ್ ಸಿಬ್ಬಂದಿ ಬೈನಾಕುಲರ್ ಉಪಕರಣಗಳ ಮೂಲಕ ನಿಗಾ ಇಡಲಿದ್ದಾರೆ. ಅಲ್ಲದೆ, ಡ್ರೋನ್ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣಿಡಲಾಗುವುದು. ಮಫ್ತಿಯಲ್ಲೂ ಪೊಲೀಸರು ನಿಗಾ ಇಡಲಿದ್ದಾರೆ. ಜತೆಗೆ, ಬ್ರಿಗೇಡ್ ರಸ್ತೆಯಲ್ಲಿಏಕಮುಖ ನಡಿಗೆ ಪ್ರವೇಶಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗುಧಿತ್ತಧಿದೆ. ಪ್ರತಿಯೊಬ್ಬರು ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ( ಡಿಎಫ್ಎಂಡಿ) ಮೂಲಕವೇ ಹಾದು ಹೋಗಬೇಕು,'' ಎಂದು ಆಯುಕ್ತರು ವಿವರಿಸಿದರು.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಎಲ್ಲೆಡೆ ಸಾವಿರಾರು ಪೊಲೀಸರ ಭದ್ರತೆಗೆ ನಿಯೋಜಿಸಲಾಗಿದೆ. ಹಾಗೆಯೇ ಮಹಿಳೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಜತೆಗೆ ತಾತ್ಕಾಲಿಕವಾಗಿ ಟೋಯಿಂಗ್ ವಾಹನ ಬಳಸಲಾಗುತ್ತದೆ. ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು 112ಗೆ ಕರೆ ಮಾಡಬಹುದು - ಬಿ.ದಯಾನಂದ, ಪೊಲೀಸ್ ಆಯುಕ್ತರು.
Silicon City is all set to welcome 2024 with great enthusiasm among the youth. Special arrangements have been made in big hotels, pubs and clubs for the new year and the countdown for the new year has begun. Vidhana Soudha, Central Library, M.G. Road, Brigade Road, Church Street, Commercial Street, Koramangala, Whitefield, Kammanahalli, Jayanagar, BTM Layout and other major roads in the city have been decorated with colourful lights.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm