ಬ್ರೇಕಿಂಗ್ ನ್ಯೂಸ್
18-09-23 09:42 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.18: ರಾಜ್ಯದ ಏಕೈಕ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅನೂರ್ಜಿತ ಎಂದು ಘೋಷಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ತಡೆಯಾಜ್ಞೆ ನೀಡಿದೆ. ಆದರೆ ಪ್ರಜ್ವಲ್ ಅವರು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಬಹುದಾದರೂ ಸಂಸದರಾಗಿ ಮತ ಚಲಾಯಿಸಲು ಮತ್ತು ಯಾವುದೇ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪೀಠ ಹೇಳಿದೆ.
ಮುಂದಿನ ನಾಲ್ಕು ವಾರಗಳ ಅವಧಿಗೆ ಈ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಕೆಕೆ ವೇಣುಗೋಪಾಲ್ ಅವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಚುನಾವಣಾ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಹಾಗೂ ವಕೀಲ ಬಾಲಾಜಿ ಶ್ರೀನಿವಾಸನ್ ವಾದ ಮಂಡಿಸಿದರು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರಜ್ವಲ್ ಅವರ ಚುನಾವಣಾ ಅಫಿಡವಿಟ್ನಲ್ಲಿ ಅವರ ಆಸ್ತಿ ಸೇರಿದಂತೆ ಸಂಪೂರ್ಣ ಅಗತ್ಯವಿರುವ ವಿವರಗಳನ್ನು ಬಹಿರಂಗಪಡಿಸದ ಕಾರಣ 2019ರ ಚುನಾವಣೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿತ್ತು. ನ್ಯಾಯಮೂರ್ತಿ ಕೆ ನಟರಾಜನ್ ಅವರು ಅಂದಿನ ಬಿಜೆಪಿ ಅಭ್ಯರ್ಥಿ ಮತ್ತು ಈಗ ಜೆಡಿಎಸ್ ಶಾಸಕ ಎ ಮಂಜು ಮತ್ತು ಇನ್ನೊಬ್ಬರು ಸಲ್ಲಿಸಿದ್ದ ಚುನಾವಣಾ ಅರ್ಜಿಗಳ ಮೇಲೆ ತೀರ್ಪು ನೀಡಿದ್ದರು.
The Supreme Court on Monday stayed the Karnataka High Court's September 1 order declaring the election of lone JD(S) MP Prajwal Revanna from Hassan as null and void. A bench of Chief Justice D Y Chandrachud and Justices J B Pardiwala and Manoj Mishra, however, said Prajwal would not be entitled to cast his vote and receive any allowances as an MP, though he can participate in Parliament's proceedings.
06-03-26 12:08 pm
HK News Staffer
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ; ಮುಂದುವರೆ...
06-03-26 10:21 am
Bhatkal Petrol News: ಬೆಲೆ ಏರಿಕೆ ಭೀತಿ ; ಭಟ್ಕಳ...
05-03-26 11:42 pm
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
06-03-26 11:40 am
HK News Staffer
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
ಇರಾನಲ್ಲಿ 1230 ಜನರ ಸಾವು ; ಜೆರುಸಲೇಮ್ ಮೇಲೆ ಬಾಂಬ್...
05-03-26 08:51 pm
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
06-03-26 12:17 pm
supritha Jain
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ;...
05-03-26 07:38 pm
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm