ಬ್ರೇಕಿಂಗ್ ನ್ಯೂಸ್
10-07-23 02:14 pm HK News Desk ಕರ್ನಾಟಕ
ಹುಬ್ಬಳ್ಳಿ, ಜುಲೈ 10: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಮುಂದೆ ಈ ರೀತಿಯ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ತನಿಖೆಯನ್ನು ಪೊಲೀಸರು ಸಮರ್ಥವಾಗಿ ನಿರ್ವಹಿಸುತ್ತಿದ್ದು ಸಿಬಿಐಗೆ ನೀಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದದ ಅವರು, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ, ತಾರತಮ್ಯ ಮಾಡುವುದಿಲ್ಲ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕುಳಿತಿದ್ದಾರೆ. ಅವರ ಬೇಡಿಕೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
ಆರೋಪಿಗಳು ಪೊಲೀಸರ ವಶದಲ್ಲಿದ್ದು ತನಿಖೆ ಶುರುವಾಗಿದೆ. ಈ ಹಂತದಲ್ಲಿ ಪ್ರಕರಣವನ್ನು ಸಿಬಿಐಗೆ ನೀಡುವ ಅಗತ್ಯ ಇಲ್ಲ. ಗೃಹ ಇಲಾಖೆಯೇ ಸಮರ್ಥವಾಗಿದೆ. ತನಿಖೆ ಮುಗಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದರು.
ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ, ನಮ್ಮ ವಿರುದ್ಧ ಅಪವಾದ ಹೊರಿಸುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಅವರಲ್ಲಿ ಆಂತರಿಕ ಒಳ ಜಗಳ ಇದೆ. ಅವರಿಗೆ ಎಷ್ಟರ ಮಟ್ಟಿಗೆ ಜವಾಬ್ದಾರಿ ಇದೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.
After the murder of Sri Acharya Kamakumara Nandi, a Jain monk, Karnataka Home Minister Dr. G. Parameshwara on Monday said that the government will ensure that no such incidents happen again in the state. The opposition BJP not satisfied with the probe has decided to protest.
23-04-26 07:06 pm
Giridhar Shetty, Mangaluru
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದು...
23-04-26 01:07 pm
SSLC Results 2026: ಇಂದು ಮಧ್ಯಾಹ್ನ SSLC ಫಲಿತಾಂಶ...
23-04-26 10:54 am
ಪ್ರಧಾನಿ ಮೋದಿ ಒಬ್ಬ ಭಯೋತ್ಪಾದಕ ; ಮಲ್ಲಿಕಾರ್ಜುನ ಖರ...
21-04-26 09:02 pm
23-04-26 10:22 am
HK News Staffer
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
ರಾಹುಲ್ ದ್ವಿಪೌರತ್ವ ಪ್ರಕರಣ ; ವಿಚಾರಣೆಯಿಂದ ಹಿಂದೆ...
20-04-26 10:54 pm
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
23-04-26 04:43 pm
HK News Staffer
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
22-04-26 10:13 pm
HK News Staffer
ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ, ತಂದೆ- ಮಗಳಿದ್ದ...
22-04-26 08:41 pm
ಕ್ಷುಲ್ಲಕ ಕಾರಣಕ್ಕೆ ನೆರೆಕರೆ ಮನೆಯವರ ಬೀದಿ ಜಗಳ ; ತ...
22-04-26 04:02 pm
ಕೊಡಗಿನ ರೆಸಾರ್ಟಿನಲ್ಲಿ ಅಮೆರಿಕದ ಪ್ರವಾಸಿ ಮಹಿಳೆಯ ಅ...
22-04-26 02:15 pm
ಮಂಗಳೂರಿನಲ್ಲಿ ಗಾಳಿ, ಸಿಡಿಲಿನ ಆರ್ಭಟ ; ಒಂದೇ ಮಳೆಗೆ...
22-04-26 02:06 pm