ಬ್ರೇಕಿಂಗ್ ನ್ಯೂಸ್
24-06-23 08:20 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 23: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಅಮೆರಿಕಾ ತನ್ನ ರಾಯಭಾರಿ ಕಚೇರಿಯನ್ನು ಆರಂಭಿಸಲಿದೆ. ಪ್ರಧಾನಿ ಮೋದಿ ಅಮೆರಿಕಾಗೆ ಭೇಟಿ ನೀಡಿದ ಬೆನ್ನಲ್ಲೇ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಎರಡು ಹೊಸ ಕಾನ್ಸುಲೇಟ್ಗಳನ್ನು ತೆರೆಯಲಿದೆ. ಅದೇ ರೀತಿ ಭಾರತ ಸಿಯಾಟಲ್ನಲ್ಲಿ ಕಚೇರಿ ತೆರೆಯಲಿದ್ದು, ಜನರ ನಡುವಿನ ಬಾಂಧವ್ಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕವು ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 1,25,000 ವೀಸಾಗಳನ್ನು ನೀಡಿತ್ತು. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷ ಒಂದರಲ್ಲೇ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ಅತಿದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಿ ಭಾರತೀಯರು ಹೊರಹೊಮ್ಮಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಖ್ಯಾತಿಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ವೀಸಾ ಅರ್ಜಿಗಳಿಗಾಗಿ ಬೆಂಗಳೂರಿಗರು ಚೆನ್ನೈ ಮತ್ತು ಹೈದರಾಬಾದ್ಗೆ ಪ್ರಯಾಣಿಸಬೇಕಾಗಿತ್ತು. ಈ ಬೆಳವಣಿಗೆ ಕರ್ನಾಟಕದ ಐಟಿ ಮತ್ತು ಐಟಿಇಎಸ್ ಉದ್ಯಮಗಳು, ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕಾ ತನ್ನ ರಾಯಭಾರ ಕಚೇರಿ ಆರಂಭಿಸುವಂತೆ 2019ರ ಜುಲೈ 2 ರಂದು ಅಂದಿನ ರಾಜ್ಯ ಬಿಜೆಪಿ ವಕ್ತಾರ ಎ.ಎಚ್.ಆನಂದ್ ಅವರು ಅಂದಿನ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದ ಗೌಡ ಅವರಿಗೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ್ದರು.
ಈ ಪತ್ರವನ್ನು ಸದಾನಂದ ಗೌಡ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿದ್ದರು. ಇದಕ್ಕೆ ಜುಲೈ 31, 2019 ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸ್ಪಂದನೆ ನೀಡಿದ್ದರು. ಕಳೆದ ಮಾರ್ಚ್ನಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಮೆರಿಕದ ಪ್ರಭಾರ ರಾಯಭಾರಿ ಎಲಿಜಬೆತ್ ಜೋನ್ಸ್ ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಸ್ಥಾಪನೆ ಮಾಡುವಂತೆ ಪ್ರಸ್ತಾಪ ಮಾಡಿದ್ದರು.
The US will open two new consulates in Bengaluru and Ahmedabad while India will establish a mission in Seattle to boost people-to-people relationships, a senior White House official said on Thursday.The official said the US issued a record 125,000 visas to Indian students last year. Indian students are set to become the largest foreign student community in the United States with a 20 per cent increase last year alone, the senior administration official said.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 04:11 pm
HK News Desk
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
07-07-25 05:02 pm
Mangalore Correspondent
Mangalore Car Accident, Thumbe: ಹಳೆ ಸ್ವಿಫ್ಟ್...
05-07-25 05:16 pm
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
07-07-25 03:30 pm
Mangalore Correspondent
Moral policing, Puttur, Mangalore Crime: ನೀನು...
07-07-25 12:20 pm
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm